»   » ತಮಿಳರ ಪ್ರತಿರೋಧ : ಗಂಟುಮೂಟೆ ಕಟ್ಟಿದ ಪ್ರೇಮ್‌!

ತಮಿಳರ ಪ್ರತಿರೋಧ : ಗಂಟುಮೂಟೆ ಕಟ್ಟಿದ ಪ್ರೇಮ್‌!

Posted By: Staff
Subscribe to Filmibeat Kannada

ಬೆಂಗಳೂರು : ಕಾವೇರಿ ನ್ಯಾಯಮಂಡಳಿ ತೀರ್ಪು ಖಂಡಿಸಿ, ಕಾವೇರಿ ಕಣಿವೆಯಲ್ಲಿ ಚಳವಳಿ ಮತ್ತು ಹೋರಾಟಗಳು ದಿನೇದಿನೇ ಹೆಚ್ಚುತ್ತಿವೆ. ಅತ್ತ ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದರ ಚಿತ್ರೀಕರಣಕ್ಕೆ ಸ್ಥಳೀಯರು ಅಡ್ಡಿಪಡಿಸಿದ ಘಟನೆ ನಡೆದಿದೆ.

ಸ್ಥಳೀಯರ ಅಡ್ಡಿಯಿಂದ ತಮಿಳುನಾಡಿನ ಪೊಲ್ಲಾಚಿಯಲ್ಲಿ ನಡೆಯುತ್ತಿದ್ದ ಪ್ರೇಮ್‌ ನಿರ್ದೇಶನ ಮತ್ತು ನಾಯಕತ್ವದ 'ಪ್ರೀತಿ ಏಕೆ ಭೂಮಿ ಮೇಲಿದೆ?" ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿ, ತವರಿಗೆ ಮರಳಿದೆ.

ಪ್ರೇಮ್‌ ಮತ್ತು ನಟಿ ನಮ್ರತಾ ಅಭಿನಯದ ಕೆಲವು ದೃಶ್ಯ ಮತ್ತು ಹಾಡುಗಳ ಚಿತ್ರೀಕರಣವನ್ನು ಕಳೆದ ಒಂದು ವಾರದಿಂದ ಅಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಇನ್ನೂ ನಾಲ್ಕು ದಿನಗಳ ಚಿತ್ರೀಕರಣ ಬಾಕಿ ಇತ್ತು. ಅಷ್ಟರಲ್ಲಿಯೇ ಸ್ಥಳೀಯರು ಅಡ್ಡಿಪಡಿಸಿದರು ಎಂದು ಚಿತ್ರದ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್‌ ತಿಳಿಸಿದ್ದಾರೆ.

ಮಾರ್ಚಿಯಲ್ಲಿ ಮದುವೆ : ಮಾರ್ಚಿಯಲ್ಲಿ ಪ್ರೇಮ್‌ ಮತ್ತು ರಕ್ಷಿತಾ ಮದುವೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಪ್ರೇಮ್‌ ಪ್ರತಿಕ್ರಿಯಿಸಿಲ್ಲ.
(ದಟ್ಸ್‌ ಕನ್ನಡ ವಾರ್ತೆ)

English summary
Noted Kannada Director Prem and his team members, shooting a song sequence for their new film 'Preeti Eke Bhoomi Melide' were forced to pack up from Pollachi in Coimbatore, Tamil Nadu, following a protest on Friday(Feb.09).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada