»   »  ಕೆ.ಕೆ ಫಾರಂನಲ್ಲಿ ವಿಸ್ಮಯ ಪ್ರಣಯ!

ಕೆ.ಕೆ ಫಾರಂನಲ್ಲಿ ವಿಸ್ಮಯ ಪ್ರಣಯ!

Subscribe to Filmibeat Kannada

ರಾಜ್‌ಸಾಗರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ವಿಸ್ಮಯ ಪ್ರಣಯ' ಚಿತ್ರದ ಹಾಡು ಕನಕಪುರ ರಸ್ತೆಯಲ್ಲಿರುವ ಕೆ.ಕೆ.ಫಾರಂನಲ್ಲಿ ಚಿತ್ರೀಕರಣಗೊಂದಡಿದೆ. ರಾಂನಾರಾಯಣ್ ರಚನೆಯ 'ಒಂದೊಂದು ದಿವಸ ಕಾಯುತ್ತಿದೆ ಮನಸ - ಹೇಳಿಕೊಳ್ಳಲು ಈ ಹರುಷ' ಎಂಬ ಈ ಗೀತೆಯ ಚಿತ್ರೀಕರಣದಲ್ಲಿ ರಾಜ್‌ಸಾಗರ್, ಮಯೂರಿ, ಹೇಮಾಚೌಧರಿ, ಕಾವ್ಯಶ್ರೀ, ಮಿಮಿಕ್ರಿ ರಾಜ್‌ಗೋಪಾಲ್ ಹಾಗೂ ಅಪೂರ್ವ ಪಾಲ್ಗೊಂಡಿದ್ದರು.

ವಿಜಿ ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದ ಈ ಗೀತೆಯನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಡಿದ್ದಾರೆ. ನಾಯಕನಾಗಿ ನಟಿಸುತ್ತಿರುವ ರಾಜ್‌ಸಾಗರ್ ಚಿತ್ರಕ್ಕೆ ಕಥೆ ಬರೆದಿರುವುದಲ್ಲದೆ, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹದಿನೇಳು ವರ್ಷದ ಹಿಂದೆ 'ಮೌನ ಸಂಗ್ರಾಮ' ಚಿತ್ರವನ್ನು ನಿರ್ದೇಶಿಸಿದ್ದ ಮೋಹನ್ ಮಲ್ಲಪಳ್ಳಿ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ.

ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕೆ.ವಿಶ್ವನಾಥ್ ಸಂಗೀತ, ಮ್ಯಾಥ್ಯೂರಾಜನ್ ಛಾಯಾಗ್ರಹಣ, ಗಿರೀಶ್‌ಕುಮಾರ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ ಹಾಗೂ ಬಿ.ಕೃಷ್ಣ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜ್‌ಸಾಗರ್, ಮಯೂರಿ, ಕಾವ್ಯಶ್ರೀ, ಹೇಮಾಚೌಧರಿ, ಇಂದ್ರನ್ಸ್, ರಾಮಿರೆಡ್ಡಿ, ಅಪೂರ್ವ, ಕರಿಬಸವಯ್ಯ, ರೇಖಾದಾಸ್, ಮಿಮಿಕ್ರಿ ರಾಜ್‌ಗೋಪಾಲ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada