»   » ಬಣ್ಣದ ಪ್ರಪಂಚಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್‌ ಎಂಟ್ರಿ!

ಬಣ್ಣದ ಪ್ರಪಂಚಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್‌ ಎಂಟ್ರಿ!

Subscribe to Filmibeat Kannada


ಬೆಂಗಳೂರು : ಕನ್ನಡ ಪತ್ರಿಕೋದ್ಯಮದಲ್ಲಿ ಓದುಗರು ಬಲ್ಲ ಸಂಪಾದಕರ ಸಂಖ್ಯೆ ಅತಿ ವಿರಳ. ಲಂಕೇಶ್‌, ರವಿಬೆಳಗೆರೆ, ಶ್ರೀಧರ್‌, ಜಾಣಗೆರೆ -ಹೀಗೆ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ಸಂಪಾದಕರನ್ನು ಬಿಟ್ಟರೇ, ದಿನಪತ್ರಿಕೆಗಳ ಸಂಪಾದಕರ ಬಗ್ಗೆ ಓದುಗರಿಗೆ ಗೊತ್ತಿಲ್ಲ.

ಆದರೆ ‘ವಿಜಯ ಕರ್ನಾಟಕ’ ಸಂಪಾದಕ ವಿಶ್ವೇಶ್ವರ ಭಟ್‌ರ ವಿಚಾರವೇ ಬೇರೆ. ಪ್ರತಿ ವಾರ ಫೋಟೋ ಹಾಕಿಕೊಂಡು ‘ನೂರೆಂಟು ಮಾತು’ ಬರೆದು, ಅವರು ಜನಪ್ರಿಯರಾದವರಲ್ಲ. ತಮ್ಮ ಕ್ರಿಯಾಶೀಲತೆ ಮೂಲಕ ಗಮನ ಸೆಳೆದವರು. ಅವರೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿದ್ದಾರೆ. ನಟರಾಗಿ ಅಲ್ಲ, ಚಿತ್ರ ಸಾಹಿತಿಯಾಗಿ...

‘ನಿನದೇ ನೆನಪು’ ಚಿತ್ರದ ಹಾಡುಗಳಿಗೆ ವಿಶ್ವೇಶ್ವರ ಭಟ್‌ ಸಾಹಿತ್ಯ ಒದಗಿಸಿದ್ದಾರೆ. ಈ ಚಿತ್ರದಲ್ಲಿ ಮಯೂರ್‌ ಮತ್ತು ಮಾಯಾ ನಾಯಕ-ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಅಂದ ಹಾಗೇ ಈ ಬಣ್ಣದ ಪ್ರಪಂಚಕ್ಕೂ, ಭಟ್‌ ಅವರಿಗೂ ಒಂದು ನಂಟು ಇದ್ದೇ ಇದೆ. ಹಿಂದೆ ಟಿ.ಎನ್‌.ಸೀತಾರಾಮ್‌ರ ‘ಮುಕ್ತ ’ ಸೀರಿಯಲ್‌ನಲ್ಲಿ ವಿಶ್ವೇಶ್ವರ ಭಟ್‌, ರಾಜ್ಯಪಾಲರ ಪಾತ್ರವನ್ನು ನಿರ್ವಹಿಸಿದ್ದರು. ಅವರ ಅಕ್ಷರಗಳು ಪ್ರೇಕ್ಷಕರಿಗೆ ರುಚಿಸುತ್ತವೆಯೇ? ರುಚಿಸಲಿ, ಅವರು ಗೆಲ್ಲಲಿ..

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada