For Quick Alerts
  ALLOW NOTIFICATIONS  
  For Daily Alerts

  ರಾಜಕುಮಾರನಿಲ್ಲದ ರಾಜ್ಯದಲ್ಲಿ ಕಂಬನಿ ನಿಂತೇ ಇಲ್ಲ!

  By Staff
  |

  ಶರಣು ಶರಣಾರ್ಥಿ.

  ಕವಿತೆ ಓದುತ್ತಿದ್ದಂತೆ ‘ಹೃದಯದಲಿ ಇದೇನಿದು ದುಃಖಧಾರೆಯ ನದಿಯೊಂದು ಓಡಿದೆ...’ ಅನಿಸಿತು...

  ಬಹಳ ಬಹಳ ಬಹಳ ಅರ್ಥಪೂರ್ಣವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದೀರಿ. ನಿಮ್ಮ ಪ್ರಾರ್ಥನೆಯಲ್ಲಿ ನಾನೂ ಸೇರಿದ್ದೇನೆ.

  ಇತಿ

  - ಶ್ರೀವತ್ಸ ಜೋಶಿ

  *

  ಮಾನ್ಯರೇ,

  ನಟ ಸಾರ್ವಭೌಮ ರಾಜಕುಮಾರರ ಸ್ಮರಣೆಗಾಗಿ ಹಲವರು ಸ್ಮಾರಕಗಳನ್ನು ಕಟ್ಟುವ ವರದಿಗಳನ್ನು ಪತ್ರಿಕೆಗಳಲ್ಲೂ, ಟಿ. ವಿ. ಯಲ್ಲೂ ಪ್ರತೀದಿನ ಕೇಳುತ್ತಿದ್ದೇವೆ ಅಥವಾ ನೋಡುತ್ತಿದ್ದೇವೆ. ಸರಳತೆಯ ಪ್ರತೀಕದಂತಿದ್ದ ಡಾ. ರಾಜಕುಮಾರ್‌ ಆಡಂಬರರಹಿತ, ನಿಷ್ಕಳಂಕ ಜೀವನವನ್ನು ನಡೆಸಿದವರು.

  ವಿನಯ ಮತ್ತು ಶೃದ್ಧೆಗಳಿಂದ ಕಲಾರಾಧನೆ ಮಾಡಿದ ಮಹಾಪುರುಷನಿಗೆ ಸ್ಮಾರಕವಾಗಿ ಯಾವುದೇ ಮೂರ್ತಿಗಳನ್ನಾಗಲೀ, ರಂಗಮಂದಿರಗಳನ್ನಾಗಲೀ, ಉದ್ಯಾನವನಗಳನ್ನಾಗಲೀ, ನಿರ್ಮಿಸುವ ಬದಲು, ಅವರ ಸ್ಮರಣೆಗಾಗಿ ಎಲ್ಲ ರಾಜಕಾರಣಿಗಳೂ ಮತ್ತು ಅಭಿಮಾನಿಗಳೂ, ಈ ನೀತಿ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಮಾಣ ಮಾಡಿ, ಅದರಂತೆ ನಡೆದುಕೊಂಡರೆ, ನಮ್ಮ ನಾಡು, ನುಡಿ ಮತ್ತು ಬಡ ಜನತೆಯ ಸರ್ವತೋಮುಖ ಉದ್ಧಾರವಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ.

  ಇದಿಗೋ ನಿಮ್ಮ ಬಲಗೈಯನ್ನೆತ್ತಿ ಈ ಪ್ರತಿಜ್ಞೆಯನ್ನು ಮಾಡಿ :

  1. ಲೋಕೋಪಯೋಗಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಕಾರ್ಯಗತ ಮಾಡಿ, ಪ್ರತೀ ಪೈಸೆಯನ್ನೂ ಕೂಡಾ ಜನರಿಗೆ ತಲಪಿಸುವಂತೆ ಡಾ. ರಾಜಕುಮಾರ್‌ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.
  2. ನನ್ನ ಮೇಲೆ ಜನರು ಇಟ್ಟ ವಿಶ್ವಾಸಕ್ಕೆ ಧಕ್ಕೆ ಬರದಂತೆ, ಭ್ರಷ್ಟಾಚಾರವಿಲ್ಲದೆ, ನಿಸ್ವಾರ್ಥ ಸೇವೆಯನ್ನು ನನ್ನ ನಾಡು ಮತ್ತು ನುಡಿಗೆ ಮಾಡಲು, ಡಾ. ರಾಜಕುಮಾರ್‌ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.
  3. ನಾನು ಸರಳವಾದ, ಆಡಂಬರ ರಹಿತವಾದ ಜೀವನವನ್ನು ಪ್ರಾಮಾಣಿಕವಾಗಿ ನಡೆಸಲು, ಡಾ. ರಾಜಕುಮಾರ್‌ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.
  4. ನಾನು ಇನ್ನು ಎಂದೆಂದೂ, ಲಂಚವನ್ನು ಕೊಡುವುದೂ ಇಲ್ಲ, ಸ್ವೀಕರಿಸುವುದೂ ಇಲ್ಲ, ಎಂದು ಪ್ರಮಾಣ ಮಾಡುತ್ತೇನೆ.
  5. ಜನತೆಯಲ್ಲಿ ಜಾತಿ, ಮತ, ಕೋಮುಗಳ ದ್ವೇಷವನ್ನು ಬಿತ್ತಿ, ಅವರನ್ನು ಒಡೆದು ಆಳದೇ, ಅವರನ್ನೆಲ್ಲ ಒಂದುಗೂಡಿಸುವ ನಿರ್ಧಾರವನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಲು ಪ್ರಮಾಣ ಮಾಡುತ್ತೇನೆ.
  6. ನಾನು ರಾಜಕೀಯದಲ್ಲಿ ಇರುವ ತನಕ, ನನ್ನ ಜೀವನ ಮಟ್ಟ ಮತ್ತು ಒಟ್ಟು ಆಸ್ತಿ ಸಾಮಾನ್ಯ ಮಧ್ಯಮ ವರ್ಗದ ಜನರಿಗಿಂತ ಜಾಸ್ತಿ ಇರದಂತೆ ನೋಡಿಕೊಳ್ಳುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.
  7. ನನ್ನ ನಿಯತ್ತು, ಮತ್ತು ಶೀಲವನ್ನು ಅತೀ ಉನ್ನತ ಮಟ್ಟದಲ್ಲಿ ಉಳಿಸಿಕೊಳ್ಳುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.
  8. ಸರಳತೆ, ಸಜ್ಜನಿಕತೆ, ಮತ್ತು ಉದಾರತೆಯಲ್ಲಿ ಅವರ ಆದರ್ಶವನ್ನು ಅನುಸರಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.
  9. ಸದಾ ನಗುಮೊಗದಿಂದ, ನನ್ನ ಸಹವಾಸದಲ್ಲಿರುವವರನ್ನು ಸಂತೋಷವಾಗಿ ಇರುವಂತೆ ನೋಡಿಕೊಳ್ಳಲು ಪ್ರಮಾಣ ಮಾಡುತ್ತೇನೆ.
  10. ಹಣಕ್ಕಾಗಿ, ರಾಜಕೀಯ ಪ್ರಭಾವಕ್ಕಾಗಿ, ನನ್ನ ಆತ್ಮಸಾಕ್ಷಿಯನ್ನು ಎಂದೂ ಮಾರುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ.

  ಈ ನನ್ನ ಪ್ರತಿಜ್ಞೆಗಳನ್ನು ಖಂಡಿತವಾಗಿಯೂ ನಡೆಸುವುದಾಗಿ, ಡಾ. ರಾಜಕುಮಾರ್‌ ಹೆಸರಿನಲ್ಲಿ ಇನ್ನೊಮ್ಮೆ ಪ್ರಮಾಣ ಮಾಡುತ್ತೇನೆ.

  - ಕುಂಭಾಸಿ ಶ್ರೀನಿವಾಸ ಭಟ್‌, ಟ್ರಾಯ್‌ು, ಮಿಶಿಗನ್‌

  *

  ಕನ್ನಡಾಂಬೆಯ ತಾಯಿಗೆ ತಕ್ಕ ಮಗ ಇನ್ನಿಲ್ಲ
  ‘ಬೇಡ’ ನಾಗಿ ಎಲ್ಲರಿಗೂ ಬೇಕಾದ ಪರೋಪಕಾರಿ ಬೇರಿಲ್ಲ
  ಶಂಕರನ ಗುರುವಾಗಿ ಬಡವರ ಬಂಧುವಾದ ಬೆಟ್ಟದ ಹುಲಿ
  ಚಂದವಳ್ಳಿಯ ತೋಟದ ಬಂಗಾರದ ಹೂವು ಇನ್ನೆಲ್ಲಿ???

  ಸಂಪತ್ತಿಗೆ ಸವಾಲು ಹಾಕಿದ ಸಜ್ಜನಿಕೆಯ ದೇವತಾ ಮನುಷ್ಯ
  ಹುಲಿಯ ಹಾಲಿನ ಮೇವುಂಡ ಕರುನಾಡ ಮೇಯರ್‌ ಮುತ್ತಣ್ಣ
  ಬಡವ ಬಲ್ಲಿದರಿಗೊಂದೇ ಭಾವ ನೀಡಿದ ನಟಸಾರ್ವಭೌಮ
  ಕನ್ನಡಕೆ ಕನ್ನಡಿಗರಿಗೆ ಜಾಕ್ಪಾಟ್‌ ಆಗಿಹ ಮಿಸ್ಟರ್‌ ರಾಜ್‌ ಕುಮಾರ್‌

  ಬದುಕಿನಲೂ ಸಿಪಾಯಿ ರಾಮು ಈ ರಾಜ ನನ್ನ ರಾಜ
  ದಾರಿ ತಪ್ಪಿದ ಮಗನಿಗೆ ಪ್ರೇಮದ ಕಾಣಿಕೆ ನೀಡಿದವನೀತ
  ತ್ರಿಮೂರ್ತಿಗಳೊಂದಿಗೆ ಉಯ್ಯಾಲೆಯಾಡಿದ ನಮ್ಮ ಕೃಷ್ಣ ದೇವರಾಯ
  ಭಕ್ತನಾಗಿ, ಸಂತನಾಗಿ, ಕಿಲಾಡಿಯಾಗಿ ಮೆರೆದ ರಾಜಶೇಖರ

  ಬಂಗಾರದ ಪಂಜರದಿಂದ ಬಿಡುಗಡೆ ಪಡೆದ ಬಂಗಾರದ ಮನುಷ್ಯ
  ಕಾಮನ ಬಿಲ್ಲಿನಂತೆ ಮಿಂಚಿ ಬೆಳಗಿದ ಧನ್ಯತೆಯ ಜೀವ ಸಾಕ್ಷಾತ್ಕಾರ
  ಜಗ ಮೆಚ್ಚಿದ ಮಗನಾಗಿ ಬಾಳಿದ ವಿಜಯನಗರದ ವೀರಪುತ್ರ
  ಧ್ರುವ ತಾರೆಯಾದ ಮಣ್ಣಿನ ಮಗ ಹೊಸ ಬೆಳಕಿನೆಡೆ ನಡೆದಿಹನು

  ಗಾಂಧಿನಗರದ ದೇವರ ಗೆದ್ದ ಮಾನವ ವಿಧಿ ವಿಲಾಸಕೆ ದಾಳವಾದನೆ???
  ದಶಾವತಾರಿಯ ಬದುಕು ಆಕಸ್ಮಿಕವಾಗಿ ಗಾಳಿ ಗೋಪುರವಾಯಿತೆ???
  ಮಾನವತ್ವಕೆ ನಾಂದಿ ಹಾಡಿದ ನಂದಾ ದೀಪ ನಂದಿ ಹೋಯಿತೆ???
  ಅಗಣಿತ ತಾರಾ ಗಣದೊಂದಿಗಿನ್ನು ಕಾಣಲಿವೆ ಎರಡು ನಕ್ಷತ್ರಗಳು

  ಕಸ್ತೂರಿ ನಿವಾಸದ ಕರುನಾಡ ಕೋಗಿಲೆ ಇಂದು ಚರಮಗೀತೆ ಹಾಡಿದೆ
  ಚಲಿಸುವ ಮೋಡಗಳಿಗೆ, ದೇವರ ಮಕ್ಕಳಿಗೆ ಮಾರ್ಗದರ್ಶಿಯಾಗಲಿದೆ
  ತಾಯಿ ಮತ್ತು ನ್ಯಾಯವೇ ದೇವರೆಂದು ಪ್ರತಿಧ್ವನಿಸಿ ಬಾಳು ಬೆಳಗಿಸಲಿದೆ
  ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮೆಯರನು ನಾದಮಯವಾಗಿಸಲಿದೆ

  - ರವಿ ಕಲ್ಮಠ್‌

  *

  ಸಾರ್‌!

  ನಾವು ಕನ್ನಡಿಗರು ಇರೋದೇ ಹೀಗೆ! ನೂರಾರು ಜನರ ಬದಲಿ, ನಿಜವಾದ ರಾಜ್‌ ಪ್ರೇಮಿಗಳಾದ ಕೈಬೆರಳೆಣಿಕೆ ಜನರಾದರೂ ಅಲ್ಲಿ ಸೇರಿದ್ದರಲ್ಲ ಅಷ್ಟು ಸಾಕು! ಅದೇ ಸಂತೋಷದ ಸಂಗತಿ. ತಮ್ಮ ಜಾಲತರಂಗ ವಸ್ತುನಿಷ್ಠವಾಗಿದ್ದು ನಮ್ಮ ಮನ ಮುಟ್ಟಿತು.

  ‘ಅಕ್ಕಿ, ಬೇಳೆ, ಹಾಗಲ ಕಾಯಿ ಮತ್ತು ಹೀರೆ ಕಾಯಿಗಳ ಪಟ್ಟಿ ’ - ನಮ್ಮನ್ನು ಪುನಃ ನಿಜಜೀವನದ ಕಡೆಗೆ ಸಾಗಿಸುವ ‘ನೆನಪಿನ ಚೀಟಿ’ ಕೂಡಾ ಹೌದು.

  The show must go on!

  ಅತ್ಮೀಯ ವಂದನೆಗಳು.

  - ಮಧುಸೂದನ ಪೆಜತ್ತಾಯ, ಬಾಳೆಹೊಳೆ

  *

  ನಟರಾಜ್‌ ಅವರಿಗೆ ನಮಸ್ಕಾರ

  ನಮ್ಮ ಜನರು ಊಟ ಉಪಚಾರಗಳ ಕೂಟಗಳಿಗೆ ಹಾಜರ್‌. ಒಳ್ಳೆ ಸಂಗೀತದ ಕಾರ್ಯಕ್ರಮಗಳಿಗೆ ಬರೋದಿಲ್ಲ. ಸಾಹಿತ್ಯ ಗೋಷ್ಠಿಗಳಿಗೆ ಬರೋದಿಲ್ಲ. ಸಂಗೀತ ಕಲಾನಿಧಿ ಶ್ರೀಕಂಠನ್‌ ಅವರು ಪಾಠ ಕಲಿಸುವೆ ಬನ್ನಿ ಎಂದು ಖುದ್ದಾಗಿ ಕರೆದರು 4 ಜನ ಬರಲಿಲ್ಲ. ಗಣಕ ಯಂತ್ರದ ಮುಂದು ಕುಳಿತು 4,5 ಪುಟಗಳನ್ನು 4,5 ನಿಮಿಷದಲ್ಲಿ ಬರೆಯುತ್ತಾರೆ, ಆದರೆ 4,5 ನಿಮಿಷ ಡ್ರೆೃವ್‌ ಮಾಡಿ 1 ಗಂಟೆ ಒಳ್ಳೆ ಕಾರ್ಯಕ್ರಮದಲ್ಲಿ ಕಳೆಯೋದಿಲ್ಲ. ಅದೂ ದಿಢೀರನೆ ಆಯೋಜಿಸಿದ ಕಾರ್ಯಕ್ರಮಗಳಿಗಂತೂ ಬೆರಳೆಣಿಸಿದಷ್ಟೇ ಜನ ಬರುತ್ತಾರೆ. ಹೀಗಾಗಿ ಕಾರ್ಯಕಾರಿ ಸಮಿತಿಗಳು ಮುಂದುಬರುತ್ತಿಲ್ಲ. ಚಿಕಾಗೊದಲ್ಲಿ ಇಂಥದೊಂದು ಕಾರ್ಯಕ್ರಮವನ್ನು ಆಯೋಜಿಸಲೇಇಲ್ಲ. ನಮ್ಮ ಜನ ಯಾವಾಗ ಎಚ್ಚೆತ್ತುಕೊಳ್ಳುತ್ತಾರೋ ಗೊತ್ತಿಲ್ಲ.

  ಧನ್ಯವಾದಗಳು,

  - ಅನುರಾಧ ಅರುಣ್‌

  *

  ನಟರಾಜ್‌ ಅವರಿಗೆ ವಂದನೆಗಳು,

  ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ನೀವು ಹೇಳಿದಂತೆ ಬಹಳ ಕಮ್ಮಿ ಜನ, ಯಾಕೋ? ನಾನು ನಮ್ಮ ಯಜಮಾನರಿಗೆ ಬೇಗ ಹೋಗೋಣ ಪಾರ್ಕಿಂಗ್‌ ಸಿಗಲ್ಲ ಅಂತ 1.30ಗೇ ಬಂದು ಕೂತಿದ್ದೆ. ಅವತ್ತೆಲ್ಲ ತೇವವಾಗಿದ್ದ ಕಣ್ಣು, ಇವತ್ತು ಲೇಖನ ಓದಿದ ಮೇಲೆ ಮತ್ತೆ ತೇವವಾಯಿತು. ಅಂಥ ವ್ಯಕ್ತಿಯನ್ನು ನಮ್ಮ ಸುವರ್ಣ ಕರ್ನಾಟಕಕ್ಕೆ ನೀಡಿದ ಮಾತೆಗೆ ವಂದನೆಗಳು. ಹೀಗೆ ಬರೆಯುತ್ತಿರಿ.

  - ಶೈಲಜಾ

  *

  ಮಾನ್ಯರೇ,

  ಅಣ್ಣಾವ್ರು ಅಗಲಿದ ಸುದ್ದಿಯನ್ನು ಮೊದಲು ಪ್ರಕಟಿಸಿದ್ದು, ಜೊತೆಗೆ ಖಚಿತಪಡಿಸಿದ್ದು; ದಟ್ಸ್‌ ಕನ್ನಡ. ರಾಜ್‌ ಬಗೆಗೆ ಸಾಕಷ್ಟು ಲೇಖನ, ಸಮಗ್ರ ಸುದ್ದಿಗಳ ಮೂಲಕ ದಟ್ಸ್‌ ಕನ್ನಡ ಬಳಗ, ಕನ್ನಡತನವನ್ನು ಎತ್ತಿಹಿಡಿದಿದೆ. ಬಳಗಕ್ಕೆ ನಮ್ಮೆಲ್ಲರಿಂದ ಅಭಿನಂದನೆಗಳು.

  - ಮಂಜುನಾಥ್‌. ಬಿ.ಹೆಚ್‌., ಬೆಂಗಳೂರು.

  *

  ಅಣ್ಣಾವ್ರು ಸ್ವರ್ಗಸ್ಥರಾದ ದಿನದಿಂದ ಇಂದಿನವರೆವಿಗೂ ಎಲ್ಲಾ ಪತ್ರಿಕೆಗಳಲ್ಲಿ ಅವರ ಬಗ್ಗೆ ಬರುತ್ತಿರುವ ಲೇಖನಗಳನ್ನೂ, ಎಲ್ಲರ ಪ್ರತಿಕ್ರಿಯೆಗಳನ್ನೂ ಓದುತ್ತಲಿದ್ದೇನೆ. ನನ್ನ ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ಈಗಾಗಲೇ ಸಾಕಷ್ಟು ಅಭಿಮಾನಿಗಳು ಹೃದಯ ತುಂಬಿ ಬರೆದಿದ್ದಾರೆ. ಆದರೂ ನನಗಿರುವ ಅಣ್ಣಾವ್ರ ಬಗೆಗಿನ ಗೌರವ, ಭಾಂದವ್ಯಗಳ ಬಗ್ಗೆ ಏನಾದರೂ ಬರೆದು ನನ್ನ ಶ್ರದ್ಧಾಂಜಲಿ ಅರ್ಪಿಸಬೇಕೆನ್ನಿಸುತ್ತಿದೆ.

  ನಾನು ಮಿಡ್ಲ್‌ಸ್ಕೂಲಿನಲ್ಲಿದ್ದಾಗ ಸದಾಶಿವನಗರಕ್ಕೆ ಅಣ್ಣಾವ್ರು ಕಾಸಿದ್ರೆ ಕೈಲಾಸ ಹಾಗೂ ಮಣ್ಣಿನ ಮಗ ಚಿತ್ರಗಳ ಶೂಟಿಂಗ್‌ಗೆ ಬಂದಿದ್ದರು. ಈ ಸುದ್ದಿ ತಿಳಿದ ನಾವು ಶಾಲೆಗೆ ಚಕ್ಕರ್‌ ಹೊಡೆದು ಶೂಟಿಂಗ್‌ ನೋಡಲು ಹೋಗಿದ್ದೆವು. ಶೂಟಿಂಗ್‌ನ ಮಧ್ಯೆ ಬಿಡುವಾದಾಗಲೆಲ್ಲಾ ನಮ್ಮಗಳ ಬಳಿಬಂದು, ಸ್ಕೂಲಿಗೆ ಚಕ್ಕರ್‌ ಹೋಡಿಬಾರದು, ಚೆನ್ನಾಗಿ ಓದಬೇಕು ಎಂದು ಹೇಳುತ್ತಾ ನಮ್ಮಗಳ ತಲೆ ಸವರಿ ಹೋಗುತ್ತಿದ್ದರು. ನಾವೆಲ್ಲಾ ಇನ್ನು ಮೇಲೆ ಶಾಲೆ ತಪ್ಪಿಸುವುದಿಲ್ಲ ಎಂದು ಹೇಳುತ್ತಲೇ ಇಡೀ ದಿನ ಊಟವೂ ಇಲ್ಲದೆ ಶೂಟಿಂಗ್‌ ನೋಡಿ ಮರಳಿ ಬಂದಿದ್ದೆವು. ಆ ಚಿಕ್ಕ ವಯಸ್ಸಿನಲ್ಲೂ ಅವರ ವ್ಯಕ್ತಿತ್ವ ನಮ್ಮನ್ನೆಲ್ಲಾ ಮೋಡಿ ಮಾಡಿ ಬಿಟ್ಟಿತ್ತು.

  ಪೌರಾಣಿಕ, ಐತಿಹಾಸಿಕ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದ ನಮ್ಮ ತಾಯಿ ‘ರಾಜಕುಮಾರನಿಗೆ ದೇವರ ಕೃಪೆ ಇದೆ, ಅದಕ್ಕೆ ಅವರಿಗೆ ಹಾಗೆ ಅಭಿನಯಿಸೋದಕ್ಕೆ ಸಾಧ್ಯ’ ಎಂದು ಹೇಳುತ್ತಿದ್ದರು. ಇಂದಿಗೂ ಆ ಮಾತು ಉತ್ಪ್ರೇಕ್ಷೆ ಎನಿಸುವುದಿಲ್ಲ. ಅಣ್ಣಾವ್ರ ಅಭಿನಯ ಹಾಗೂ ಗಾಯನ ಸಾಮರ್ಥ್ಯ ಎಲ್ಲರಿಗೂ ತಿಳಿದದ್ದೇ, ಆದರೆ ನನಗೆ ಅತ್ಯಂತ ಇಷ್ಟವಾಗಿದ್ದ ಸಂಗತಿಯೆಂದರೆ, ತೆರೆಯ ಮೇಲೂ ಅವರು ನೆಡೆದುಕೊಳ್ಳುತ್ತಿದ್ದ ರೀತಿ.

  ಅದರಲ್ಲೂ ಎಂತಹಾ ಸನ್ನಿವೇಶವಾದರೂ ತಾಯಿ, ತಂದೆ, ಅಕ್ಕ, ತಂಗಿ, ಅಣ್ಣ, ತಮ್ಮಿಂದಿರ ಜೊತೆ ಅವರು ಸಂವಾದಿಸುತ್ತಿದ್ದ ರೀತಿ ಹಾಗೂ ತೋರುತ್ತಿದ್ದ ಪ್ರೀತಿ, ವಾತ್ಸಲ್ಯ, ಮಮತೆಗಳು. ತಮ್ಮ ಸುತ್ತಲಿನವರ ನೆಡವಳಿಕೆಯನ್ನು ಬದಲಾಯಿಸುವ ಶಕ್ತಿಯಿತ್ತು ಅವರಿಗೆ. ಈಗಲೂ ಅವರ ಚಿತ್ರಗಳ ಕೆಲವು ಸನ್ನಿವೇಶಗಳನ್ನು ನೆನೆಸಿಕೊಂಡರೆ, ಕಣ್ಣಂಚಿನಲ್ಲಿ ನೀರು ಉಕ್ಕುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅವರ ಇಂತಹ ನೆಡವಳಿಕೆಗಳಿಂದಲೇ ನಮಗೆಲ್ಲಾ ಇಷ್ಟು ಹತ್ತಿರದವರಾಗಿ, ನಮ್ಮವರೇ ಆಗಿದ್ದರು ಎನಿಸುತ್ತದೆ.

  ಅಣ್ಣಾವ್ರಂಥಾ ಪರಿಪೂರ್ಣ ವ್ಯಕ್ತಿತ್ವದ, ಅಖಂಡ ಪ್ರತಿಭೆಯ, ಸರಳ ಸ್ನೇಹದ, ಸೌಜನ್ಯಮೂರ್ತಿ ಇನ್ನೆಂದಿಗೂ ಬರಲಾರ. ಆದರೆ ನಮ್ಮ ಜೀವಿತದ ಕಾಲದಲ್ಲಿಯೇ ಇಂತಹಾ ಒಂದು ಮಹಾನ್‌ ವ್ಯಕ್ತಿಯ ಸಾಂಗತ್ಯ ದೊರೆತದ್ದು ನಮ್ಮೆಲ್ಲರ ಸೌಭಾಗ್ಯವೆನಿಸುತ್ತದೆ. ಕೋಟ್ಯಾಂತರ ಕನ್ನಡಿಗರ ಮನದಲ್ಲಿ ಒಳ್ಳೆಯ ಭಾವನೆ, ಅಭಿಮಾನ ಉದಯಿಸಲು ಕಾರಣರಾದ ಅಣ್ಣಾವ್ರ ಆತ್ಮ ಶಾಂತಿಯಿಂದ ಇರುವುದಂತೂ ಖಚಿತ. ಅವರು ಎಲ್ಲೇ ಇದ್ದರೂ ಸದಾ ನಮ್ಮೆಲ್ಲರನ್ನೂ ಹರಸುತ್ತಿರಲಿ. ಏಕೆಂದರೆ ಅಂತಹ ಪುಣ್ಯಪುರುಷನ ಹರಕೆ ಎಂದಿಗೂ ಹುಸಿಯಾಗಲಾರದು.

  - ಪ್ರಕಾಶ್‌ ಹೇಮಾವತಿ

  *

  ಬರಿ ಹುಟ್ಟಲಿಲ್ಲ ಕನ್ನಡನಾಡಿನಲ್ಲಿ ನೀನು ಹೊಮ್ಮಿಸಿದೆ ಹೊಸ ಬೆಳಕು
  ವಿನಯ ನಮ್ರತೆಯ ಮೂರ್ತಿ ಬಾಳಿದ್ದು ಸರಳ ಧೀಮಂತ ಬದುಕು
  ನೀನಿಲ್ಲವೆಂದರೆ ನಂಬಲಾರೆವು ವಿಧಿ ಕತ್ತರಿಸಿದೆ ನಮ್ಮ ಸಾಂಸ್ಕೃತಿಕ ಜೀವನಾಡಿ
  ಇಷ್ಟು ಅವಸರದಲ್ಲಿ ಆಡಿಸಿದಾತ ಆಟ ಮುಗಿಸಿದ್ದು ಯಾರ ಮೇಲೆ ಬೇಸರ ಮೂಡಿ

  ಸುಂದರ ಕಾವ್ಯ ನಿನ್ನ ಜೀವನ ನಿನ್ನಂತೆ ಜನರ ಪ್ರೀತಿಸಿದವರಿಲ್ಲ
  ಹಿರಿಯ ಕಿರಿಯ ಬಡವ ಬಲ್ಲಿದರೆಂಬ ಭೇದವಿಲ್ಲನಿನಗೆ ನಿನ್ನವರೇ ನಾವೆಲ್ಲ
  ಮುಡಿಪಾಗಿಟ್ಟೆ ನಿನ್ನಾಯುಷ್ಯ ನಮಗಾಗಿ ನಿನ್ನ ಸ್ವಂತಕ್ಕೇನೂ ಬಯಸಲಿಲ್ಲ
  ದೊರೆ ನೀನು ನಿನ್ನ ಹೃದಯ ಶ್ರೀಮಂತಿಕೆಯ ಸಂಪತ್ತಿಗೆ ಯಾರದೂ ಸವಾಲಿಲ್ಲ.

  ಶ್ರೀ ರಾಮನಂತೆ ಮರ್ಯಾದಾ ಪುರುಷೋತ್ತಮ ನಿನ್ನದೇ ಆದರ್ಶ ನಮಗೆ
  ಹೆಮ್ಮೆಯ ಹೊನ್ನಿನ ಮುಕುಟಗಳ ಮಾಲೆಯನ್ನರ್ಪಿಸಿದೆ ಧನ್ಯೆ ಕನ್ನಡ ತಾಯಿಗೆ
  ಯಾರೇ ಕೂಗಾಡಲಿ ಹೋರಾಡಲಿ ರಾಜ ಮಾರ್ಗದಿ ಸಾಗಿ ಶ್ರಮಿಸಿದೆ ನಮ್ಮ ನೆಮ್ಮದಿಗೆ
  ಈಗ ಉಳಿದಿಹುದು ಅನಂತ ಶೋಕ ಮೌನರೋದನ ನಿನ್ನ ಭಕ್ತ ಕೋಟಿಯ ಪಾಲಿಗೆ

  ಬಲ್ಲೆವು ನಾವು ಈಗ ದೂರಾಗಿ ಹೋಗಿರುವುದು ಬರಿಯ ಮೂಳೆ ಮಾಂಸದ ತಡಿಕೆ
  ಓ ಬಂಗಾರದ ಮನುಷ್ಯ ನಿನ್ನಾತ್ಮ ಚೈತನ್ಯ ದೈವ ನಮಗಿತ್ತ ಶಾಶ್ವತ ಪ್ರೇಮದ ಕಾಣಿಕೆ
  ಬೇಡ ನಿನಗಾವ ಸ್ಮಾರಕವು ಇದೆಯಲ್ಲ ನಿನ್ನ ಪ್ರೀತಿಯ ಕನ್ನಡ ನಾಡೆಂಬ ಗಂಧದ ಗುಡಿ
  ಅಜರಾಮರ ನಿನ್ನ ನೆನಪು ಅಳಿಯುವುದಿಲ್ಲ ಇರುವವರೆಗೆ ನಮ್ಮ ಸವಿಗನ್ನಡ ನುಡಿ

  ನಿನ್ನ ನಿರ್ಗಮನದೊಂದಿಗೆ ಕಳೆದುಹೋಗಿದೆ ಸಮಸ್ತ ಕನ್ನಡಿಗರ ಸಂತೋಷ ಆನಂದ
  ನಾಡಿಂದು ಹಿಮರಹಿತ ಹಿಮಾಲಯ ಜಲಬತ್ತಿದ ಜೀವನದಿ ಹೂವುಗಳಲಿಲ್ಲ ಮಕರಂದ
  ನಿನ್ನಭಿಮಾನಿ ದೇವರುಗಳ ಕಣ್ಣೀರು ಕಾಣಿಸದೆ ? ಆರ್ತನಾದ ಕೇಳಿಸದೇನಣ್ಣ !
  ಕರಮುಗಿದು ಬೇಡುವೆವು ಒಕ್ಕೊರಲಿನಿಂದ ಹೇಗಾದರೂ ಮರಳಿ ಬಾ ರಾಜಣ್ಣ.

  - ಪ್ರಕಾಶ್‌ ರಾಜರಾವ್‌, ಆಕ್ಲಂಡ್‌, ನ್ಯೂಜಿಲ್ಯಾಂಡ್‌

  *

  Dear Sir,

  This article by Ravi Belagere is way different from everything else that we have been reading about Rajkumar. As common people our understanding of any public figures like actors/politicians is limited to what we read about them in media.

  I, like others, liked Rajkumar for his consistent performance as an actor, his decision to stay way from politics. I liked him as a human being for, he never at once appeared as someone who could manipulate/sabotage/ruin his co-stars careers. Eventhough there were many stories floating around to this effect, I somehow think he was not directly responsible for any of these.

  After reading Ravis article I felt bad in the beginning (not sure if it was for the way Ravi portrayed Rajkumar, or about Raj himself). But after a while I felt more comfortable and started liking Raj again. This probably is because being normal (with all weaknesses) Raj was able to achieve so much in life. Wish like Ravi mentioned, Raj had controlled his fan club better, wish he had come a little forthright in public. Anyways, who of us is complete.

  - Murali

  *

  Vasudhendra about Dr.Raj

  This is the best article I read about Dr.Raj. It narrated in very simple words what Dr.Raj means for Kannadigas.

  Best Regards,

  - Guruprasad, Tokyo, Japan

  *

  Dear sir,

  I am one among who love Dr raj forever, I was shocked when I heard the Dr rajs death and in this regard I express my deeper gratitude to late rajkumar. I take this opportunity to say that god may give such a wonder artist to kannadigas and as well as to the world.
  Your artcle on his death was really touched my heart, I am very greatful to you for such a nice article.

  - Nikhil

  *

  Annavru, Devara ondhu adbutha Shrusti. Avarobba Paripoorna Huttu kalavidha. DR Rajkumar ravarige Rajkumar saati, avaranna yarondhigu holisalikke sadhyavilla. Avarobba sarala, sajjanikeya prathiroopa, Daithya Pratibavantha mahaan kalavidha.Samastha kannadigara aase aakaankshegalanna, novu nalivugalanna,baavanegalanna samarthavagi prathibimbisidha mahaanubaavaru.

  Avara paathragalannu nodidha, avara dhvanimaduryavannu savidha navellaru dhanyaru. Avaranna varnisalikke padhagalu saalavu. Avaru huttidha namma kannadanaadu nijakku paavanavaythu. Rajkumar ravara aathmakke chira shanthi sigali avara kutumbadavarige mathu avara abhimaaanigalige avara agalikeya novannu thadedhukolluvantha shakthi aa paramathma karunisali endhu prarthisuva Orva Abhimaani.

  Jai Kannada,Jai Karnataka.

  - Dr Mohan, Riyadh, Saudi Arabia
  *

  Dear Editor, ThatsKannada,

  I still cant believe that the Kannada Cinemas Matinee Idol and Super Star, Padma Bhushan Dr Rajkumar is not amidst us now. I am not in a position to imagine and digest that Kannada cinemas greatest actor of all times to come will not be available on this Planet Earth any more. It is very sad and unfortunate that the farewell or funeral was not performed according to the wishes of his family members. There are no matching words to describe this versatile actor who crossed all boundaries to capture the hearts of his followers.

  I am sure every Kannadiga will join me in praying for his soul to rest in peace and give all strength to his close kith and kin to bear for this irreparable loss to not only them but to the entire Kannada Film Industry as well.

  Kannada Bhashe, Samskrithi, Cinema - Elliyavarege Iruththo, Alliyavarege Namma Nimmellara Rajanna Iruththare.

  Namaskara,

  - S Arun Kumar

  *

  Kannadada varanata, Kannada kanteerava, Gana gandharva, natasarvabhowma Dr. Rajakumar avara athamakke devaru chira shanthiyannu karunisali matthu avara kutumba vargakke Raj ravara agalikeyannu sahisikolluva shakthiyannu devaru needali.

  aathasya maranam dhruvam - huttidavarellau sayalebeku aadare hege balabeku Raj ravanthe avara jeevana ondu madari adaranthe balabeku.

  - Narasimha Murthy, Bangalore

  *

  Hi,

  I am Dr.Prasad from London. I have been emotionally attached with Dr.Rajkumar(annavru) since my childhood. His was the only film I watched as a child. I felt like a hole was created in my mind and heart which cannot be filled by anything other than Dr.Raj. Annavru will always be in my mind for a long long time.

  - Prasad

  *

  We miss him a lot. Dr Raj will remain "Hrudaya Simhasanadheswara" in
  Kannadigas hearts for ever.

  - Padmaja and Mohana Das, Houston, Texas, USA

  *

  I can only say this much that whtever good moral values I have in my life or what ever good things I have done or will be doing in my life are all inspired by Dr.Raj and his movies and songs. He has done this to millions of people without directly preaching them but just practicing them and doing good cinemas.

  For me (and for many others) the loss is not of a super star but of a super human being and loss of a great soul who used to inspire and motivate us to do good things in life.

  I could not cry since my eyes were totally dry.

  - S Rajendra, Mumbai

  *

  Bangarada manushya innilla annuvuda atyantha novena sangathi. Bahala Hattirada obbaranna kaledukondaste novagide. Enu madodu ella vidhi ata. Suraya chandrariruvatanka avara hesaru ajaramaravagiruthe.

  - Satheesh, Saudi Arabia


  ಇನ್ನಷ್ಟು ನೆನಪು :
  ರಾಜಕುಮಾರ, ನೀವೆಂದಿಗೂ ಅಮರ ಅಮರ ಅಮರ
  ರಾಜ ವೈಭವಕ್ಕೆ ತೆರೆಬಿದ್ದಿದೆ... ಆದರೆ ನೆನಪುಗಳಿಗೆ ಎಲ್ಲಿಯ ತೆರೆ?
  ಕನ್ನಡ ಕಂಠೀರವ ರಾಜ್‌ ನಿಧನಕ್ಕೆ ವಿಶ್ವಕನ್ನಡಿಗರ ತಲ್ಲಣ
  ದೇವತಾ ಮನುಷ್ಯ : ಯಾರ್ಯಾರು ಏನ್‌ ಹೇಳಿದರು?

  ಅಭಿಮಾನಿಗಳೇ, ನಿಮ್ಮ ಸಂಕಟ-ಸಂತಾಪ ನಮ್ಮೊಂದಿಗೆ ಹಂಚಿಕೊಳ್ಳಿ


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X