»   » ‘ಸರ್ಕಲ್‌ ರೌಡಿ’ , ‘18ನೇ ಕ್ರಾಸ್‌’ಗೆ ಕುಂಬಳಕಾಯಿ!

‘ಸರ್ಕಲ್‌ ರೌಡಿ’ , ‘18ನೇ ಕ್ರಾಸ್‌’ಗೆ ಕುಂಬಳಕಾಯಿ!

Subscribe to Filmibeat Kannada


‘ಸರ್ಕಲ್‌ ರೌಡಿ’ ಮತ್ತು ‘18ನೇ ಕ್ರಾಸ್‌’ -ಈ ಎರಡು ಚಿತ್ರಗಳು ಕ್ಲೈಮ್ಯಾಕ್ಸ್‌ ಮುಗಿಸಿ ಇತ್ತೀಚೆಗಷ್ಟೇ ಕುಂಬಳಕಾಯಿ ಹೊಡೆದಿವೆ.

ಬಿ.ಸತ್ಯನಾರಾಯಣ್‌ರ ಡ್ರಿಮ್‌ ಕ್ರಿಯೇಷನ್ಸ್‌ ‘ಸರ್ಕಲ್‌ ರೌಡಿ’ ಯನ್ನು ನಿರ್ಮಾಣ ಮಾಡಿದೆ. ‘ರಂಭಾ’ ಕುಖ್ಯಾತಿಯ ಬಿ.ರಾಮಮೂರ್ತಿ , ಈ ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೂ ಸ್ವಲ್ಪ ಮಸಾಲೆ ಇರಲಿ ಎಂದು ಕುಖ್ಯಾತ ನಟಿ ಶಕೀಲಾರನ್ನು ರಾಮಮೂರ್ತಿ ಕರೆತಂದಿದ್ದಾರೆ.

ಗೌರಿ ವೆಂಕಟೇಶ್‌ ಕ್ಯಾಮೆರಾ, ಕೃಪಾಕರ ಸಂಗೀತ ಚಿತ್ರಕ್ಕಿದೆ. ಪ್ರಭಾಕರ್‌ ಪುತ್ರ ವಿನೋದ್‌, ಶೋಭರಾಜ್‌, ಜೈ ಜಗದೀಶ್‌, ಬ್ಯಾಂಕ್‌ ಜನಾರ್ದನ್‌, ಮೈಕೋ ಮುಖ್ಯಪಾತ್ರದಲ್ಲಿದ್ದಾರೆ.

**

ಕೆ.ಆರ್‌.ಎನ್‌.ಕಮ್ಯುನಿಕೇಷನ್‌ನ ರತ್ನ ಚಿಕ್ಕಣ್ಣ ನಿರ್ಮಾಣದ ‘18ನೇ ಕ್ರಾಸ್‌’ ಚಿತ್ರದಲ್ಲಿ ಜ್ಯೂನಿಯರ್‌ ಶಂಕರ್‌ನಾಗ್‌ ದೀಪಕ್‌, ರಾಧಿಕಾ ಪಂಡಿತ್‌, ಬುಲೆಟ್‌ ಪ್ರಕಾಶ್‌ ಮುಖ್ಯಪಾತ್ರದಲ್ಲಿದ್ದಾರೆ. ಕೆಂಗೇರಿಯ ಆರ್‌.ವಿ.ಕಾಲೇಜಿನ ಅಂಗಳದಲ್ಲಿ 30 ಯುವಕ(ರೌಡಿ ಪಾತ್ರಧಾರಿಗಳು)ರ ಜೊತೆ ದೀಪಕ್‌ ಹೊಡೆದಾಟದ ದೃಶ್ಯವನ್ನು ಸುರೇಶ್‌ ರವಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಅರ್ಜುನ್‌ ಸಂಗೀತ, ಶಂಕರ್‌ ಕತೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನವನ್ನು ಚಿತ್ರ ಹೊಂದಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada