»   » ಅಚ್ಚು-ಅನುಪಮಾರ ಹೇಳಲಾರದ ಪ್ರೇಮ !

ಅಚ್ಚು-ಅನುಪಮಾರ ಹೇಳಲಾರದ ಪ್ರೇಮ !

Posted By: Staff
Subscribe to Filmibeat Kannada

ರಾಣಿ ಜೇನು ರಾಣಿ ಜೇನು ಬಂತು ನೋಡು ಕಾಲೇಜಿನ ಕ್ಯಾಂಪಸ್ಸೆಲ್ಲಾ ಜೇನುಗೂಡು...

ತುರೋಸ್‌ ಹಾಲಿಡೇ ರೆಸಾರ್ಟ್‌ನಲ್ಲಿ ಬಣ್ಣ ಬಣ್ಣದ ಕಾಲೇಜ್‌ ಪೋರ- ಪೋರಿಯರು. ಅವರ ನಡುವೆ ಸೇಮ್‌ ಟು ಸೇಮ್‌ ಬಣ್ಣದ ಬಟ್ಟೆ ತೊಟ್ಟ ಅಚ್ಚು ಹಾಗೂ ಅನುಪಮ. ಇಬ್ಬರ ಮನಸ್ಸುಗಳೂ ಪ್ರೀತಿಸುತ್ತಿವೆ. ಆದರೆ ಐ ಲವ್‌ ಯೂ ಹೇಳಲು ಹಿಂದೇಟು.

ಶೇಕ್ಸ್‌ಪಿಯರನ ರೋಮಿಯೋ ಜ್ಯೂಲಿಯಟ್‌ ಸ್ಫೂರ್ತಿಯ ಈ ಕನ್ನಡದ ಸಿನಿಮಾದ ಹೆಸರೂ ರೋಮಿಯೋ ಜ್ಯೂಲಿಯಟ್‌. ನಿನಗಾಗಿ ಖದರನ್ನೇ ಮುಂದುವರೆಸುವಂಥಾ ವಿಜಯ ರಾಘವೇಂದ್ರನ ಹುಮ್ಮಸ್ಸು, ರಾಧಿಕಾ ಇನ್ನಷ್ಟು ಚುರುಕು. ಯೂನಿಫಾಂ ತೊಟ್ಟ ಇಬ್ಬರಲ್ಲೂ ಲವ್ವಿದೆ. ಅದನ್ನು ಹೇಳಲು ಏನೋ ಅಳುಕು. ಈ ದೃಶ್ಯಕ್ಕೆ ಹಸನಾದ ಮುಖಭಾವ ತುಂಬಿ, ಶಾಟನ್ನು ಓಕೆ ಮಾಡಲು ಹಲವು ಟೇಕ್‌ಗಳು ಬೇಕಾದವು.

ಎಸ್‌.ಮಹೇಂದರ್‌ ಗರಡಿಯಲ್ಲಿ ಪಳಗಿರುವ ಡಿ.ಗುಣಕುಮಾರ್‌ ಪರ್ಫೆಕ್ಷನ್‌ಗಾಗಿ ಪರದಾಡುತ್ತಿದ್ದರು. ಈ ಸಿನಿಮಾದ ನಿರ್ದೇಶನದ ಹೊಣೆ ಇವರದ್ದೇ. ಹೆಜ್ಜೆ ತಪ್ಪಿದಾಗ ಸರಿ ಮಾಡಲು ಫೈವ್‌ ಸ್ಟಾರ್‌ ಗಣೇಶ ಮುಂದಾಗುತ್ತಿದ್ದರು. ಸಿನಿಮಾದ ಡ್ಯಾನ್ಸ್‌ ಮಾಸ್ಟರ್‌ ಇವರೇ. ರಾಣಿ ಜೇನು ಹಾಡು ಬರೆದು ಅದಕ್ಕೆ ಟ್ಯೂನ್‌ ಹಾಕಿರುವುದು ಎಂ.ಎ. ಓದಿನಲ್ಲಿ ಬ್ಯುಸಿಯಾಗಿರುವ ಹಂಸಲೇಖ. ದೃಶ್ಯಗಳನ್ನು ಕೆಮೆರಾಗೆ ತುಂಬಿಸಿಕೊಳ್ಳುತ್ತಿದ್ದವರು ಎಸ್‌.ಕೃಷ್ಣ. ಸಂಭಾಷಣೆಗಳನ್ನು ತಿದ್ದುತ್ತಾ ಕೂತಿದ್ದವರು ನಾಗೇಂದ್ರ ಪ್ರಸಾದ್‌. ಫೈಟಿಂಗ್‌ ಶಾಟ್‌ಗೆ ಸಿದ್ಧವಾಗುತ್ತಿದ್ದುದು ಕೌರವ ವೆಂಕಟೇಶ್‌. ರಾಘವೇಂದ್ರ ಮತ್ತು ರಾಧಿಕ ಗೆಳತಿಯಾಗಿ ರಿತೂ ಸಿಂಗ್‌ ಕಂಗೊಳಿಸುತ್ತಿದ್ದರು.

ಬೆಂಗಳೂರಿನ ಮೊದಲ ಹಂತದ ಶೂಟಿಂಗ್‌ ಮುಗಿಸಿರುವ ಶ್ರೀನಿವಾಸ ಪ್ರೊಡಕ್ಷನ್ಸ್‌ ಲಾಂಛನದ ರೋಮಿಯೋ ಜ್ಯೂಲಿಯಟ್‌ ತಂಡ ಈಗ ಮಂಗಳೂರು, ಮಣಿಪಾಲ, ಉಡುಪಿಯ ಪ್ರವಾಸದಲ್ಲಿದೆ. ಅಲ್ಲಿ ಹತ್ತು ದಿನಗಳ ಶೂಟಿಂಗ್‌ಮುಗಿಸಿ, ಮತ್ತೆ ಬೆಂಗಳೂರಲ್ಲಿ ಮೂರನೇ ಹಂತದ ಚಿತ್ರೀಕರಣ ಸಾಗಲಿದೆ.

English summary
Romeo Juliet shooting roundup
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada