»   » ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ

ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ

Subscribe to Filmibeat Kannada


ಹಾಸ್ಯನಟ ಸತೀಶ್‌ ಶಾ ಖುಲಾಸೆ, ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಸೆರೆವಾಸ

ಜೋಧ್‌ಪುರ : ದೊರೆ ಮಾಡಿದರೆ ದಂಡಕ್ಕಿಲ್ಲ ಎಂಬ ಮಾತು ಸುಳ್ಳಾಗಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ, ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಸೋಮವಾರ ಸ್ಥಳೀಯ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25,000 ರೂಪಾಯಿ ದಂಡ ವಿಧಿಸಿದೆ.

ಮುಖ್ಯ ನ್ಯಾಯಾಧೀಶ ಬ್ರಿಜೇಂದ್ರಕುಮಾರ್‌ ಜೈನ್‌ ಈ ತೀರ್ಪು ನೀಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಲಾಗಿದೆ. ಹಾಸ್ಯನಟ ಸತೀಶ್‌ ಶಾ ಸೇರಿದಂತೆ ಇತರ ಏಳು ಜನ ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ.

1998ರಲ್ಲಿ ಇಲ್ಲಿನ ಘೋರಾ ಫಾರ್ಮ್‌ ಹೌಸ್‌ನಲ್ಲಿರುವ ಕೃಷ್ಣ ಮೃಗವನ್ನು ಸಲ್ಮಾನ್‌ ಹತ್ಯೆಗೈದಿದ್ದರು. ಈ ಕುರಿತು ಆರೋಪಿ ಪರ ವಕೀಲರ ವಾದವನ್ನು ನ್ಯಾಯಾಧೀಶರು ಮಾರ್ಚ್‌ 28ರಂದು ಆಲಿಸಿ, ಏಪ್ರಿಲ್‌ 10ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದರು.

ಅಳಿವಿನಂಚಿನಲ್ಲಿರುವ ಪ್ರಾಣಿ ಕೊಂದ ಕಾರಣ, ಇದೇ ನ್ಯಾಯಾಲಯ ಫೆಬ್ರವರಿ 17ರಂದು ಸಲ್ಮಾನ್‌ಖಾನ್‌ಗೆ ಕಾರಾಗೃಹವಾಸ ಶಿಕ್ಷೆ ವಿಧಿಸಿತ್ತು. ಸಲ್ಮಾನ್‌ಖಾನ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಉದ್ದೇಶದಿಂದ, ತೀರ್ಪನ್ನು ಒಂದು ತಿಂಗಳ ಮಟ್ಟಿಗೆ ಅಮಾನತ್ತಿನಲ್ಲಿಡಲಾಗಿತ್ತು.

ಸಲ್ಮಾನ್‌ಖಾನ್‌, ಇನ್ನೂ ನಾಲ್ಕು ಪ್ರಕರಣಗಳಲ್ಲಿ ಕದ್ದು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ಬಾಲಿವುಡ್‌ ತಾರೆಗಳಾದ ಸೈಫ್‌ ಅಲಿಖಾನ್‌, ನೀಲಂ, ಟಬು ಹಾಗೂ ಸೋನಾಲಿ ಬೇಂದ್ರೆ ಈ ಪ್ರಕರಣಗಳಲ್ಲಿ ಸಹಆರೋಪಿಗಳಾಗಿದ್ದಾರೆ.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada