ಕಳೆದ ವರ್ಷ ನೂರು ಕೋಟಿ ಕ್ಲಬ್ ಸೇರಿದ 20 ಚಿತ್ರ, ಕನ್ನಡ ಸಿನಿಮಾ ಒಂದೇ!
ಕಳೆದ ವರ್ಷ ಬಾಲಿವುಡ್ ಇಂಡಸ್ಟ್ರಿಯಲ್ಲಿ ಒಟ್ಟು 13 ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದೆ. ಇದು ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಎನ್ನಲಾಗಿದೆ. ಈ ಹಿಂದೆ 9 ಚಿತ್ರಗಳು ವರ್ಷವೊಂದರಲ್ಲಿ ನೂರು ಕೋಟಿ ಗಡಿ ದಾಟಿದ್ದ ದಾಖಲೆ ಹೊಂದಿತ್ತಂತೆ.
ಬಿಟೌನ್ ಇಂಡಸ್ಟ್ರಿಯಲ್ಲಿ 13 ಸಿನಿಮಾ ಹಾಗೂ ಇತರೇ ಪ್ರಾದೇಶಿಕ ಭಾಷೆಯ 7 ಚಿತ್ರಗಳು 2018ರಲ್ಲಿ ನೂರು ಕೋಟಿ ಗಳಿಸಿದೆ ಎಂಬ ವರದಿ ಬಿಡುಗಡೆಯಾಗಿದೆ. FICCI ಭಾರತೀಯ ಮನರಂಜನೆ ವಿಭಾಗದ ವರದಿ ಪ್ರಕಾರ 20 ಚಿತ್ರಗಳು ನೂರು ಕೋಟಿ ಗಳಿಕೆ ಕಂಡಿದೆ.
ಇದರಲ್ಲಿ ಒಂದು ಕನ್ನಡ ಸಿನಿಮಾ ಇರೋದು ವಿಶೇಷ. ಇದೇ ಮೊದಲ ಭಾರಿಗೆ ಕನ್ನಡ ಚಿತ್ರವೊಂದು ನೂರು ಕೋಟಿ ಕ್ಲಬ್ ನಲ್ಲಿ ಕಾಣಿಸಿಕೊಂಡಿದ್ದು, ದೇಶದ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹಾಗಿದ್ರೆ, ಕಳೆದ ವರ್ಷ 100 ಕೋಟಿ ದಾಟಿದ ಚಿತ್ರಗಳು ಯಾವುದು? ಮುಂದೆ ಓದಿ....

ನೂರು ಕೋಟಿ ಗಳಿಕೆ ಕಂಡ 13 ಹಿಂದಿ ಸಿನಿಮಾ
ಸಂಜಯ್ ದತ್ ಬಯೋಪಿಕ್ ಸಂಜು, ಪದ್ಮಾವತ್, ಸಿಂಬಾ, 2.0, ರೇಸ್ 3, ಭಾಗಿ 2, ಥಗ್ಸ್ ಆಫ್ ಹಿಂದೂಸ್ತಾನ್, ಬದಾಯಿ ಹೋ, ಸ್ತ್ರೀ, ರಾಝಿ, ಗೋಲ್ಡ್ ಮತ್ತು ಸೋನು ಕಿ ತಿಟು ಕಿ ಸ್ವೀಟಿ ಚಿತ್ರಗಳು ಕಳೆದ ವರ್ಷ ನೂರು ಕೋಟಿ ಬಿಸಿನೆಸ್ ಮಾಡಿದೆಯಂತೆ.

ಉಳಿದ ಏಳು ಚಿತ್ರಗಳು ಯಾವುದು?
ಹದಿಮೂರು ಬಾಲಿವುಡ್ ಚಿತ್ರಗಳ ಜೊತೆ ಏಳು ಸೌತ್ ಇಂಡಿಯಾ ಸಿನಿಮಾಗಳು ಕೂಡ ನೂರು ಕೋಟಿ ಬಿಸಿನೆಸ್ ಮಾಡಿದೆ. ರಜನಿಕಾಂತ್ ಅಭಿನಯದ 2.0, ಜೂನಿಯರ್ ಎನ್.ಟಿ.ಆರ್ ಅಭಿನಯದ ಅರವಿಂದ ಸಮೇತ, ರಂಗಸ್ಥಳಂ, ಭರತ್ ಅನೇ ನೇನು, ಕಾಲಾ, ಗೀತಾ ಗೋವಿಂದ ಚಿತ್ರಗಳು ಪಟ್ಟಿಯಲ್ಲಿದೆ.

ಕನ್ನಡದಲ್ಲಿ ಒಂದು ಸಿನಿಮಾ
ಭಾರತೀಯ 20 ಚಿತ್ರಗಳ ಪಟ್ಟಿಯಲ್ಲಿ ಕನ್ನಡ ಕೆಜಿಎಫ್ ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿದೆ. ಅಂದ್ರೆ, ಪ್ರಾದೇಶಿಕವಾಗಿ ಕನ್ನಡ ಭಾಷೆಯ ಕೆಜಿಎಫ್ ಸಿನಿಮಾ 100 ಕೋಟಿ ಗಳಿಸಿದೆ ಎಂಬುದು ಈ ವರದಿ ಹೇಳುತ್ತಿದೆ. ಇದೇ ಮೊದಲ ಸಲ ಕನ್ನಡ ಚಿತ್ರವೊಂದು ನೂರು ಕೋಟಿ ಕ್ಲಬ್ ನಲ್ಲಿ ಕಾಣಿಸಿಕೊಂಡಿದ್ದು, ಕೆಜಿಎಫ್ ಚಿತ್ರಕ್ಕೆ ಬಹುದೊಡ್ಡ ಗೆಲುವು ಸಿಕ್ಕಿದೆ.

ಉತ್ತಮ ಹೆಜ್ಜೆಯತ್ತ ಸ್ಯಾಂಡಲ್ ವುಡ್
ಇದುವರೆಗೂ ನೂರು ಗಳಿಸಿದ ಪಟ್ಟಿಯಲ್ಲಿ ಯಾವುದೇ ಕನ್ನಡ ಸಿನಿಮಾ ಇರಲಿಲ್ಲ. ಇದೇ ಮೊದಲ ಬಾರಿಗೆ ಕೆಜಿಎಫ್ ಸಿನಿಮಾ ನೂರು ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಮುಂದಿನ ದಿನದಲ್ಲಿ ಮತ್ತಷ್ಟು ಚಿತ್ರಗಳು ನೂರು ಕೋಟಿ ಕ್ಲಬ್ ಗೆ ಸೇರಲಿದೆ ಎಂಬ ಆಶಾಭಾವನೆ ಮೂಡಿದೆ.


Click it and Unblock the Notifications











