ಉಪೇಂದ್ರ ಮನೆಗೆ ಅಭಿಮಾನಿಗಳ ಅಕ್ಕರೆಯ ಮುತ್ತಿಗೆ

By Rajendra

ರಿಯಲ್ ಸ್ಟಾರ್ ಉಪೇಂದ್ರ ಮನೆಗೆ ಅಭಿಮಾನಿಗಳ ಮಹಾಪೂರವೇ ಹರಿದು ಬರುತ್ತಿದೆ. ಇದೆಲ್ಲಾ 'ಸೂಪರ್' ಚಿತ್ರದ ಆಫ್ಟರ್ ಎಫೆಕ್ಟ್! ಉಪ್ಪಿ ನಟಿಸಿ, ನಿರ್ದೇಶಿಸಿರುವ 'ಸೂಪರ್' ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಪೇಂದ್ರ ಅವರನ್ನು ಅಭಿನಂದಿಸಲು ರಾಜ್ಯದ ನಾನಾ ಮೂಲೆಗಳಿಂದ ಅವರ ಅಭಿಮಾನಿಗಳು ಸೀದಾ ಅವರ ಮನೆಗೆ ಮುತ್ತಿಗೆ ಹಾಕುತ್ತಿದ್ದಾರೆ.

ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರ ಸಂಭ್ರಮಕ್ಕೂ ಪಾರವೇ ಇಲ್ಲದಂತಾಗಿದೆ. ಅಭಿಮಾನಿಗಳ ಮೆಚ್ಚುಗೆ, ಸಂಭ್ರಮ ಉಪ್ಪಿಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಅವರು. ರಾಜ್ಯದ ಮೂಲೆ ಮೂಲೆಗಳಿಂದ ಉಪ್ಪಿ ಅಭಿಮಾನಿಗಳು ಮನೆಗೇ ಬರುತ್ತ್ತಿರುವುದೇನೋ ಸರಿ. ಆದರೆ ಒಮ್ಮೊಮ್ಮೆ ಅವರ ಅತಿಯಾದ ಅಭಿಮಾನಿಗಳ ಅತಿರೇಕವಾದದ್ದೂ ಉಂಟಂತೆ.

ಶಿವರಾಮಣ್ಣ ಎಂಬ ಒಬ್ಬ ಅಭಿಮಾನಿಯಂತೂ 8000 ಲಾಡು ಮಾಡಿಸಿ 'ಸೂಪರ್' ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಲ್ಲಿ ಉಚಿತವಾಗಿ ಹಂಚಿ ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ಉಪೇಂದ್ರ ರಾಜಕೀಯ ಧುಮುಕಿದರೆ ಅವರ ಅಪಾರ ಅಭಿಮಾನಿ ಬಳಗ ಉಪ್ಪಿ ಅಪ್ಪುತ್ತದೋ ಇಲ್ಲವೋ ಗೊತ್ತಿಲ್ಲ.

More from Filmibeat

English summary
Super, Upendra directorial venture after 10 years, receives a good response from the audience. The die-hard fans of Upendra visits his house and greet his success. One of them called Shivaramanna has made over 8000 laddus and distributed them across theatres screening Super.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X