»   » ಐಶ್‌ ಬೇಬಿ ನಂ.1 ಆದರೆ ಮಲ್ಲಿಕಾ ಶೆರಾವತ್‌ ನಂ.2!!

ಐಶ್‌ ಬೇಬಿ ನಂ.1 ಆದರೆ ಮಲ್ಲಿಕಾ ಶೆರಾವತ್‌ ನಂ.2!!

Posted By:
Subscribe to Filmibeat Kannada


ರಾಖಿ ಸಾವಂತ್‌ ಎಂಬ ಸೆಕ್ಸ್‌ ಬಾಂಬ್‌, ಐಶ್‌ಗೆ ಡ್ಯಾನ್ಸ್‌ ಬರೋದಿಲ್ಲ ಎಂದಿದ್ದಳು. ಆದರೆ ಈ ಲೆಕ್ಕಾಚಾರ ನೋಡಿ...

ಮಾದಕ, ರೋಚಕ ಮತ್ತು ಪ್ರಚೋದಕ ಬೆಡಗಿ ಮಲ್ಲಿಕಾ ಶೆರಾವತ್‌ಗಿಂತಲೂ ಐಶ್ವರ್ಯ ರೈ ಒಂದು ಕೈ ಮುಂದೆ ಇದ್ದಾರಂತೆ! ಯಾವುದರಲ್ಲಿ ಅಂದ್ರೆ; ಡ್ಯಾನ್ಸ್‌ನಲ್ಲಿ...

ಐಶ್‌ ಬೇಬಿಗೆ ಈ ಸರ್ಟಿಫಿಕೇಟು ನೀಡಿದವರು; ನೃತ್ಯ ನಿರ್ದೇಶಕಿ ಬೃಂದಾ. ಚಿತ್ರದಿಂದ ಚಿತ್ರಕ್ಕೆ ಐಶ್ವರ್ಯ ರೈ, ನೃತ್ಯದಲ್ಲಿ ನೈಪುಣ್ಯತೆ ಗಳಿಸುತ್ತಿದ್ದಾರೆ. ಮಣಿ ರತ್ನಂ ನಿರ್ದೇಶನದ ‘ಗುರು’ ಚಿತ್ರದಲ್ಲಿ ಮಲ್ಲಿಕಾ ಮತ್ತು ಐಶ್‌ ಇಬ್ಬರೂ ಇದ್ದಾರೆ. ನಾನು ನೃತ್ಯ ನಿರ್ದೇಶನದ ಸಂದರ್ಭದಲ್ಲಿ ಗಮನಿಸಿದಂತೆ, ನೃತ್ಯದ ಪಟ್ಟುಗಳನ್ನು ಮಲ್ಲಿಕಾ ಕಲಿಯಲು ಕಷ್ಟಪಡುತ್ತಾರೆ. ಐಶ್‌ ಬೇಗ ಕಲಿಯುತ್ತಾರೆ ಎಂದಿದ್ದಾರೆ ಬೃಂದಾ.

ತಮ್ಮ ಮಾತಿನಿಂದ ಮಲ್ಲಿಕಾ ಮುನಿಸಿಕೊಳ್ಳಬಹುದೆಂಬ ಆತಂಕದಿಂದಲೋ ಏನೋ, ‘ಐಶ್ವರ್ಯ ನೃತ್ಯದಲ್ಲಿ ನಂಬರ್‌ ಒನ್‌. ಹೀಗೆಂದು ಮಲ್ಲಿಕಾ ಪ್ರತಿಭಾವಂತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ಮಲ್ಲಿಕಾ ಹೃದಯವಂತೆ ಸಹಾ ಹೌದು’ ಎಂದು ಬೃಂದಾ ಒಗ್ಗರಣೆ ಸೇರಿಸಿದ್ದಾರೆ!

ಅಂದಹಾಗೆ; ಸಿನಿಮಾದಲ್ಲಿ ಮಲ್ಲಿಕಾ, ಬಿಪಾಶಾ, ಐಶ್ವರ್ಯ ಇದ್ರೆ ಸಾಕು, ಡ್ಯಾನ್ಸ್‌-ಗೀನ್ಸ್‌ ಎಲ್ಲಾ ಯಾರಿಗೆ ಬೇಕು ಎಂದು ಪಡ್ಡೆಗಳು ಪಿಸುಗುಸು ಎನ್ನುತ್ತಿವೆಯಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada