»   » ನಾಲ್ಕು ವರ್ಷದ ಬಳಿಕ ‘ದುರ್ಗಿ’ ಬರುತ್ತಿದ್ದಾಳೆ !

ನಾಲ್ಕು ವರ್ಷದ ಬಳಿಕ ‘ದುರ್ಗಿ’ ಬರುತ್ತಿದ್ದಾಳೆ !

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಡೆಸ್ಕ್‌
ನಾಲ್ಕು ವರ್ಷಗಳ ನಂತರ ಮಾಲಾಶ್ರೀ ಅಭಿನಯದ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ.

ಮಾಲಾಶ್ರೀ ಅಭಿನಯದ ‘ದುರ್ಗಿ’ ಚಿತ್ರದ ಚಿತ್ರೀಕರಣ ಈಗ ಪೂರ್ಣಗೊಂಡಿದ್ದು , ಸದ್ಯದಲ್ಲೇ ‘ದುರ್ಗಿ’ ತೆರೆಗೆ ಬರಲಿದೆ. ನಾಲ್ಕು ವರ್ಷಗಳ ಹಿಂದೆ ತೆರೆಕಂಡಿದ್ದ ‘ಚಾಮುಂಡಿ’ಯ ನಂತರ ಮಾಲಾಶ್ರೀ ಮತ್ತೆ ಬಣ್ಣ ಹಚ್ಚಿರಲಿಲ್ಲ . ಮಾಲಾಶ್ರೀ ಅವರ ಪುನರವತಾರದ ‘ದುರ್ಗಿ’ ಚಿತ್ರದ ಕುರಿತು ಆಕೆಗೆ ಅಪಾರ ವಿಶ್ವಾಸವಿದೆ.

‘ದುರ್ಗಿ’ಗಾಗಿ 145 ದಿನಗಳ ಚಿತ್ರೀಕರಣ ನಡೆದಿದೆ. ಮಾಲಾಶ್ರೀ ಅವರ ಪತಿ ರಾಮು ಅವರೇ ಚಿತ್ರವನ್ನು ನಿರ್ಮಿಸಿದ್ದು , ರಾಮು ಅವರ ಟೇಸ್ಟ್‌ ಚಿತ್ರದ ಪ್ರತಿ ಫ್ರೇಂನಲ್ಲೂ ಇದೆ ಎನ್ನಲಾಗಿದೆ. ರಾಮು ನಿರ್ಮಾಣದ ಚಿತ್ರಗಳಲ್ಲಿ ‘ಎಕೆ-47’ ನಂತರದ ಭಾರೀ ಬಜೆಟ್ಟಿನ ಚಿತ್ರ ಎನ್ನುವ ಅಗ್ಗಳಿಕೆ ‘ದುರ್ಗಿ’ಗೆ ಸಂದಿದೆ.

ಚಿತ್ರದ ಹೈಲೈಟ್‌ ಎಂದರೆ ಸಾಹಸ ದೃಶ್ಯಗಳು. ಸಾಹಸ ದೃಶ್ಯಗಳಲ್ಲಿ ಮಾಲಾಶ್ರೀ ಅತ್ಯಂತ ನೈಜವಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಸಾಹಸ ದೃಶ್ಯಗಳು ದುರ್ಗಿ ಯಲ್ಲಿವೆ ಎನ್ನುತ್ತಾರೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಯುವ ನಿರ್ದೇಶಕ ಪಿ.ರವಿಶಂಕರ್‌.

ರಾಮು ನಿರ್ಮಾಣದ, ರವಿಚಂದ್ರನ್‌ ಅಭಿನಯದ ‘ಮಲ್ಲ’ ಚಿತ್ರ ಆರಂಭಿಕ ಯಶಸ್ಸು ಕಂಡಿದೆ. ಈ ಯಶಸ್ಸಿನಿಂದ ಉತ್ತೇಜಿರಾಗಿರುವ ರಾಮು ‘ದುರ್ಗಿ’ಯ ಕುರಿತೂ ಅಪಾರ ವಿಶ್ವಾಸ ಹೊಂದಿದ್ದಾರೆ.

ದುರ್ಗಿ ಗೆಲ್ಲಲಿ ; ಆ ಗೆಲುವು ಗಾಂಧಿನಗರದ ಪಾಲಿಗೆ ಟಾನಿಕ್ಕಾಗಲಿ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada