»   » ಪುನೀತ್‌ರ ‘ಅರಸು’ ಚಿತ್ರಕ್ಕೆ ರಾಜಣ್ಣನಿಂದ ಹಾಡು

ಪುನೀತ್‌ರ ‘ಅರಸು’ ಚಿತ್ರಕ್ಕೆ ರಾಜಣ್ಣನಿಂದ ಹಾಡು

Subscribe to Filmibeat Kannada

ಸದಾಶಿವ ನಗರದ ರಾಜ್‌ ನಿವಾಸದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಚಿತ್ರಕ್ಕೆ ‘ಅರಸು’ ಎಂದು ಹೆಸರಿಟ್ಟಿದ್ದೇವೆ. ‘ಅ’ ಇದ್ದಲ್ಲಿ ‘ಹ’ ಆದರೆ ‘ಹರಸು’ ಎಂದಾಗುತ್ತದೆ ಎಂದರು.

‘ಅರಸು’ ಎಂಬ ಹೆಸರು ಕೊಟ್ಟಿದ್ದು ವರದಪ್ಪ. ಅರಸು ಅಂದರೆ ರಾಜ. ಅರಸು ಅಂದರೆ ಹುಡುಕಾಟ. ದೇವರನ್ನು ಹುಡುಕುವ ನಮ್ಮ ಹುಡುಕಾಟ ನಿರಂತರ ಎಂದು ಒಂದು ಕ್ಷಣ ರಾಜ್‌ ಮೌನವಹಿಸಿದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಜರಿದ್ದರು.

ವಜ್ರೇಶ್ವರಿ ಕಂಬೈನ್ಸ್‌ ನಿರ್ಮಾಣದ ಈ ಚಿತ್ರದಲ್ಲಿ ರಾಜ್‌ ಒಂದು ಹಾಡು ಹಾಡುವ ಸಾಧ್ಯತೆಯಿದೆ. ‘ಆಕಾಶ್‌’ ಚಿತ್ರದ ನಿರ್ದೇಶಕ ಮಹೇಶ್‌ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada