»   » ‘ಒಡಹುಟ್ಟಿದವಳು’ ಚಿತ್ರದಲ್ಲಿ ರವಿಚಂದ್ರನ್‌, ರಕ್ಷಿತಾ, ರಾಧಿಕಾ!

‘ಒಡಹುಟ್ಟಿದವಳು’ ಚಿತ್ರದಲ್ಲಿ ರವಿಚಂದ್ರನ್‌, ರಕ್ಷಿತಾ, ರಾಧಿಕಾ!

Subscribe to Filmibeat Kannada

ರವಿ ಮಾಮನ ಹೊಸ ಪ್ರಯೋಗ ಆರಂಭಗೊಂಡಿದೆ. ಕನಸುಗಾರ ರವಿಚಂದ್ರನ್‌ ಏನು ಮಾಡಿದರೂ ಸಖತ್ತಾಗಿಯೇ ಸುದ್ದಿಯಾಗುತ್ತದೆ. ರವಿಯ ಹೊಸ ಚಿತ್ರ ‘ಒಡಹುಟ್ಟಿದವಳು’ ಚಿತ್ರದಲ್ಲಿ ಸಾಕಷ್ಟು ಮಿಂಚುಗಳಿವೆ.

ಕರಾವಳಿ ಬೆಡಗಿ ರಾಧಿಕಾ ಮತ್ತು ಸುಂಟರಗಾಳಿ ರಕ್ಷಿತಾ ಈ ಚಿತ್ರದಲ್ಲಿದ್ದು, ಮೂರು ‘ರ’(ರವಿಚಂದ್ರನ್‌, ರಾಧಿಕಾ, ರಕ್ಷಿತಾ)ಗಳ ಮಿಲನ ಎಂತಹ ಫಲಿತಾಂಶ ನೀಡುತ್ತದೆಯೇ ಕಾದು ನೋಡಬೇಕು. ತಮಿಳಿನ ‘ಪೋರ್ಕಾಲಂ’(ಚೆರಣ್‌ರ ಈ ಸೂಪರ್‌ ಹಿಟ್‌ ಸಿನಿಮಾದಲ್ಲಿ ಮುರಳಿ, ಮೀನಾ, ಸಾಂಘವಿ ನಟಿಸಿದ್ದರು)ಕನ್ನಡದಲ್ಲಿ ‘ಒಡಹುಟ್ಟಿದವಳು’ ರೂಪ ತಾಳುತ್ತಿದೆ.

ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಗ್ಲಾಮರಸ್‌ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬಳುಕುತ್ತಿದ್ದ ರಕ್ಷಿತಾ ಮತ್ತು ರಾಧಿಕಾ, ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ.

ಕನಸುಗಾರ ರವಿಚಂದ್ರನ್‌ ಈ ಚಿತ್ರದಲ್ಲಿ ಕನಿಷ್ಠ ಐದು ಕಡೆ ಪ್ರೇಕ್ಷಕರು ಕಣ್ಣೀರು ಸುರಿಸುವಂತೆ ಮಾಡಲಿದ್ದಾರಂತೆ! ಸಂಗೀತ ಮತ್ತು ಸಾಹಿತ್ಯ ಸಹಾ ಅವರದೇ. ಚಿತ್ರದ ನಿರ್ಮಾಣದ ಹೊಣೆಯನ್ನು ಮಂಜು ಹೊತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada