»   » ‘ಸಖ-ಸಖಿ’ ಚಿತ್ರತಂಡಕ್ಕೆ ಪೊಲೀಸರಿಂದ ಆತಿಥ್ಯ!

‘ಸಖ-ಸಖಿ’ ಚಿತ್ರತಂಡಕ್ಕೆ ಪೊಲೀಸರಿಂದ ಆತಿಥ್ಯ!

Subscribe to Filmibeat Kannada

ಮೈಸೂರು : ನಗರದ ದೇವರಾಜ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ನಡೆದ ಸಿನಿಮೀಯ ಘಟನೆಯಲ್ಲಿ ‘ಸಖ-ಸಖಿ’ ಚಿತ್ರದ ನಿರ್ದೇಶಕ ದಯಾಳ್‌ ಸೇರಿದಂತೆ ಎಂಟು ಮಂದಿಯನ್ನು ಪೋಲಿಸರು ಬಂಧಿಸಿದರು.

ಪೋಲಿಸರ ಪರವಾನಗಿ ಪಡೆಯದೇ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡವನ್ನು ಪೊಲೀಸರು ಬಂಧಿಸಿದರು. ಮೈಸೂರಿನ ಜನಸಂದಣಿ ರಸ್ತೆಯಾದ ದೇವರಾಜ ಮಾರುಕಟ್ಟೆಯಲ್ಲಿ ಕಳೆದ ಎಂಟು ದಿನಗಳಿಂದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ಕೊನೆಯ ಹಂತದ ಚಿತ್ರೀಕರಣದ ಸಂದರ್ಭದಲ್ಲಿ ಪೋಲಿಸರು ತಡೆವೊಡ್ಡಿದರು. ಚಿತ್ರತಂಡ ಪ್ರತಿಭಟನೆಗೆ ನಿಂತಾಗ, ಪರಿಸ್ಥಿತಿ ತಿಳಿಗೊಳಿಸಲು ಚಿತ್ರತಂಡವನ್ನು ಬಂಧಿಸಿದ್ದಾಗಿ ಡಿಸಿಪಿ ಬಾಲಕೃಷ್ಣ ತಿಳಿಸಿದ್ದಾರೆ.

ನಂತರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ 5420ರೂ ಶುಲ್ಕ ಪಾವತಿಸಿ, ಚಿತ್ರೀಕರಣವನ್ನು ಮುಂದುವರೆಸಲಾಯಿತು ಎಂದು ಚಿತ್ರತಂಡ ತಿಳಿಸಿದೆ.
(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada