For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದ ಇತಿಹಾಸದಲ್ಲಿ 100 ಸಿನಿಮಾ ಮಾಡಿರುವ ನಿರ್ದೇಶಕರು ಇವರು

  By Bharath Kumar
  |
  ಚಿತ್ರರಂಗದ ಇತಿಹಾಸದಲ್ಲಿ 100 ಸಿನಿಮಾ ಮಾಡಿರುವ ನಿರ್ದೇಶಕರು ಇವರು | Filmibeat Kannada

  ಭಾರತೀಯ ಸಿನಿಮಾರಂಗದಲ್ಲಿ 100 ಸಿನಿಮಾ ಮಾಡಿದ ನಟ, ನಟಿಯರನ್ನ ನೋಡಬಹುದು. ಆದ್ರೆ, 100 ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕರನ್ನ ಹುಡುಕಿದ್ರೆ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಕಣ್ಣಿಗೆ ಬೀಳುತ್ತಾರೆ.

  ವಿಶೇಷ ಅಂದ್ರೆ, ನಿರ್ದೇಶನದಲ್ಲಿ ಸೆಂಚುರಿ ಬಾರಿಸಿರುವ ನಿರ್ದೇಶಕರು ಬಾಲಿವುಡ್ ನಲ್ಲಿ ಯಾರೂ ಇಲ್ಲ. ಎಲ್ಲ ದಕ್ಷಿಣ ಭಾರತದವರೇ. ಅದರಲ್ಲೂ ಕನ್ನಡಿಗರೂ ಇದ್ದಾರೆ ಎಂಬುದು ಖುಷಿಯ ವಿಚಾರ.

  ಹೌದು, ಭಾರತ ಚಿತ್ರರಂಗದ ಇತಿಹಾಸದಲ್ಲಿ 100 ಸಿನಿಮಾ ನಿರ್ದೇಶನ ಮಾಡಿರುವ ಕೇವಲ 5 ಜನ ಡೈರೆಕ್ಟರ್ ಗಳು ಮಾತ್ರ ಇದ್ದಾರೆ. ಒಬ್ಬ ನಿರ್ದೇಶಕ ಒಂದು ಅಥವಾ ಎರಡು ಸಿನಿಮಾ ಅವರ ಬಗ್ಗೆ ಒಂದು ಸಣ್ಣ ಪರಿಚಯ. ಮುಂದೆ ಓದಿ.....

  ಕೆ ಬಾಲಚಂದಿರ್

  ಕೆ ಬಾಲಚಂದಿರ್

  ದಕ್ಷಿಣ ಭಾರತದ ಖ್ಯಾತ ದಿಗ್ಗಜ ನಿರ್ದೇಶಕ ಕೆ ಬಾಲಚಂದಿರ್ 100 ಸಿನಿಮಾಗಳನ್ನ ಮಾಡಿರುವ ಖ್ಯಾತಿ ಹೊಂದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವು ಖ್ಯಾತ ನಟರನ್ನ ಪರಿಚಯಿಸಿದ ಹೆಮ್ಮೆ ಇವರಿಗೆ ಸಲ್ಲುತ್ತೆ. 1965ರಲ್ಲಿ 'ನೀರ್ಕುಂಜಿ' ಚಿತ್ರವನ್ನ ಮೊದಲ ಭಾರಿಗೆ ನಿರ್ದೇಶನ ಮಾಡಿದ್ದರು. ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲೂ ತಪ್ಪಿದ ತಾಳ, ಬೆಂಕಿಯಲ್ಲಿ ಅರಳಿದ ಹೂವು, ಮುಗಿಲು ಮಲ್ಲಿಗೆ, ಎರಡು ರೇಖೆಗಳು, ಸುಂದರ ಸ್ವಪ್ನಗಳು ಅಂತಹ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.

  ರಾಮ್ ನಾರಾಯಣ್

  ರಾಮ್ ನಾರಾಯಣ್

  1960ರ ಖ್ಯಾತ ನಿರ್ದೇಶಕರಲ್ಲಿ ರಾಮ್ ನಾರಾಯಣ್ ಪ್ರಮುಖರು. 1960ರಲ್ಲಲಿ 'ಮೀನಾಕ್ಷಿ' ಚಿತ್ರದ ಮೂಲಕ ನಿರ್ದೇಶಕರಾದ ರಾಮ್ ನಾರಾಯಣ್ ಸುಮಾರು 125ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲೂ ಸಿನಿಮಾ ಮಾಡಿರುವ ರಾಮ್ ನಾರಾಯಣ್ ಭೈರವಿ, ಶಾಂಭವಿ, ದಾಕ್ಷಾಯಿಣಿ, ಭುವನೇಶ್ವರಿ, ಜಗದೀಶ್ವರಿ, ಕಲ್ಪನಾ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

  ದಾಸರಿ ನಾರಾಯಣ್ ರಾವ್

  ದಾಸರಿ ನಾರಾಯಣ್ ರಾವ್

  ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ 140ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿರುವ ದಾಸರಿ ನಾರಾಯಣ್ ರಾವ್ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸೇರ್ಪಡೆಗೊಂಡಿದೆ. 1972ರಲ್ಲಿ ‘ತಾತ ಮನವಾಡು' ಮೂಲಕ ನಿರ್ದೇಶಕರಾದ ದಾಸರಿ ಬಳಿಕ ‘ಸಂಹಾರ ಸಾಗರಂ', ‘ಅಭಿಮನ್ಯುಡು', ‘ಬಂಗಾರು ಕುಟುಂಬಂ', ‘ಮಾಯಾ ಬಜಾರ್' ಸೇರಿ 140ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸ್ವಪ್ನ ಮತ್ತು ಪೊಲೀಸ್ ರಾಮಣ್ಣ ಎಂಬ ಎರಡು ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ.

  ಕೆ ರಾಘವೇಂದ್ರ ರಾವ್

  ಕೆ ರಾಘವೇಂದ್ರ ರಾವ್

  1975ರ ನಂತರ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಿರ್ದೇಶಕ ಕೆ ರಾಘವೇಂದ್ರ ರಾವ್. 100 ಸಿನಿಮಾಗಳನ್ನ ಯಶಸ್ವಿಯಾಗಿ ಪೂರೈಸಿರುವ ಖ್ಯಾತಿ ಇವರಿಗೆ ಸಲ್ಲುತ್ತೆ. 1975ರಲ್ಲಿ ಬಾಬು ಚಿತ್ರದ ಮೂಲಕ ಆರಂಭವಾದ ಸಿನಿಮಾ ಜರ್ನಿ ಸುಮಾರು 110ಕ್ಕೂ ಅಧಿಕ ಸಿನಿಮಾಗಳಿಗೆ ನಿರ್ದೇಶಕರಾಗುವಂತೆ ಮಾಡಿದೆ. ಕನ್ನಡದಲ್ಲಿ 'ಶ್ರೀ ಮಂಜುನಾಥ' ಸಿನಿಮಾ ಮಾಡಿದ್ದರು.

  ಕೋಡಿ ರಾಮಕೃಷ್ಣ

  ಕೋಡಿ ರಾಮಕೃಷ್ಣ

  ತೆಲುಗಿನ 'ಅರುಂಧತಿ' ಮತ್ತು ಕನ್ನಡದ 'ನಾಗಾರಹಾವು' ಸಿನಿಮಾ ಮಾಡಿದ ನಿರ್ದೇಶಕ ಕೋಡಿ ರಾಮಕೃಷ್ಣ. 100 ಸಿನಿಮಾ ಮಾಡಿದ ಡೈರೆಕ್ಟರ್ ಗಳಲ್ಲಿ ಕೋಡಿ ರಾಮಕೃಷ್ಣ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

  ಸಾಯಿ ಪ್ರಕಾಶ್

  ಸಾಯಿ ಪ್ರಕಾಶ್

  ಈ ಐವರು ಬೇರೆ ಭಾಷೆಯ ನಿರ್ದೇಶಕರು. ಆದ್ರೆ, ಸಾಯಿ ಪ್ರಕಾಶ್ ಪೂರ್ಣ ಪ್ರಮಾಣದ ಕನ್ನಡ ನಿರ್ದೇಶಕ. ಕನ್ನಡ ಜನಪ್ರಿಯ ನಾಯಕರ ಜೊತೆ ಸಿನಿಮಾ ಮಾಡಿರುವ ಸಾಯಿ ಪ್ರಕಾಶ್ 99 ಸಿನಿಮಾ ಮಾಡಿದ್ದಾರೆ. ಈಗ 100ನೇ ಸಿನಿಮಾ ಹೊಸ್ತಿಲಿಲ್ಲಿದ್ದಾರೆ. ಅಣ್ಣ-ತಂಗಿ, ಪೊಲೀಸನ ಹೆಂಡ್ತಿ, ತವರು ಮನೆ, ಮಾಲಾಶ್ರೀ ಊಮಾಶ್ರೀ, ಭಗವಾನ್ ಶ್ರೀ ಶಿರಡಿಬಾಬಾ, ನವಶಕ್ತಿ ವೈಭವ, ದೇವರ ಕೊಟ್ಟ ತಂಗಿ, ಭಾಗ್ಯದ ಬಳೆಗಾರ, ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ.

  English summary
  100 film directors of film industry. Sai Prakash, K Balachandir, Ram Narayan, Kodi Ramakrishna, Dasari Narayan Rao, K Raghavendra Rao have done 100 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X