ಕಲ್ಯಾಣ್ ‘ಕಲ್ಯಾಣ’ ಮುಂದಕ್ಕೆ...
ನಗರದ ವೆಸ್ಟ್ ಆಫ್ ಕಾರ್ಡ್‌ರೋಡ್‌ನಲ್ಲಿರುವ ನಾಗದೇವಕಿ ಪ್ಯಾಲೆಸ್‌ನಲ್ಲಿ ಶುಕ್ರವಾರ(ಜೂ.10) ನಡೆಯ ಬೇಕಾಗಿದ್ದ ಕಲ್ಯಾಣ್ ಅವರ ವಿವಾಹ ಮುಂದೂಡಲ್ಪಟ್ಟಿದೆ.
ಎಷ್ಟೋ ದಿನಗಳಿಂದ ಮದುವೆಯ ಕನಸಿನಲ್ಲಿರುವ ಮತ್ತು ಮದುವೆಯೆಂದರೆ ನಸುನಾಚುವ ಕಲ್ಯಾಣ್ ಅವರ ವಿವಾಹ ಬೆಳಗಾವಿಯ ಐಶ್ವರ್ಯರೊಂದಿಗೆ ನಿಶ್ಚಿತವಾಗಿತ್ತು. ಕಲ್ಯಾಣ್ ಅವರ ಮದುವೆಗೆ ಇನ್ನೂ ಸಮಯ ಕೂಡಿ ಬಂದಿಲ್ಲ . ಕೈಹಿಡಿಯಲಿರುವ ಕನ್ಯೆಐಶ್ವರ್ಯ ಅವರ ಹತ್ತಿರದ ಸಂಬಂಧಿ ತೀರಿಹೋದ ಕಾರಣ, ಶುಭಕಾರ್ಯ ಸದ್ಯಕ್ಕೆ ಮುಂದಕ್ಕೆ ಹೋಗಿದೆ.
ಸೂತಕ ಮುಗಿಯುವವರೆಗೂ ಯಾವ ಶುಭಕಾರ್ಯವನ್ನೂ ಮಾಡುವಂತಿಲ್ಲ. ಗಣೇಶನ ಮದುವೆಗೆ ನೂರೆಂಟು ವಿಘ್ನಗಳು ಎಂಬಂತೆ ಎಲ್ಲ ವಿಘ್ನಗಳು ಕಳೆದು, ಕಲ್ಯಾಣ್ ಗೃಹಸ್ಥಾಶ್ರಮ ಪ್ರವೇಶಿಸುವಂತಾಗಲಿ ಎಂಬುದು ಅಭಿಮಾನಿಗಳ ಹಾರೈಕೆ...
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications