»   » ಅಪ್ಪ ಹುಡುಕಿ ತಂದಿರುವ ಹೆಣ್ಣಿಗೆ ಮೂಗೂರು ಬಸವರಾಜು ಉರುಫ್‌ ರಾಜು ಸುಂದರಂ ಮೈಸೂರಲ್ಲಿ ತಾಳಿ ಕಟ್ಟಲಿದ್ದಾರೆ

ಅಪ್ಪ ಹುಡುಕಿ ತಂದಿರುವ ಹೆಣ್ಣಿಗೆ ಮೂಗೂರು ಬಸವರಾಜು ಉರುಫ್‌ ರಾಜು ಸುಂದರಂ ಮೈಸೂರಲ್ಲಿ ತಾಳಿ ಕಟ್ಟಲಿದ್ದಾರೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಮೂಗೂರು ಬಸವರಾಜು ಮದುವೆಯಾಗುತ್ತಿದ್ದಾರೆ; ಆದರೆ, ಸಿಮ್ರಾನ್‌ಳನ್ನಲ್ಲ, ಅಪ್ಪ ಮೂಗೂರು ಸುಂದರಂ ಆರಿಸಿದ ಕಾಲೇಜು ಹುಡುಗಿಯನ್ನು.

ಫೆಬ್ರವರಿ 3ನೇ ತಾರೀಕು ಮೈಸೂರಿನ ತ್ರಿಪುರ ಸುಂದರಿ ಹಾಲಿನಲ್ಲಿ ಮದುವೆ. ಈ ಕಲ್ಯಾಣ ಮಂಟಪ ಬಸವರಾಜು ಅಣ್ಣ ಪ್ರಭುದೇವನದ್ದು. ಆಮೇಲೆ ಹನಿಮೂನು. ಅದಾದ ನಂತರ ಚೆನ್ನೈನ ರಾಣಿ ಮೆಯ್ಯಮ್ಮ ಹಾಲ್‌ನಲ್ಲಿ ಫೆಬ್ರವರಿ 9ನೇ ತಾರೀಕು ಆರತಕ್ಷತೆ. ಹುಡುಗಿಯ ಹೆಸರು ನಿಶ್ಚಿತಾ.

ಹಳೆಯದ್ದನ್ನೆಲ್ಲ ಮರೆಯಲು ಅಪ್ಪನ ತೊಡೆಗೆ ಮೊರೆಹೋದ ರಾಜ
ಮೂಗೂರು ಸಂಸಾರ ತಮಿಳುನಾಡಿನಲ್ಲಿ ಡ್ಯಾನ್ಸ್‌ ಹೇಳಿಕೊಡುವುದರ ಮೂಲಕವೇ ನೆಲೆಯೂರಿತು. ಆಮೇಲೆ ಮಗ ಪ್ರಭುದೇವ ಕೂಡ ಅಪ್ಪನ ಹಾದಿ ತುಳಿದು, ನಂತರ ನಾಯಕನಾಗಿ ಅದೃಷ್ಟವಂತನಾಗಿ ಮೆರೆದ. ಈತನ ತಮ್ಮ ಬಸವರಾಜು ಕೂಡ ಡ್ಯಾನ್ಸ್‌ ಹೇಳಿಕೊಡುತ್ತಲೇ ಅಲ್ಲಲ್ಲಿ ಒಂದೊಂದು ಹಾಡುಗಳಲ್ಲಿ ಕುಣಿಯುತ್ತಾ ಅಭಿಮಾನಿಗಳ ಸಂಪಾದಿಸಿದವ. ಈಗ ಈತನ ತಮ್ಮ ಪ್ರಸಾದ್‌ ಕೂಡ ನಾಯಕನಾಗಿ ಅದೃಷ್ಟ ಪರೀಕ್ಷಿಸಿದ್ದು ಆಗಿದೆ.

ತನಗೂ ಸಿಮ್ರಾನ್‌ಗೂ ಪ್ರೇಮಾಂಕುರವಾಗಿದೆ. ಸದ್ಯದಲ್ಲೇ ಮದುವೆಯಾಗಲಿದ್ದೇವೆ ಅಂತ ಭರ್ತಿ ಜನರೆದುರಿಗೆ, ಸುದ್ದಿಗೋಷ್ಠಿಯಲ್ಲಿ ತಮಿಳ್ಮಣಿಗಳ ಪ್ರೀತಿಯ ರಾಜು ಸುಂದರಂ ಘೋಷಿಸಿದ್ದರು. ಆಗ ಪಕ್ಕದಲ್ಲಿ ಸಿಮ್ರಾನ್‌ ನಗುತ್ತಿದ್ದಳು. ಆಮೇಲೆ ಕಮಲ ಹಾಸನ್‌ ಕಾರಲ್ಲಿ ಸಿಮ್ರಾನ್‌ ಓಡಾಟ ಜೋರಾದದ್ದು, ನೈವೇಲಿ ರ್ಯಾಲಿಯಲ್ಲಿ ಕೈ ಕೈ ಹಿಡಿದು ಓಡಾಡಿದ್ದು, ತಬ್ಬಿಕೊಂಡು ಕುಣಿದಾಡಿದ್ದು, ಸಾರಿಕಾಗೆ ಕಮಲ್‌ ಡೈವೋರ್ಸ್‌ ಕೊಟ್ಟಿದ್ದು- ಏನೆಲ್ಲಾ ನಡೆದುಹೋಯಿತು. ಇಷ್ಟೆಲ್ಲಾ ಭರಾಟೆಯಲ್ಲಿ ರಾಜು ಆದದ್ದು ಭಗ್ನಪ್ರೇಮಿ. ಕೊನೆಗೆ ಮೊರೆಹೋದದ್ದು ಅಪ್ಪನ ತೊಡೆಯನ್ನ.

ಅಪ್ಪ ಸುಂದಂರಂ ಮಗನ ನೋವನ್ನು ಮರೆಸಲು ಈಗ ಹೊಸ ಹುಡುಗಿ ಹುಡುಕಿ ತಂದಿದ್ದಾರೆ. ಹುಡುಗಿ ಸುಸಂಸ್ಕೃತಳಂತೆ. ಓದಿಕೊಂಡಿದ್ದಾಳಂತೆ. ರಾಜುಗೆ ಹೇಳಿ ಮಾಡಿಸಿದ ಜೋಡಿಯಂತೆ.

ತವರಿನ ಕೊಂಡಿಯನ್ನು ಪೂರ್ತಿ ಕಳಚಿಕೊಳ್ಳದ ಸುಂದರಂ ಮಗನ ಮದುವೆಯನ್ನು ಮೈಸೂರಿನಲ್ಲೇ ಮಾಡುತ್ತಿದ್ದಾರೆ. ರಾಜು ದಾಂಪತ್ಯ ಚೆನ್ನಾಗಿರಲಿ.

Wish Raju

ಪ್ರೇಮದ ಪರಿ
ಯಾವ ಹೂವು ಯಾರ ಮುಡಿಗೋ... ಸಿಮ್ರಾನ್‌ ಪ್ರೇಮ ಯಾರಿಗೋ..
ಸಿಮ್ರಾನ್‌ ಕನ್ನಡದ ಸೊಸೆಯಾದಳೆ?
ಕಮಲ್‌ಗೆ ಸಾರಿಕಾ ಸಾಕಾಗಿ ಹೋದರಾ?

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada