»   » ಮಂಗಳೂರು ಮೂಲದ ಬಾಲಿವುಡ್‌ ನಟ ಬೆಂಗಳೂರಿನ ತಮ್ಮ ಹಳೆಯ ದಿನಗಳನ್ನು

ಮಂಗಳೂರು ಮೂಲದ ಬಾಲಿವುಡ್‌ ನಟ ಬೆಂಗಳೂರಿನ ತಮ್ಮ ಹಳೆಯ ದಿನಗಳನ್ನು

Posted By: Staff
Subscribe to Filmibeat Kannada

ಮಂಗಳೂರು ಮೂಲದ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಆಡಿದ ಈ ಮಾತಿಗೆ ಬೆಂಗಳೂರಿನ ಒಂದೂವರೆ ಸಾವಿರ ಅಭಿಮಾನಿಗಳ ಕರತಾಡನ. ಕೈನೆಟಿಕ್‌ ಕಂಪನಿಯ ನೋವಾ ಎಂಬ 115 ಸಿಸಿ ಬೈಕ್‌ ಬಿಡುಗಡೆ ಮಾಡಲು ಗುರುವಾರ ಅವರು ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಫನ್‌ವರ್ಲ್ಡ್‌ನಲ್ಲಿ ಮಾತು.

ಅಲ್ಲಿ ಅವರು ನೆನಪಿಸಿಕೊಂಡದ್ದು ಬೆಂಗಳೂರಲ್ಲಿ ತಾವು ಕಳೆದ ಹಿಂದಿನ ದಿನಗಳನ್ನು...

ನನಗೆ ಬೈಕು- ಕಾರೆಂದರೆ ತುಂಬಾ ಇಷ್ಟ. ಬೆಂಗಳೂರಲ್ಲಿ ನನ್ನ ಗೆಳೆಯನ ಮನೆಯಲ್ಲಿ ಸದಾ ಒಂದು ಬುಲೆಟ್‌ ಇಟ್ಟಿರುತ್ತಿದ್ದೆ. ಕಾರಿನಿಂದ ಇಲ್ಲಿಗೆ ಬಂದು, ಅದನ್ನು ನಿಲ್ಲಿಸಿ, ಮೊಬೈಕನ್ನು ಎತ್ತಿಕೊಂಡು ಬೆಂಗಳೂರು ಸುತ್ತುವುದೆಂದರೆ ನನಗೆ ಮಜಾ. ಹೆಲ್ಮೆಟ್‌ ಹಾಕಿಕೊಳ್ಳುವುದನ್ನು ಮಾತ್ರ ನಾನು ಮರೆಯುತ್ತಿರಲಿಲ್ಲ. ಅಪ್ಪ ನೋಡಿದರೂ, ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಕಾರು- ಬೈಕುಗಳ ಹುಚ್ಚು ಎಷ್ಟಿದೆಯೆಂದರೆ, ನನ್ನ ಹತ್ತಿರ ಇವತ್ತೂ ಒಂದು ಸ್ಪೋರ್ಟ್ಸ್‌ ಕಾರ್‌ ಇದೆ.

ಬೆಂಗಳೂರು ಕೂಲ್‌ ಜಾಗ. ಆದರೆ ಇಲ್ಲಿ ಶೂಟಿಂಗ್‌ ನಡೆಸೋದು ಕಷ್ಟ ಕಷ್ಟ. ಬೇರೆ ಕಡೆ ಸಿಕ್ಕಂತೆ ಇಲ್ಲಿ ಶೂಟಿಂಗ್‌ಗೆ ಸುಲಭವಾಗಿ ಪರ್ಮಿಷನ್‌ ಸಿಗುವುದಿಲ್ಲ. ಶೂಟಿಂಗ್‌ನಿಂದ ಫ್ರೀ ಆಗಿದ್ದಾಗ ನನ್ನ ಮಕ್ಕಳ ಜೊತೆ ಕಾಲ ಕಳೀತೀನಿ. ಅವರನ್ನು ಬೀಚ್‌ಗೆ ಕರೆದುಕೊಂಡು ಹೋಗೋದು, ಐಸ್‌ ಕ್ರೀಂ ಕೊಡಿಸೋದು, ಸುತ್ತಾಡೋದು...ಹೀಗೆ. ಹೊಟೇಲ್‌ ಉದ್ಯಮದ ನನ್ನ ತುಡಿತ ಸದಾ ಇದ್ದಿದ್ದೇ. ಮುಂಬಯಿಯ ಬೀಚ್‌ನ ಸ್ವರೂಪವನ್ನೇ ಬದಲಿಸೋದು ನನ್ನ ಕನಸು. ತರಾವರಿ ತಿನಿಸುಗಳ ಸುಂದರ ರೆಸ್ಟೋರೆಂಟ್‌ಗಳು ಮತ್ತು ನೀರಿನಾಟಗಳನ್ನು ಅಲ್ಲಿ ಜಾರಿಗೆ ತರಲು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಜೊತೆ ಮಾತಾಡುತ್ತಿದ್ದೇನೆ. ಈ ಕನಸು ನನಸಾದರೆ ನಾನೇ ಧನ್ಯ!

English summary
I know Kannada Swalpa Swapla : Sunil Shetty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada