ಹೊಸ ಬಾಳಿನ ಹೊಸಿಲಲಿ ಸಂತೋಷ್ ರೈ ಪತಾಜೆ
ಮಂಗಳೂರು ಹುಡುಗ ಸಂತೋಷ್ ರೈ ಪತಾಜೆಗೆ ಕಂಕಣಬಲ ಕೂಡಿಬಂದಿದೆ. ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನವೆಂಬರ್ 12ರಂದು ಪತಾಜೆ ಮದುವೆ ಮಂಗಳೂರಿನಲ್ಲಿ ನಡೆಯಲಿದೆ.
ಚಾರ್ಟೆಡ್ ಅಕೌಂಟೆಂಟ್(ಸಿಎ) ಓದುತ್ತಿರುವ ದೀಕ್ಷಾ ಎಂಬ ಕನ್ಯೆಯನ್ನು ಪತಾಜೆ ವರಿಸಲಿದ್ದಾರೆ. ಜೂನ್ 6ರಲ್ಲಿ ಪತಾಜೆ ಅವರ ನಿಶ್ಚಿತಾರ್ಥ ನಡೆದಿತ್ತು. ಸವಿ ಸವಿ ನೆನಪು ಹಾಗೂ '7'ಓ ಕ್ಲಾಕ್' ಎಂಬ ಸದಭಿರುಚಿಯ ಚಿತ್ರಗಳಿಗೆ ಆಕ್ಷನ್, ಕಟ್ ಹೇಳುವ ಮೂಲಕ ಪತಾಜೆ ನಿರ್ದೇಶಕರಾಗಿಯೂ ಹೆಸರು ಮಾಡಿದ್ದರು.
ಚಿತ್ರ ನಿರ್ದೇಶಕ ಎಂಬುದಕ್ಕಿಂತ ಪತಾಜೆ ಅವರು ಗುರುತಿಸಿಕೊಂಡಿದ್ದು ಛಾಯಾಗ್ರಾಹಕರಾಗಿ. ಮಠ, ಮಿಠಾಯಿ ಮನೆ, ಜೋಶ್, ನೂರು ಜನ್ಮಕು ಮತ್ತು ಮಂದಹಾಸ (ಡಿಸೆಂಬರ್‌ನಲ್ಲಿ ತೆರೆಕಾಣಲಿದೆ)ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಪತಾಜೆ ಕೆಲಸ ಮಾಡಿದ್ದಾರೆ.
ತೆಲುಗಿನ 'ಅಂದಮೈನ ಮನಸುಲೋ' ಹಾಗೂ 'ಕುದಿರಿತೇ ಕಪ್ ಕಾಫಿ' ಎಂಬ ಚಿತ್ರಗಳಿಗೂ ಪತಾಜೆ ಕ್ಯಾಮೆರಾ ಹಿಡಿದ್ದರು. ಅಂದಹಾಗೆ ಪತಾಜೆ ಅವರದು ಗುರು ಹಿರಿಯರು ನಿಶ್ಚಯಿಸಿದ ಮದುವೆಯಂತೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಪತಾಜೆಗೆ ಶುಭವಾಗಲಿ ಎಂದು ಹಾರೈಸೋಣ.


Click it and Unblock the Notifications











