ನಟ ಅಮಿತಾಭ್ ಬಚ್ಚನ್‌ಗೆ ಬ್ರಿಟನ್ ವಿ.ವಿ ಡಾಕ್ಟರೇಟ್
ಲಂಡನ್ : ಬ್ರಿಟನ್‌ನ ವಿಶ್ವವಿದ್ಯಾಲಯವೊಂದು ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಬಚ್ಚನ್‌ಗೆ, ಗೌರವ ಡಾಕ್ಟರೇಟ್ ನೀಡಿದೆ.
ಅಮಿತಾಭ್‌ರ ಸಿನಿಮಾ ರಂಗದ ಸಾಧನೆ ಪರಿಗಣಿಸಿ, ಲೈಸೆಸ್ಟರ್‌ನ ಡಿ ಮೋಟ್‌ಫೊರ್ಡ್ ವಿಶ್ವವಿದ್ಯಾಲಯ ಈ ಪದವಿ ನೀಡಿ ಗೌರವಿಸಿದೆ. ಜು.19ರಂದು ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಯೂನಿಸೆಫ್‌ನ ರಾಯಭಾರಿಯೂ ಆಗಿರುವ 64ರ ಹರಯದ ಅಮಿತಾಭ್‌ಗೆ ಈ ವಿದೇಶಿ ಮನ್ನಣೆ, ಖುಷಿ ತಂದಿದೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲ ಸೇರಿದಂತೆ ವಿವಿಧ ಗಣ್ಯರು ಡಿ ಮೋಟ್‌ಪೊರ್ಡ್ ವಿವಿಯ ಡಾಕ್ಟರೇಟ್ ಗೌರವಕ್ಕೆ ಈ ಹಿಂದೆ ಪಾತ್ರರಾಗಿದ್ದಾರೆ.
ನಂಟು : ಲೈಸೆಸ್ಟರ್ ಮತ್ತು ಭಾರತೀಯ ಭಾರತೀಯ ಚಿತ್ರರಂಗಕ್ಕೂ ನಂಟಿದೆ. ಲೈಸೆಸ್ಟರ್‌ನಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಸಾಕಷ್ಟು ಚಿತ್ರಮಂದಿರಗಳಿವೆ. ಅನೇಕ ಹಿಂದಿ ಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ.
(ಏಜನ್ಸೀಸ್)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications