For Quick Alerts
  ALLOW NOTIFICATIONS  
  For Daily Alerts

  ಕಾಸರವಳ್ಳಿ ಗೌರವಾರ್ಥ ರಸಗ್ರಹಣ ಶಿಬಿರ

  By Staff
  |
  ದೃಶ್ಯ ಮಾಧ್ಯಮಗಳಿಗೆಂದೇ ಹುಟ್ಟು ಹಾಕಿರುವ ನೂತನ ಅಂತರ್ಜಾಲ ತಾಣ ಸಂವಾದ ಡಾಟ್ ಕಾಂನ ಅಡಿಯಲ್ಲಿ ಇದೇ ನವೆಂಬರ್ 22 ಮತ್ತು 23ರಂದು ಗಿರೀಶ್ ಕಾಸರವಳ್ಳಿ ಗೌರವಾರ್ಥ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ" ಎಂಬ ವಿಷಯದ ಕುರಿತು ಸಿನೆಮಾ ರಸಗ್ರಹಣ ಶಿಬಿರ ನಡೆಯಲಿದೆ.

  ತುಮಕೂರಿನ ದೇವರಾಯನ ದುರ್ಗದಲ್ಲಿ ನಡೆಯಲಿರುವ ಈ ಕೂಟದಲ್ಲಿ ಗಿರೀಶ್ ಕಾಸರವಳ್ಳಿಯವರೊಂದಿಗೆ ಸಂವಾದ, ಸಂಪನ್ಮೂಲ ವ್ಯಕ್ತಿಗಳಿಂದ ಪರ್ಯಾಯ ಸಿನೆಮಾದ ಕುರಿತಾದ ಉಪನ್ಯಾಸ, ಚರ್ಚೆ ಹಾಗೂ 'ಘಟಶ್ರಾದ್ಧ' ಕೃತಿಯ ಕುರಿತು ಕಲಾವಿದರಾದ ಪ್ರಮೋದ್ ಪಿ ಟಿ ಮತ್ತು ಶಿವರಾಜ್ ರಚಿಸಿದ 'ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ' ಇರುತ್ತದೆ. ಘಟಶ್ರಾದ್ಧ ಸಿನಿಮಾ ಸೇರಿದಂತೆ ಹಲವು ಪರ್ಯಾಯ ಸಿನೆಮಾಗಳ ಪ್ರದರ್ಶನವೂ ಇರುತ್ತದೆ.

  ರಾತ್ರಿ ತಂಗುವವರಿಗೆ ಪೂರ್ಣಚಂದ್ರ ತೇಜಸ್ವಿಯವರ ಕುರಿತು ಕೃಪಾಕರ್-ಸೇನಾನಿ ನಿರ್ಮಿಸಿದ ವಿಶೇಷ ಸಾಕ್ಷ್ಯಚಿತ್ರ 'ಮಾಯಾಲೋಕ' ಪ್ರದರ್ಶನವೂ ಇರುತ್ತದೆ.

  ಕಾರ್ಯಕ್ರಮದ ವಿವರ

  ಸ್ಥಳ : ದೇವರಾಯನ ದುರ್ಗ, ತುಮಕೂರು ಜಿಲ್ಲೆ
  ದಿನಾಂಕ : ನವೆಂಬರ್ 22 ಮತ್ತು 23
  ಸಮಯ : ಬೆಳಿಗ್ಗೆ 10ರಿಂದ ಸಂಜೆ 5

  ಕಾರ್ಯಕ್ರಮದಲ್ಲಿ ಭಾಗವಹಿಸಲಿರುವವರು :

  ಗಿರೀಶ್ ಕಾಸರವಳ್ಳಿ, ಹಿರಿಯ ನಿರ್ದೇಶಕರು
  ಚ ಹ ರಘುನಾಥ್, ಪ್ರಜಾವಾಣಿ ಸಿನಿ ಪತ್ರಕರ್ತರು
  ಡೇವಿಡ್ ಬಾಂಡ್, ಕುವೆಂಪು ವಿಶ್ವವಿದ್ಯಾಲಯ(ಕನ್ನಡ ಮತ್ತು ಫ್ರೆಂಚ್ ಸಿನಿಮಾ ಕುರಿತು ವಿಶೇಷ ಅನುಭವಿ)
  ಡಾ| ದತ್ತಾತ್ರೆಯ, ವಿಶೇಷ ಕಾನೂನು ತಜ್ಞರು
  ಡಾ| ತಾರಕೇಶ್ವರ್, ಹಂಪಿ ಕನ್ನಡ ವಿಶ್ವ ವಿದ್ಯಾಲಯ
  ಸಾವಿತ್ರಿ, ಪತ್ರಕರ್ತೆ, ಸಂಯುಕ್ತ ಕರ್ನಾಟಕ
  ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ
  ಡಾ| ಸಿ ಸೋಮಶೇಖರ್, ಜಿಲ್ಲಾಧಿಕಾರಿಗಳು, ತುಮಕೂರು

  ನಿಮ್ಮ ಗಮನದಲ್ಲಿರಲಿ

  ಎರಡು ದಿನಗಳ ಕಾರ್ಯಕ್ರಮಕ್ಕೆ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಪ್ರವೇಶ ವಿಶೇಷ ಪಾಸ್ ಹೊಂದಿರುವವರಿಗೆ ಮಾತ್ರ. ಆಸಕ್ತರು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ 200 ರೂಪಾಯಿ ಸಂದಾಯ ಮಾಡಿ ವಿಶೇಷ ಪಾಸ್ ಪಡೆಯಬಹುದು.

  ಸಂಪರ್ಕ ಈ ಕೆಳಕಂಡಂತಿದೆ:

  ತುಮಕೂರು:
  ಕೋಟೆ ನಾಗಭೂಷಣ್, ಪ್ರಜಾಪ್ರಗತಿ ದಿನಪತ್ರಿಕೆ - 98800 18381

  ಬೆಂಗಳೂರು:
  ಕಿರಣ್ ಎಮ್ - 97317 55966 (ಪದ್ಮನಾಭನಗರ)
  ರಾಘವ ಕೋಟೆಕರ್ - 99013 99671 (ಜೆ ಪಿ ನಗರ, ಜಯನಗರ, ಬನಶಂಕರಿ)
  ಅರೆಹಳ್ಳಿ ರವಿ 99004 39930 (ಬಿ ಟಿ ಎಂ ಲೇ‌ಔಟ್, ಹೊಸೂರು ರಸ್ತೆ)
  ರುದ್ರಮೂರ್ತಿ: 94804 94135(ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ನೆಲಮಂಗಲ)
  ಪ್ರಮೋದ್: 94487 01470 (ಬಸವನಗುಡಿ)
  ಸತೀಶ್ ಗೌಡ (ಅವಿರತ ಬಳಗದ ಸದಸ್ಯರಿಗಾಗಿ) - 98800 86300
  ವಸಂತ್ (ಶಿವು ಅಡ್ಡಾ ಬಳಗಕ್ಕಾಗಿ) - 97390 20070
  ರಾಜಕುಮಾರ್ (ಸಮಾಜ ಸೇವಕರ ಸಮಿತಿ ಗೆಳೆಯರಿಗಾಗಿ, ಹನುಮಂತನಗರ, ಗಾಂಧಿಬಜಾರು) - 94481 71069

  ಮೈಸೂರು:
  ಲಾವಣ್ಯ ಪಿ ಜಿ - 94480 06546
  ಶಿವಮೊಗ್ಗ:
  ಅವಿನಾಶ್ - 94801 38034
  ಹಾಸನ:
  ಪ್ರಭಾಕರ್- - 94483 65816
  ಚಿತ್ರದುರ್ಗ:
  ಮೇಘ ಗಂಗಾಧರ್ - 98800 18384
  ದಾವಣಗೆರೆ:
  ಚನ್ನವೀರಪ್ಪ- 98800 18385
  ಬಾಗಲಕೋಟೆ:
  ರಾಮ್ ಮನಗೂಳಿ -98802 95894

  ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ನೋಂದಾವಣೆಗಾಗಿ ಸಂವಾದ.ಕಾಂ ನ ಕಾಸರವಳ್ಳಿ ಕಾರ್ಯಕ್ರಮದ ವಿಶೇಷ ಪುಟಕ್ಕೆ ಭೇಟಿ ಕೊಡಿ.

  ದೇವರಾಯನ ದುರ್ಗದ ಚಿತ್ರಪಟ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X