»   » ನಾಗತಿಹಳ್ಳಿಚಂದ್ರು ಮಠಾಧೀಶರಾದರು

ನಾಗತಿಹಳ್ಳಿಚಂದ್ರು ಮಠಾಧೀಶರಾದರು

Posted By: Super
Subscribe to Filmibeat Kannada
Nagathihally Chandrashekhar
'ಏನಾದರೂ ಮಾಡುತಿರು ತಮ್ಮ" ಎನ್ನುವ ಸಾಲಿಗೆ ಸೇರಿದ ಕ್ರಿಯಾಶೀಲ ಕನ್ನಡಿಗರಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಕೂಡ ಒಬ್ಬರು. ದೇಶ ಸುತ್ತು , ಕೋಶ ಓದು, ಇವೆರಡರ ನಡುವೆ ಸಿನಿಮಾಕ್ಕೂ ಸಿದ್ಧತೆ ನಡೆಸುವ ನಾಗತಿಹಳ್ಳಿಗೆ ದಿನದ ಇಪ್ಪತ್ನಾಲ್ಕೂ ತಾಸೂ ಕೈತುಂಬ ಕೆಲಸ ಕೆಲಸ. ಇದೇ ನಾಗತಿಹಳ್ಳಿ ಮೊನ್ನೆ ಮೊನ್ನೆ ತಮ್ಮ ತವರಲ್ಲಿ ಸಂಸ್ಕೃತಿ ಹಬ್ಬ ಮಾಡಿದ್ದರು. ನಾಡಿನ ಸಾಂಸ್ಕೃತಿಕ ಲೋಕದ ಸಮಸ್ತರನ್ನು ನಾಗತಿಹಳ್ಳಿಯಲ್ಲಿ ತುಂಬಿದ್ದರು. ಈ ಪರಿಯ ನಾಗತಿಹಳ್ಳಿಯ ಹೊಸ ಅವತಾರ ಯಾವುದು ಗೊತ್ತಾ ?

- ಸ್ವಾಮೀಜಿ !
ಇಲ್ಲ . ನಾಗತಿಹಳ್ಳಿ ಚಂದ್ರಶೇಖರ್‌ ಸನ್ಯಾಸ ಸ್ವೀಕರಿಸಿಲ್ಲ , ಸನ್ಯಾಸಿಗಳ ಹಿಂದೆಯೂ ಬಿದ್ದಿಲ್ಲ . ಅವರು ಸ್ವಾಮೀಜಿಯಾಗಿ ಕಾಣಿಸಿಕೊಂಡಿದ್ದು ಸಿನಿಮಾದಲ್ಲಿ . ಜಗ್ಗೇಶ್‌ ನಾಯಕರಾಗಿ ಅಭಿನಯಿಸುತ್ತಿರುವ 'ಮಠ" ಚಿತ್ರದಲ್ಲಿನ ವಿಶಿಷ್ಠ ಸ್ವಾಮೀಜಿ ಪಾತ್ರವೊಂದಕ್ಕಾಗಿ ನಾಗತಿಹಳ್ಳಿ ಇತ್ತೀಚೆಗೆ ಬಣ್ಣ ಹಚ್ಚಿಕೊಂಡಿದ್ದರು.

ಹಾಗೆ ನೋಡಿದರೆ ನಾಗತಿಹಳ್ಳಿಗೆ ನಟನೆಯ ಹುಚ್ಚು ಹೊಸತೇನೂ ಅಲ್ಲ . ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಅಲ್ಲಲ್ಲಿ ಮುಖ ತೋರಿಸಿ ಮಾಯವಾಗುತ್ತಿದ್ದರು. ಆದರೆ, ಬೇರೆಯವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದು ಇದೇ ಮೊದಲು.

ಇನ್ನು ಮಠ ಚಿತ್ರದ ಸ್ವಾಮೀಜಿ ಕಥೆ. ಜಿ.ವಿ.ಅಯ್ಯರ್‌ ಅವರನ್ನು ಗಮನದಲ್ಲಿಟ್ಟುಕೊಂಡೇ ಈ ಪಾತ್ರವನ್ನು ಸೃಷ್ಟಿಸಲಾಗಿತ್ತು . ಅಯ್ಯರ್‌ ವಿಧಿವಶರಾದ ಕಾರಣ, ಚಿತ್ರದ ಶೂಟಿಂಗ್‌ ವಿಳಂಬವಾಗಿತ್ತು . ಆನಂತರ ಸ್ವಾಮೀಜಿ ಪಾತ್ರಕ್ಕಾಗಿ ರವಿ ಬೆಳಗೆರೆ ಬಣ್ಣ ಹಚ್ಚುತ್ತಾರೆ ಎನ್ನುವ ವದಂತಿಯೂ ಇತ್ತು . ಮಠಾಧೀಶರಾಗುವ ಯೋಗ ಸಿಕ್ಕಿದ್ದು ಮಾತ್ರ ನಾಗತಿಹಳ್ಳಿಗೆ. ಅಂದಹಾಗೆ, ನಾಗತಿಹಳ್ಳಿಯವರ ಹೊಸ ಚಿತ್ರ ಯಾವಾಗ ? ಉತ್ತರವನ್ನು ಅವರೇ ಹೇಳಲಿದ್ದಾರೆ, ಸದ್ಯದಲ್ಲೇ .

English summary
Nagathihally Chandrashekhar acts in Jaggesh's 'Matha'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada