For Quick Alerts
  ALLOW NOTIFICATIONS  
  For Daily Alerts

  ಕನಸಿನಕನ್ಯೆ ಬೆಂಗಳೂರಿಗೆ ಬರುವ ಮುನ್ನ !

  By Staff
  |
  • ಹರ್ಷವರ್ಧನ ಪಾಲ್ತಾಡಿ
  ‘ಇವಳು ನಾಯಕಿಯಾ? Its not possible ಇಷ್ಟೊಂದು ತೆಳ್ಳಗಿದ್ದಾಳಲ್ಲ , atleast ಆಕರ್ಷಕವಾದರೂ ಇರಬೇಕು. its impossible. ’ಚೊಚ್ಚಲ ಬಾರಿ ಚಿತ್ರರಂಗಕ್ಕೆ ಆಕೆಗೆ ಸ್ವಾಗತ ದೊರತ್ತದು ಹೀಗೆ.

  ಸಿನಿಮಾ ಹೇಮಾಮಾಲಿನಿಯ ಕನಸಾಗಿತ್ತು. ಹದಿನೈದರ ಹರೆಯದಲ್ಲೇಚಿತ್ರ ನಾಯಕಿಯಾಗುವ ಕನಸು ಹೊತ್ತು ಬಂದಿದ್ದ ಳು. ಆದರೆ ಈಕೆಯನ್ನು ಕಂಡ ಖ್ಯಾತ ತಮಿಳು ಚಿತ್ರ ನಿರ್ದೇಶಕ ಶ್ರೀಧರ್‌ ಹೀಗೆಂದರು. ಆಗ ಆಕೆಗೆ ಚಿತ್ರ ರಸಿಕರ ಕನಸಾಗುವಳೆಂಬ ಕನಸಾದರು ಇತ್ತೆ!

  ಬಹುಶಃ ಛಲವಿಲ್ಲದವರಿಗೆ ಅದು ಕೊನೆ ಮೊಳೆ. ಆದರೆ ಹೇಮಾಮಾಲಿನಿಗೆ ಅದು ಆರಂಭದ ಸೆಲೆ. ಆಕೆ ಅಂದಿನಿಂದಲೇ ದೇಹವರ್ದಕ ಕ್ರಮಗಳನ್ನು ಅನುಸರಿಸಿದಳು. ಭರತನಾಟ್ಯವನ್ನು ಕಠಿಣವಾಗಿ ಅಭ್ಯಸಿಸಿದಳು. ಮುಂದೊಂದು ದಿನ ಮಹತ್ತರ ಕನಸು ಹೊತ್ತ ಈ ಕನ್ಯೆ ಭಾರತೀಯರ ‘ಕನಸಿನ ಕನ್ಯೆ’ಯಾಗುತ್ತಾಳೆಂದು ಕನಸೂ ಸಹ ಆಕೆಗೆ ಬಿದ್ದಿರಲಿಕ್ಕಿಲ್ಲ. ಆದರೆ ಛಲ, ಶ್ರಮ ಮತ್ತು ಅದಕ್ಕೆ ತಕ್ಕ ಪ್ರತಿಭೆ ಆಕೆಯಲ್ಲಿತ್ತು.

  ಪರಿಶ್ರಮ ಯಾರನ್ನೂ ಕೈಬಿಡುವುದಿಲ್ಲ. ಹೇಮಾ ‘ಪಾಂಡವ ವನವಾಸಂ ’ಎಂಬ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದಳು. ಆಗ ಆಕೆಗೆ ಭರತನಾಟ್ಯದಲ್ಲೂ ಹಿಡಿತವಿತ್ತು. ವೃತ್ತಿ ಜೀವನ ಆರಂಭಿಸಿದ ಹೇಮಾಮಾಲಿನಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಭರತನಾಟ್ಯ ಮತ್ತು ನಟನೆ ಎರಡೂ ಆಕೆಯ ಜೀವನವಾಯಿತ

  20ರ ಹರೆಯದ ಹೇಮಾ ‘ಸಪ್ನೋಂಕಾ ಸೌದಾಗರ್‌’ (1968) ಚಿತ್ರದಲ್ಲಿ ರಾಜ್‌ಕಪೂರ್‌ಗೆ ನಾಯಕಿಯಾಗಿ ಅಭಿನಯಿಸಿದಳು. ಇದು ಆಕೆಯ ಮೊದಲ ಬಾಲಿವುಡ್‌ಚಿತ್ರ. ದ್ವಿಪಾತ್ರ ಅಭಿನಯದ ‘ಸೀತಾಔರ್‌ ಗೀತಾ’ ಆಕೆಗೆ ಬ್ರೇಕ್‌ ನೀಡಿದ ಚಿತ್ರ. ಈ ಚಿತ್ರದ ಅಭಿನಯಕ್ಕಾಗಿ, ಪ್ರಶಸ್ತಿ ಆಕೆಯನ್ನು ಅರಸಿ ಬಂತು. ದೇವಾನಂದ್‌, ರಾಜೇಶ್‌ ಖನ್ನಾರಂತಹ ದಿಗ್ಗಜ ನಟರು ಮುಗ್ಗುರಿಸಿದ ಕಾಲದಲ್ಲೇ, ಅವರು ಈಕೆಯ ಜೊತೆ ನಟಿಸಿದ ಚಿತ್ರಗಳು ಗೆದ್ದಿವೆ. ಅಮಿತಾ ಬಚ್ಚನ್‌ ಮತ್ತು ಧರ್ಮೇಂದ್ರ ಜೊತೆ ಅಭಿನಯಿಸಿದ ಚಿತ್ರಗಳು ಇತಿಹಾಸ ನಿರ್ಮಿಸಿವೆ. ‘ಶೋಲೆ ’ ಚಿತ್ರಕ್ಕಿಂತ ಬೇರೆ ಉದಾಹರಣೆ ಬೇಕೆ?.

  ಮದರಾಸು ಮೂಲದ ಹೇಮಾ, 70ರ ದಶಕದಲ್ಲಿ ಮುಂಬಯಿ ನಗರಿಯ ಮನೆಮಾತಾಗಿದ್ದರು. ಇದಕ್ಕಿಂತ ಮುನ್ನ ಬಾಲಿವುಡ್‌ ಆಳಿದ ದಕ್ಷಿಣದ ನಟಿಯೆಂದರೆ ವೈಜಯಂತಿ ಮಾಲಾ. ತನ್ನ ಇಮೇಜ್‌ ಬದಿಗೊತ್ತಿ ‘ಅಂದಾಜ್‌’, ‘ಕಿನಾರಾ’, ‘ಖುಷುಬೂ’, ‘ಮೀರಾ’ ದಂತಹ ಚಿತ್ರಗಳಲ್ಲಿ ನಟಿಸಿದ ಪ್ರತಿಭಾವಂತೆ. ಹೀಗೆ ಸುಮಾರು 100ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  ‘ಸ್ವಾಮಿ’, ‘ಸಹರಾ’, ‘ಅವರ್ಗಿ’ ಇನ್ನೂ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಆಕೆಯ ಚಿತ್ರರಂಗದ ಸೇವೆಗಾಗಿ ಸರಕಾರ 1999ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿದೆ.

  SUMಸಾರ ಸಾಗರ:

  ಬಾಲಿವುಡ್‌ನ ಪ್ರಸಿದ್ಧ ನಟರಾದ ಜಿತೇಂದ್ರ ಮತ್ತು ಸಂಜೀವ್‌ ಕುಮಾರ್‌ ಹೆಮಾಳ ಪ್ರೇಮಕ್ಕಾಗಿ ಅಲೆದಾಡಿದವರು. ಆಕೆಯ ಗುಣ-ಸೌಂದರ್ಯ ಅವರನ್ನು ಅದೆಷ್ಟು ಕಾಡಿದರೂ ಹೇಮ ಮಾತ್ರ ಒಲಿಯಲಿಲ್ಲ. ಅವರಿಗೂ ಆಕೆ ಕನಸಾದಳು. ಆದರೆ ಅಚ್ಚರಿ ಎಂಬಂತೆ ಹಿಂದಿಯ ‘ಹಿ-ಮ್ಯಾನ್‌’ ಧರ್ಮೇಂದ್ರನ ಎರಡನೇ ಪತ್ನಿಯಾಗಿ 1980ರಲ್ಲಿ ಹಸಮಣೆ ಏರಿದರು. ‘ಧರ್ಮೇಂದ್ರ ಯಾವ ಪರಿಯ ಮೋಡಿ ಮಾಡಿದನೋ ಏನೋ!’ ಅಂತ ಅಂದುಕೊಂಡವರು ಹೆಚ್ಚು.

  80ರ ದಶಕದಲ್ಲಿ ಚಿತ್ರ ರಂಗದಿಂದ ಕೊಂಚ ದೂರ ಸರಿದ ಹೇಮಾ ಭರತನಾಟ್ಯವನ್ನು ಮುಂದುವರಿಸಿದರು. ಅಲ್ಲದೆ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿದರು. ‘ನೂಪುರ್‌’ ಎಂಬ ಧಾರವಾಹಿಯನ್ನು ನಿರ್ದೇಶಿಸಿದರು. ಧಮೇಂದ್ರ-ಹೇಮಾ ದಂಪತಿಗಳಿಗೆ ಎರಡು ಹೆಣ್ಣು ಮಕ್ಕಳು. ಅಹ್ನಾ ಮತ್ತು ಇಶಾ.

  ಇಶಾ ಇನ್ನೂ ಚಿತ್ರರಂಗದಲ್ಲಿ ಕಾಲೂರುವ ಪ್ರಯತ್ನದಲ್ಲಿಯೇ ಇದ್ದಾಳೆ. ಅಪ್ಪ-ಅಮ್ಮನಂತಹ ಸೌಂದರ್ಯ-ಯಶಸ್ಸುಗಳು ಯಾವುದೂ ಇವರಿಗೆ ಬಂದಿಲ್ಲ. ಆದರೆ ಧರ್ಮೇಂದ್ರನ ಮೊದಲ ಪತ್ನಿಯ ಮಕ್ಕಳಾದ ಸನ್ನಿ ಮತ್ತು ಬಾಬಿ ಯಶಸ್ಸು ಕಂಡಿದ್ದಾರೆ. ಹೇಮಾ ಇಶಾಳಿಗಾಗಿ ಚಿತ್ರವೊಂದನ್ನು ನಿರ್ದೇಶಿಸುವ ತರಾತುರಿಯಲ್ಲಿದ್ದಾರಂತೆ.

  ಮಗಳಿಗಾಗಿ ನಿರ್ದೇಶನಕ್ಕಿಳಿದ ಹೇಮಾ ಪತಿಗಾಗಿ ಪ್ರಚಾರಕ್ಕೂ ಹೋಗಿದ್ದಾರೆ. ಸಂಸಾರವೇ ಆಕೆಯ ಜೀವನ ಎಂದರೂ ತಪ್ಪಲ್ಲ. ಅವರು ರಾಜ್ಯಸಭಾ ಸದಸ್ಯೆ. ರಾಜಸ್ಥಾನದ ಬಿಕ್ನೆರ್‌ನಿಂದ ಸ್ಪರ್ಧಿಸಿದ ಧರ್ಮೇಂದ್ರ ಗೆಲ್ಲುವಲ್ಲಿ ಹೇಮಾ ಪಾತ್ರವಿದೆ. ಆದರೆಇವರ ವಿವಾಹ ಮಾತ್ರ ವಿವಾದಕ್ಕೆ ಎಡೆಮಾಡಿತು. ಅಂತಿಮವಾಗಿ ಸತಿ-ಪತಿಗಳು ಸಂಸದರಾಗಿದ್ದಾರೆ.

  ಆಕೆಗೆ ಇಷ್ಟೆಲ್ಲದಕ್ಕೂ ಸಮಯವೆಲ್ಲಿದೆ ಅನ್ನಿಸಬಹುದು. ಅದೇ... ಛಲ, ಶ್ರಮ, ಪ್ರತಿಭೆ ಆಕೆಯಲ್ಲಿ ಇನ್ನೂ ಇದೆ. 55ರ ಇಳಿವಯಸ್ಸಿನಲ್ಲೂ ಕನಸಿನ ಕನ್ಯೆಯ ಮಾದಕತೆ ಮಾಸಿಲ್ಲ. ಅಮಿತಾಬ್‌ ಜೊತೆ ನಟಿಸಿದ ‘ಬಾಗ್‌ಬಾನ್‌’ ಚಿತ್ರದ ಯಶಸ್ಸೇ ಇದಕ್ಕೆ ಸಾಕ್ಷಿ.

  ಬರುತ್ತಾರೆ!

  ಇದೆಲ್ಲಾ ನೆನೆಪಾದದ್ದು ಹೇಮಾ ಜೂನ್‌.13ರ ಆದಿತ್ಯವಾರ ಬೆಂಗಳೂರಿಗೆ ಬರಲಿದ್ದಾರೆಂದು ತಿಳಿದಾಗ. ಹೇಮಾಗೆ ಬೆಂಗಳೂರು ಹೊಸತಲ್ಲ. ಅವರು ಕರ್ನಾಟಕದಲ್ಲಿ ಕೆಲವು ನೃತ್ಯ ಕಾರ್ಯಕ್ರಮ ನೀಡಿದ್ದಾರೆ. . ಸಿನಿಎಕ್ಸ್‌ಫೋ, ಹಂಪಿ ಉತ್ಸವ ಇತ್ಯಾದಿ. ಈ ಬಾರಿ ಚೌಡಯ್ಯ ಸ್ಮಾರಕ ಭವನದಲ್ಲಿ ಅವರ ನೃತ್ಯ ಪ್ರದರ್ಶನವಿದೆ. ಅವರು ಮಾತ್ರವಲ್ಲ. ಅಲ್ಲಿ ಅವರ ಗುರು ದೀಪಕ್‌ ಮುಜುಂದಾರ್‌ ನೃತ್ಯ ಪ್ರದರ್ಶನವೂ ಇದೆ. ಖ್ಯಾತ ವಿದೂಷಿ ರಮಾ ಅವರ ಹಿನ್ನೆಲೆ ಗಾಯನಕ್ಕೆ ಇವರು ಹೆಜ್ಜೆ ಹಾಕಲಿದ್ದಾರೆ.

  ಹೇಮಾ ಮುಗ್ಳನಗೆಗೆ ಮನಸೋತವರೆಷ್ಟೋ? ಕನಸಿನ ಕನ್ಯೆಯನ್ನೊಮ್ಮೆ ನನಸಲ್ಲಿ ನೋಡೋಣ! ಓ ಸಾತೀ ಚಲ್ಲ್‌...

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X