ಯೋಗರಾಜ್ ಭಟ್ಟರ ಮುಂದಿನ ಚಿತ್ರದ ಹೆಸರು ಬಹಿರಂಗ

ಯೋಗರಾಜ್ ಭಟ್ಟರ ಪರಮಾತ್ಮ ಇನ್ನೂ ಪ್ರದರ್ಶನ ಕಾಣುತ್ತಿದೆ. ಭಟ್ಟರು ಈಗ ಹೊಸ ಸಿನಿಮಾಗೆ ತಯಾರಿ ನಡೆಸಿದ್ದಾರೆಂಬ ಸುದ್ದಿ ಕೊಟ್ಟಾಗಿದೆ. ಈಗ ಅದರ ಹೆಸರು ಬಹಿರಂಗವಾಗಿದೆ, ಅದು "ಪರವಶವೇ ಜೀವನ". ಹೊಸ ವಿಷಯವೆಂದರೆ ಯೋಗರಾಜ್ ಭಟ್ ಬ್ಯಾನರಿನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ, ಪರಮಾತ್ಮ ಹಾಗೂ ಇನ್ನೂ ಕೆಲವು ಚಿತ್ರಗಳಲ್ಲಿ ಸಹನಿರ್ದೇಶಕರಾಗಿದ್ದ ಪ್ರಕಾಶ್ ರಾಜ್ ಮೆಹು ನಿರ್ದೇಶಕರು. ಅನಂತ್ ನಾಗ್, ಟಬು ಮುಖ್ಯ ಪಾತ್ರಧಾರಿಗಳು.

ಅಮಿತಾಬ್ ಬಚ್ಟನ್ ನಟನೆಯ ಬಾಲಿವುಡ್ ಚಿತ್ರ 'ಚೀನಿ ಕಮ್' ದಿಂದ ಸ್ಪೂರ್ತಿ ಪಡೆದ ಕಥೆ ಇದು ಎಂದು ಸುದ್ದಿ ಮೂಲಗಳು ಹೇಳಿವೆ. ಆದರೆ ನಿರ್ದೇಶಕ ಪ್ರಕಾಶ್ ಮೆಹು ಇದನ್ನು ನಿರಾಕರಿಸಿ "ಇದೊಂದು ವಯಸ್ಸಾದ ವ್ಯಕ್ತಿಯೊಬ್ಬ ಮಧ್ಯವಯಸ್ಸಿನ ಹೆಂಗಸಿನ ಜೊತೆ ಪ್ರೀತಿಯಲ್ಲಿ ಬೀಳುವ ಕಥಾವಸ್ತು ಹೊಂದಿರುವ ಚಿತ್ರ. ಈ ದೃಷ್ಟಿಯಲ್ಲಿ ಚೀನಿ ಕಮ್ ಚಿತ್ರವನ್ನು ಹೋಲುವುದನ್ನು ಬಿಟ್ಟರೆ ಇದು ಅದರ ರೀಮೇಕ್ ಅಲ್ಲ" ಎಂದಿದ್ದಾರೆ.

ಈ 'ಪರವಶವೇ ಜೀವನ' ಚಿತ್ರದ ಶೂಟಿಂಗ್ ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಲಿರುವ ಇದಕ್ಕೆ ನಿರ್ದೇಶಕ ಪ್ರಕಾಶ್ ಮೆಹು ಸಾಕಷ್ಟು ತಯಾರಿ ನಡೆಸಿದ್ದಾರೆ. ಇದಕ್ಕೆ ಸಾಹಿತ್ಯದ ಮೂಲಕವಾದರೂ ಯೋಗರಾಜ್ ಭಟ್ಟರ ಸ್ಪರ್ಶ ಇದ್ದೇ ಇರುತ್ತದೆ ಎಂಬುದು ಭಟ್ಟರನ್ನು ಚೆನ್ನಾಗಿ ಬಲ್ಲವರ ಅನಿಸಿಕೆ. ಅನಿಸಿಕೆ ಮರಿಚಿಕೆ ಆಗದಿರಲಿ (ಒನ್ ಇಂಡಿಯಾ ಕನ್ನಡ)

More from Filmibeat

English summary
Yogaraj Bhat production next movie is a family drama, which is titled as Paravashave Jeevana. The movie stars Bollywood actress Tabu and senior actor Ananth Nag in the Kannada movie.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X