»   » ಏನು ಮಾಯವೋ ಏನು ಮರ್ಮವೋ...

ಏನು ಮಾಯವೋ ಏನು ಮರ್ಮವೋ...

Posted By:
Subscribe to Filmibeat Kannada

*ಅನಂತ

ಎತ್ತಣ ಸಿನಿಮಾ, ಎತ್ತಣ ಮಾಹಿತಿ ತಂತ್ರಜ್ಞಾನ !

ಹೀಗೆಂದು ಗೊಣಗುವಂತಿಲ್ಲ . ಎರಡೂ ರಂಗಗಳ ನಡುವೆ ಎಷ್ಟೊಂದು ಸಾಮ್ಯತೆಗಳಿವೆ ನೋಡಿ : ಮೊದಲನೆಯದಾಗಿ ಸಿನಿಮಾ ಹಾಗೂ ಮಾಹಿತಿ ತಂತ್ರಜ್ಞಾನ ಎರಡೂ ಉದ್ಯಮಗಳು. ಎರಡನೆಯದಾಗಿ- ಸಿನಿಮಾ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನವೂ ತಂತ್ರಜ್ಞಾನ. ಅವೆರಡೂ ಮಾಧ್ಯಮಗಳೂ ಹೌದು. ಎರಡಕ್ಕೂ ಉಂಟು ಥಳುಕು ಬಳುಕು ಹಾಗೂ ವರ್ಚಸ್ಸು !

ಅಂದಹಾಗೆ, ನಾವೇನೂ ಸಿನಿಮಾ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ನಡುವಿನ ಸಂಬಂಧದ ಕುರಿತು ವ್ಯಾಖ್ಯಾನ ಮಾಡುತ್ತಿಲ್ಲ ; ಪ್ರಬಂಧ ರಚನೆ ಅಥವಾ ವಿಮರ್ಶೆ-ವಿಶ್ಲೇಷಣೆಯ ಉದ್ದೇಶವೂ ಇಲ್ಲ . ಈ ಎರಡೂ ಕ್ಷೇತ್ರಗಳ ನಡುವಿನ ಸಾಮ್ಯತೆಯ ಕುರಿತು ಯೋಚಿಸುವಂತೆ ಮಾಡಿದ್ದು ,- ಆಂಧ್ರಪಿಲ್ಲ ಕೀರ್ತಿ ರೆಡ್ಡಿ ಎನ್ನುವ ಹೆಣ್ಣುಮಗಳು.

ತೆಲುಗು ಸಿನಿಮಾರಂಗದಲ್ಲಿ ಮೊನ್ನೆಮೊನ್ನೆಯಷ್ಟೇ ಕೀರ್ತಿಶಿಖರದ ಉತ್ತುಂಗದಲ್ಲಿದ್ದ , ಬಾಲಿವುಡ್‌ನಲ್ಲೂ ಒಂದು ಕೈ ನೋಡಿ ಬಂದಿದ್ದ ಕೀರ್ತಿರೆಡ್ಡಿ ಸದ್ಯಕ್ಕೆ ಕೊಂಚ ಮಂಕಾಗಿದ್ದಾಳೆ. ಆ ಕಾರಣಕ್ಕೇ ಏನೋ ಕೀರ್ತಿರೆಡ್ಡಿ ಬಾಯ್‌ಫ್ರೆಂಡ್‌ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದಾಳಂತೆ. ಆಕೆಯ ಬಾಯ್‌ಫ್ರೆಂಡ್‌ ಯಾರೆಂದುಕೊಂಡಿರಿ ? - ಸಿಲಿಕಾನ್‌ ವ್ಯಾಲಿ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದ ಮುಖ್ಯಸ್ಥ ಅಜೀಂ ಪ್ರೇಂಜಿಯ ಸುಪುತ್ರ. ಸಿನಿಮಾ ಹಾಗೂ ಮಾಹಿತಿ ತಂತ್ರಜ್ಞಾನದ ನಡುವಿನ ಸಾಮ್ಯತೆ-ಸಂಬಂಧದ ಪ್ರಸ್ತಾಪ ಮಾಡಿದ್ದು ಈ ನಂಟಿನ ಕಾರಣದಿಂದಲೇ.

ಡೆಕ್ಕನ್‌ ಕ್ರಾನಿಕಲ್‌ ಪತ್ರಿಕೆ ಕೀರ್ತಿ ಹಾಗೂ ಅಜೀಂ ಪ್ರೇಂಜಿ ಪುತ್ರನ ಡೇಟಿಂಗ್‌ ಕುರಿತು ಬರೆದಿದೆ. ಸದ್ಯಕ್ಕೆ ಬಾಲಿವುಡ್‌ನಲ್ಲಿ ಕೀರ್ತಿಗೆ ಕೆಲಸವಿಲ್ಲವಂತೆ. ಉಪೇಂದ್ರ ಅಭಿನಯದ ‘ಸೂಪರ್‌ಸ್ಟಾರ್‌’ ಸಿನಿಮಾದ ಮೂಲಕ ಕೀರ್ತಿ ಕನ್ನಡಕ್ಕೂ ಬಂದುಹೋದದ್ದು ಹೆಚ್ಚಿನ ಜನಕ್ಕೆ ಗೊತ್ತೇ ಆಗಿಲ್ಲ .

ಯಾರಿಗೆ ಗೊತ್ತು - ಪ್ರೇಮ ಮದುವೆಯಲ್ಲಿ ಪರಿಣಮಿಸಿ ಕೀರ್ತಿರೆಡ್ಡಿ ಬೆಂಗಳೂರಿನ ಸೊಸೆಯಾದರೂ ಆದಾಳು ?

Post your views

ಕೀರುತಿ ಕಥಾ
ಕೀರ್ತಿ ಮುಂದೆ ಉಪ್ಪಿ ಹೆಸರೆತ್ತಬೇಡಿ
ಕೀರ್ತಿ, ಸೂಪರ್‌ ಸ್ಟಾರ್‌ನ ನೀ ಯಾಕೆ ಮರೆತೀ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada