»   » ಪ್ರೇಮ ಕವಿಯ ಕಲ್ಯಾಣೋತ್ಸವ

ಪ್ರೇಮ ಕವಿಯ ಕಲ್ಯಾಣೋತ್ಸವ

Subscribe to Filmibeat Kannada

ಮದುವೆ ಯಾವಾಗ ಎಂದು ಪತ್ರಕರ್ತರು ಕೇಳಿದ ತಕ್ಷಣ, ಸಂಕೋಚದಿಂದ ಆಕಾಶ ನೋಡುದ್ದ ಕನಸುಗಳಲ್ಲಿಯೇ ಪುಳಕಗೊಳ್ಳುತ್ತಿದ್ದ ಕಲ್ಯಾಣ್‌ಗೆ ಈಗ ಕಲ್ಯಾಣೋತ್ಸವದ ಸಂಭ್ರಮ.

ಮೊನ್ನೆಯಷ್ಟೆ ರಾಜಾಜಿನಗರದ ಶ್ರೀರಾಘವೇಂದ್ರ ದೇವಸ್ಥಾನ(ಪುಣ್ಯಧಾಮ)ದಲ್ಲಿ ಸದ್ದಿಲ್ಲದೇ ಬೆಳಗಾವಿ ಚೆಲುವೆ ಐಶ್ವರ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕಲ್ಯಾಣ್‌, ಈಗ ಕಲ್ಯಾಣ ಪರ್ವದಲ್ಲಿ ನಿಂತಿದ್ದಾರೆ. ಜೂನ್‌ 10ರಂದು ನಗರದ ನಾಗದೇವಕಿ ಪ್ಯಾಲೇಸ್‌ನಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ.

ಐಶ್ವರ್ಯ ಸಹಾ ಸಂಗೀತದಲ್ಲಿ ಪಳಗಿದವಳೇ ಆಗಿರುವುದರಿಂದ, ಕಲ್ಯಾಣ್‌ ಪಾಲಿಗೆ ನಾದ-ಶ್ರುತಿಗಳು ಹಿತವಾಗಿ ಸೇರಿದಂತಾಗಿದೆ. ಮಧ್ವ ಸಮುದಾಯದ ಹುಡುಗಿ ಐಶ್ವರ್ಯ ಅವರ ಮುಂದೆ, ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಎಂದು ಹಾಡಿಕೊಳ್ಳಲು ಐಯ್ಯಂಗಾರ್‌ ಹುಡುಗ ಕಲ್ಯಾಣ್‌ಗೆ ಈಗ ಸದವಕಾಶ.

ಅರ್ಥಪೂರ್ಣ ಹಾಡುಗಳ ಮೂಲಕ ನಾಯಕ ನಟನ ಇಮೇಜ್‌ ಪಡೆದಿರುವ ಕೆ.ಕಲ್ಯಾಣ್‌ ಎಂದರೆ ಎಲ್ಲರಿಗೂ ಪಟ್ಟನೇ ನೆನಪಾಗುವುದು ಅಮೃತವರ್ಷಿಣಿ, ನಮ್ಮೂರ ಮಂದಾರ ಹೂವೇ...ಇತ್ಯಾದಿ ಇತ್ಯಾದಿ. ಜೋಡಿಯಾಗುತ್ತಿರವ ಕಲ್ಯಾಣ್‌ ಮತ್ತಷ್ಟು ಗಟ್ಟಿಕಾಳುಗಳಿಂದ ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಲಿ ಎಂಬ ಬಯಕೆ ಅಭಿಮಾನಿಗಳದು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada