»   » ಹಾಲಿವುಡ್‌ನ ಕನಸು ಕಂಗಳ ಚೆಲುವೆ ಐಶ್ವರ್ಯ ರೈ, ಹಾಲಿವುಡ್‌ ಹೊಸಿತಿಲು ಮೆಟ್ಟುವ ಮುನ್ನ ರವೀಂದ್ರನಾಥ ಠಾಗೋರರ ‘ಬಿನೋದಿನಿ’ಗೆ ಜೀವ ತುಂಬಲಿದ್ದಾರೆ !

ಹಾಲಿವುಡ್‌ನ ಕನಸು ಕಂಗಳ ಚೆಲುವೆ ಐಶ್ವರ್ಯ ರೈ, ಹಾಲಿವುಡ್‌ ಹೊಸಿತಿಲು ಮೆಟ್ಟುವ ಮುನ್ನ ರವೀಂದ್ರನಾಥ ಠಾಗೋರರ ‘ಬಿನೋದಿನಿ’ಗೆ ಜೀವ ತುಂಬಲಿದ್ದಾರೆ !

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಮಸ್ತ್‌ ಮಸ್ತ್‌ ಹುಡುಗಿ  --> ಲೇಖನಮಾರ್ಚ್‌ 10, 2003ನೊಬೆಲ್‌ ಪ್ರಶಸ್ತಿ ವಿಜೇತ ಏಕೈಕ ಭಾರತೀಯ ಸಾಹಿತಿ ರವೀಂದ್ರನಾಥ್‌ ಠಾಗೋರರ ಕೃತಿಯನ್ನಾಧರಿಸಿದ ಈ ಚಿತ್ರದಲ್ಲಿ ಐಶ್‌ , ಬಿನೋದಿನಿಯಾಗಿ ನಟಿಸಲಿದ್ದಾರೆ. ಬಿನೋದಿನಿ ಪಾತ್ರ ತುಂಬ ಸಂಕೀರ್ಣವಾದ್ದು. ಹೇಳಿ ಕೇಳಿ ಬಿನೋದಿನಿ ಠಾಗೋರರ ಸೃಷ್ಟಿ . ಮನುಷ್ಯ ಮನುಷ್ಯನ ನಡುವಿನ ಸಂಕೀರ್ಣ ಸಂಬಂಧಗಳು, ಬದುಕನ್ನು ಎದುರಿಸಲು ಹೋರಾಡುವ ಹೆಣ್ಣು ಮಗಳ ಕ್ರಾಂತಿ. ಐಶ್ವರ್ಯ ಮಾತಲ್ಲೇ ಹೇಳುವುದಿದ್ದರೆ ‘ದಿಸ್‌ ಈಸ್‌ ಎ ಚಾಲೆಂಜಿಂಗ್‌ ರೋಲ್‌’.

ಕಥಾ ನಾಯಕಿ ಬಿನೋದಿನಿ ಯುವ ವಿಧವೆ. ಸ್ನೇಹಿತೆಯಾಬ್ಬಳ ನೆರವಿನಿಂದ ಬಿನೋದಿನಿಯ ಒಂಟಿತನ ಮತ್ತು ಬಡತನ ಎರಡೂ ನಿವಾರಣೆಯಾಗುತ್ತದೆ. ಆದರೆ ಎಲ್ಲವೂ ಸುಗಮವಾಗಿಯೇ ಸಾಗಬೇಕಲ್ಲ . ಸ್ನೇಹಿತೆಯ ಗಂಡ ಬಿನೋದಿನಿಯನ್ನು ಪ್ರೀತಿಸಲಾರಂಭಿಸುತ್ತಾನೆ. ಸಮಸ್ಯೆ ಶುರುವಾಗುತ್ತದೆ. ಕಥೆ ಆರಂಭವಾಗುವುದು ಈ ಸಮಸ್ಯೆಯಿಂದಲೇ.

ಋತುಪರ್ಣ ಘೋಷ್‌ ಬಿನೋದಿನಿಯ ಪಾತ್ರಕ್ಕೆ ಮೊದಲು ಆರಿಸಿದ್ದು ನಂದಿತಾ ದಾಸ್‌ರನ್ನು. ಕಾಸ್ಟ್ಲಿ ನಾಯಕಿ ಎನಿಸಿಕೊಂಡಿದ್ದ ಐಶ್‌ ‘ದೇವದಾಸ್‌’ ಚಿತ್ರ ಹಿಟ್‌ ಆಗುತ್ತಲೇ ತನ್ನ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದರು. ‘ಚೋಖೇರ್‌ ಬಾಲಿ’ ಚಿತ್ರ ಸಣ್ಣ ಬಜೆಟ್‌ನದ್ದು. ಆದರೆ ಐಶ್‌ಗೆ ಏನು ಮೂಡ್‌ ಬಂತೋ, ಸಂಭಾವನೆ ಒಪ್ಪಂದದಲ್ಲಿ ಪೂರ್ಣ ಸಹಕಾರ ತೋರಿದ್ದಾರಂತೆ.

ಚಿತ್ರದಲ್ಲಿ ಬಂಗಾಳಿ ಚಿತ್ರರಂಗದ ಪ್ರಸಿದ್ಧ ನಟ ಪ್ರಸೇನ್‌ಜಿತ್‌ ಚಟರ್ಜಿ ಜಮೀನ್ದಾರನ ಪಾತ್ರದಲ್ಲಿ ನಟಿಸುವರು. ಜಮೀನ್ದಾರರ ಪತ್ನಿಯಾಗಿ ರೀಮಾ ಸೇನ್‌.

ಭಾರತದಲ್ಲಿ ಅಕ್ಟೋಬರ್‌ ಹೊತ್ತಿಗೆ ಚಿತ್ರ ಬಿಡುಗಡೆಯಾಗಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ‘ಚೋಖೇರ್‌ ಬಾಲಿ’ಯನ್ನು ತೆರೆ ಕಾಣಿಸುವ ಉದ್ದೇಶ ಇದೆ.

ಚಿತ್ರಕ್ಕೆ ಅವಾರ್ಡ್‌ ಬರಬಹುದು ಎಂಬ ದೂರದ ಕನಸು ಐಶ್‌ ಕಣ್ಣಲ್ಲಿರಬಹುದೇ ? ಯಾಕಾಗಬಾರದು ? ಪ್ರಶಸ್ತಿಯ ಗರಿಯಾಂದಿಗೇ ಐಶ್ವರ್ಯ ಹಾಲಿವುಡ್‌ನ ಹೊಸಿತಿಲು ಮೆಟ್ಟಲೂಬಹುದು !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada