»   » 100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ, ಕಿಚ್ಚ-ಶಿವಣ್ಣ ಅವರ ಸಿನಿಮಾ!

100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ, ಕಿಚ್ಚ-ಶಿವಣ್ಣ ಅವರ ಸಿನಿಮಾ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಸದ್ಯಕ್ಕೆ ಟ್ರೆಂಡ್ ಆಗುತ್ತಿದೆ.

ನಿರ್ದೇಶಕ ಕಮ್ ನಟ 'ಜೋಗಿ' ಪ್ರೇಮ್ ಅವರು ಆಕ್ಷನ್-ಕಟ್ ಹೇಳಲಿರುವ ಈ ಮಲ್ಟಿ ಸ್ಟಾರರ್ ಸಿನಿಮಾದಿಂದ ಇದೀಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ಈ ಸಿನಿಮಾ ಸುಮಾರು 100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ.

ಶಿವಣ್ಣ ಅವರ 'ವಜ್ರಕಾಯ' ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕ ಸಿ.ಆರ್ ಮನೋಹರ್ ಅವರು ಈ ಮಲ್ಟಿ ಸ್ಟಾರರ್ ಚಿತ್ರಕ್ಕೆ 100 ಕೋಟಿ ಬಂಡವಾಳ ಹಾಕುವ ಮೂಲಕ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಅಂದಹಾಗೆ ಇದು ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಬಜೆಟ್ ನಲ್ಲಿ ಚಿತ್ರ ತಯಾರಾಗುತ್ತಿರೋದು.[ವಾವ್! ಶಿವಣ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸ್ತಾರಂತೆ!]

100 Crores For Shivarajkumar and Sudeep's Multi-Starrer

ಇನ್ನು ಸ್ಯಾಂಡಲ್ ವುಡ್ ನ ದಿಗ್ಗಜರಿಬ್ಬರು, ಒಂದಾಗಿರೋ ಸಿನಿಮಾ ಅಂದರೆ ಗಾಂಧಿನಗರದ ಮಂದಿಗೆ ಸ್ವಲ್ಪ ಕುತೂಹಲ ಜಾಸ್ತೀನೇ ಇದೆ. ಅಲ್ಲದೇ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತೆರೆ ಮೇಲೆ ಒಂದಾಗಿದ್ದು, ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.

ಈ ಮೊದಲು ಇವರಿಬ್ಬರು ಒಂದಾಗಿ ಕಾಣಿಸಿಕೊಳ್ಳಲಿರುವ ಚಿತ್ರಕ್ಕೆ 'ಕುಂಭಮೇಳ' ಅಂತ ಹೆಸರಿಡಲಾಗಿದೆ ಎಂದು ಗಾಸಿಪ್ ಕ್ರೀಯೇಟ್ ಆಗಿತ್ತಾದರೂ, ಇದೀಗ ಅದು ಬರೀ ರೂಮರ್ಸ್, ಅಲ್ಲದೇ ಚಿತ್ರದ ಟೈಟಲ್ ಇನ್ನು ಫೈನಲ್ ಆಗಿಲ್ಲ ಎಂದು ನಿರ್ದೇಶಕ ಪ್ರೇಮ್ ಅವರು ತಿಳಿಸಿದ್ದಾರೆ.

ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಮಾಡಲು ನಿರ್ದೇಶಕ ಪ್ರೇಮ್ ಅವರು ಪ್ಲಾನ್ ಮಾಡಿಕೊಂಡಿದ್ದಾರೆ. ಕನ್ನಡ ವರ್ಷನ್ ನಲ್ಲಿ ಮಾತ್ರ ಶಿವಣ್ಣ ಅವರು ಕಾಣಿಸಿಕೊಳ್ಳಲಿದ್ದು, ಕನ್ನಡ ಸೇರಿದಂತೆ ಉಳಿದ ಭಾಷೆಯಲ್ಲಿ ಕಿಚ್ಚ ಸುದೀಪ್ ಅವರು ಮಿಂಚಲಿದ್ದಾರೆ.

ಈಗಾಗಲೇ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅವರು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವುದರಿಂದ, ಪ್ರೆಮ್ ಅವರ ಈ ಬಿಗ್ ಬಜೆಟ್ ನ ಹೊಸ ಪ್ರಾಜೆಕ್ಟ್ 2016ರಲ್ಲಿ ಆರಂಭವಾಗಲಿದೆ.

English summary
The renowned producer CR Manohar, who produced Shivarajkumar starrer Vajrakaya is now all set to invest 100 crores on Sandalwood's biggest ever multi-starrer. Kannada Actor Shivarajkumar and Sudeep are sharing on-screen space. The movie is directed by Prem of 'Jogi' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada