»   » ಶಿವಣ್ಣ ಒಬ್ಬ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ವ್ಯಕ್ತಿ ಕೂಡ

ಶಿವಣ್ಣ ಒಬ್ಬ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ವ್ಯಕ್ತಿ ಕೂಡ

Subscribe to Filmibeat Kannada


ಬೆಂಗಳೂರು : ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರ ಆತ್ಮಚರಿತ್ರೆ ಮುತ್ತುರಾಜನ ಮುತ್ತು ಇಂದು ಯವನಿಕಾದಲ್ಲಿ ಬಿಡುಗಡೆಯಾಯಿತು.

ತಂದೆ ರಾಜ್‌ಕುಮಾರ್ ಅವರೊಂದಿಗೆ ಕಳೆದ ರಸಘಳಿಗೆಗಳನ್ನು ಶಿವಣ್ಣ ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಸೌರವ ಪ್ರಕಾಶನ ಹೊರತಂದಿರುವ ಈ ಪುಸ್ತಕವನ್ನು ಪತ್ರಕರ್ತ ಸದಾಶಿವ ಶೆಣೈ ಅವರು ನಿರೂಪಿಸಿದ್ದಾರೆ.

ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಶಿವರಾಜ್‌ಕುಮಾರ್ ಒಬ್ಬ ಉತ್ತಮ ನಟ ಮಾತ್ರವಲ್ಲ, ಅವರು ಒಬ್ಬ ಒಳ್ಳೆಯ ವ್ಯಕ್ತಿ ಕೂಡ ಎಂದು ಶ್ಲಾಘಿಸಿದರು.

ಜುಲೈ 12ರಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಶಿವಣ್ಣ ಅವರಿಗೆ ಎರಡು ದಿನ ಮೊದಲೇ ಕಾಣಿಕೆ ರೂಪದಲ್ಲಿ ಪುಸ್ತಕ ಹೊರಬಂದಿರುವುದು ಶಿವಣ್ಣನಿಗೂ ಮತ್ತು ಅವರ ಅಭಿಮಾನಿಗಳಿಗೂ ಖುಷಿ ತಂದಿದೆ.

ಸಭಾಂಗಣದ ವೇದಿಕೆಯ ಮೇಲೆ ಪಾರ್ವತಮ್ಮ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶಿವರಾಜ್‌ಕುಮಾರ್, ಅವರ ಪತ್ನಿ ಗೀತಾ, ಪ್ರೊ.ಸಿದ್ದಲಿಂಗಯ್ಯ ಮತ್ತು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆತ್ಮಚರಿತ್ರೆ ರೆಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada