ದಶಕದ ಜೊತೆಗಾರರಿಗೆ ಧನ್ಯವಾದ ತಿಳಿಸಿದ ಸುದೀಪ್
Recommended Video
ನಟ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಪ್ರಬಲವಾಗಿರುವ ಕನ್ನಡ ನಟರ ಪೈಕಿ ಒಬ್ಬರು. ಎಲ್ಲ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಸುದೀಪ್, ಟ್ವಿಟ್ಟರ್ ಲೋಕಕ್ಕೆ ಬಂದು 10 ವರ್ಷಗಳು ಕಳೆದಿದೆ.
ದಶಕದ ಸಂಭ್ರಮದಲ್ಲಿ ಇರುವ ಸುದೀಪ್ ತಮ್ಮ ಸಂಭ್ರಮದ ಕ್ಷಣದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 10 ವರ್ಷಗಳಿಂದ ತಮ್ಮ ಜೊತೆಗೆ ಇರುವ ಹಿಂಬಾಲಕರಿಗೆ ಧನ್ಯವಾದ ತಿಳಿಸಿದ್ದಾರೆ.
''10 ವರ್ಷಗಳಿಂದ ನನಗೆ ನೀವು ಪ್ರೀತಿ, ಪ್ರೋತ್ಸಾಹ, ಶಕ್ತಿ ಪ್ರಾಮಾಣಿಕತೆ... ಎಲ್ಲವೂ. ನಾನು ತುಂಬ ವಿಶೇಷ ಎಂದು ಎನಿಸುವಂತೆ ಮಾಡಿರುವುದಕ್ಕೆ ಧನ್ಯವಾದ.'' ಎಂದು ಸುದೀಪ್ ಟ್ವಿಟ್ಟರ್ ನಲ್ಲಿ 2258759 ಫಾಲೋವರ್ಸ್ ಹೊಂದಿದ್ದು, ಅಷ್ಟು ಬಾರಿ ಥ್ಯಾಂಕ್ಯು ಎಂದು ಹೇಳಿದ್ದಾರೆ.

ಸುದೀಪ್ ಟ್ವಿಟ್ಟರ್ ನಲ್ಲಿ 10 ವರ್ಷಗಳಿಂದ ಕೇವಲ 67 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಇದರಲ್ಲಿ ನಿರ್ದೇಶಕ ರಾಜಮೌಳಿ, ರಾಮ್ ಗೋಪಾಲ್ ವರ್ಮ, ಸಲ್ಮಾನ್ ಖಾನ್, ಶಾರೂಖ್ ಖಾನ್, ರಕ್ಷಿತ್ ಶೆಟ್ಟಿ ಪ್ರಮುಖರಾಗಿದ್ದಾರೆ. ಹೆಚ್ಚಾಗಿ ತಮ್ಮ ಅಭಿಮಾನಿ ಬಳಗಗಳನ್ನೆ ಸುದೀಪ್ ಹಿಂಬಾಲಿಸುತ್ತಿದ್ದಾರೆ.
ನಿನ್ನೆ ಸುದೀಪ್ ಅಭಿಮಾನಿಗಳು, ಕಿಚ್ಚನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಸದ್ಯ, ಸುದೀಪ್ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯ ನಂತರ ಪೈರಸಿ ವಿಚಾರಕ್ಕೆ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ.


Click it and Unblock the Notifications











