»   » ನುಸಿ ತೆಂಗಿನ ತವರು ತುಮಕೂರು ಸಿನಿ ಸಮಾರಂಭಕ್ಕೆ ರಾಜ್‌, ಜಾಕಿ

ನುಸಿ ತೆಂಗಿನ ತವರು ತುಮಕೂರು ಸಿನಿ ಸಮಾರಂಭಕ್ಕೆ ರಾಜ್‌, ಜಾಕಿ

Posted By: Staff
Subscribe to Filmibeat Kannada

ಮತ್ತೆ ಯಾವುದೇ ಅಡಚಣೆ ಬಾರದೇ ಹೋದಲ್ಲಿ ಜ.11ರ ಭಾನುವಾರ ತುಮಕೂರಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ವಾರ್ತಾ ಸಚಿವರ ಬದಲಾವಣೆಯಿಂದಾಗಿ ಒಮ್ಮೆ , ಮಾಜಿ ಸಚಿವ ವೈ.ಕೆ.ರಾಮಯ್ಯನವರ ನಿಧನದಿಂದಾಗಿ ಇನ್ನೊಮ್ಮೆ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಕ್ಕೆ ಹೋಗಿತ್ತು . ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನುವ ಉತ್ಸಾಹದಲ್ಲಿ ವಾರ್ತಾ ಸಚಿ ಡಾ.ಜಿ.ಪರಮೇಶ್ವರ್‌ ಓಡಾಡುತ್ತಿದ್ದಾರೆ. ಆದರೆ ಈ ಉತ್ಸಾಹ ಚಿತ್ರೋದ್ಯಮದ ಮಂದಿಯಲ್ಲಿ ಕಾಣುತ್ತಿಲ್ಲ .
ಅಂದಹಾಗೆ, ವಾರ್ತಾ ಸಚಿವರಾಗಿ ಪರಮೇಶ್ವರ್‌ ಅವರಿಗಿದು ಚೊಚ್ಚಿಲ ಸಿನಿಮಾ ಸಮಾರಂಭ !

ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕೆಲವು ಹೆಸರುಗಳು ಬಿಟ್ಟುಹೋಗಿರುವ ಕುರಿತು ಗಾಂಧಿನಗರದಲ್ಲಿ ಅಸಮಾಧಾನದ ಅಲೆ ಎದ್ದಿದೆ. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಮತ್ತು ಕಲಾವಿದರ ಸಂಘದ ಅಧ್ಯಕ್ಷರುಗಳ ಉಲ್ಲೇಖವೇ ಆಹ್ವಾನ ಪತ್ರಿಕೆಯಲ್ಲಿಲ್ಲ ಎನ್ನುವುದು ಈ ಅಸಮಾಧಾನ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಂತೆ ನಿರ್ಮಾಪಕ ನಿರ್ದೇಶಕರ ಸಂಘಗಳು ಒಡೆಯುತ್ತಿರುವುದರಿಂದ ಸರ್ಕಾರ ಗೊಂದಲಕ್ಕೊಳಗಾಗಿ ಯಾರ ಹೆಸರನ್ನೂ ಮುದ್ರಿಸಿಲ್ಲವೋ ಏನೋ !?

ವರನಟ ಡಾ.ರಾಜ್‌ಕುಮಾರ್‌ ಅವರು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕ್ಷಾಮ ಚಿತ್ರಕ್ಕೆ ಪ್ರಶಸ್ತಿ ಪಡೆದಿರುವ ಬರಗೂರು ರಾಮಚಂದ್ರಪ್ಪ ಅವರು ಅಣ್ಣಾವ್ರನ್ನು ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸಿದ್ದಾರೆ ಎನ್ನುವುದು ಸುದ್ದಿ .

ಉಳಿದಂತೆ ಬಾಲಿವುಡ್‌ನ ಜಾಕಿಶ್ರಾಫ್‌ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ರಾಜಕಾರಣಿಗಳ ಸಾಲಿನಲ್ಲಿ ಸಚಿವ ಟಿ.ಬಿ.ಜಯಚಂದ್ರ, ಬಸವರಾಜು ಹಾಗೂ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲೂ ರಾಜಕೀಯ ಮಾಡುತ್ತಿರುವ ಎಸ್‌.ರಮೇಶ್‌ ಮಿಂಚಿಂಗು.

ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವೂ ಇದೆ. ಇದರಲ್ಲಿ ನಟಿ ಭಾವನಾ ಅವರ ನೃತ್ಯದ ಕುರಿತು ರಸಿಕ ಪ್ರೇಕ್ಷಕರು ್ಫಕುತೂಹಲ ಇಟ್ಟುಕೊಳ್ಳಬಹುದೆನ್ನಿಸುತ್ತದೆ. ಉಳಿದುದು ಮೊಕ್ತ .

English summary
Karnataka State Film Award for 200203 on Jan. 11th at Tumkur

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada