»   » ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆತ್ಮಚರಿತ್ರೆ ರೆಡಿ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆತ್ಮಚರಿತ್ರೆ ರೆಡಿ

Subscribe to Filmibeat Kannada


ಬೆಂಗಳೂರು : ನಟ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಎರಡು ಸಿಹಿಸುದ್ದಿ. ಗುರುವಾರ(ಜು.12) ಶಿವಣ್ಣನ ಹುಟ್ಟಿದ ಹಬ್ಬ. ಅದಕ್ಕೂ ಮುನ್ನ ಅಂದರೆ ಇಂದು(ಜು.10) ಶಿವಣ್ಣನ ಆತ್ಮ ಚರಿತ್ರೆ ಮುತ್ತುರಾಜನ ಮುತ್ತು ಪುಸ್ತಕ ಬಿಡುಗಡೆಯಾಗಲಿದೆ.

ಪತ್ರಕರ್ತ ಸದಾಶಿವ ಶೆಣೈ, ಶಿವಣ್ಣನ ಆತ್ಮ ಚರಿತ್ರೆಯನ್ನು ತಮ್ಮ ಅಕ್ಷರಗಳಲ್ಲಿ ನಿರೂಪಿಸಿದ್ದಾರೆ. ತಮ್ಮ ಬದುಕಿನ ಪ್ರಮುಖ ಘಟನಾವಳಿಗಳನ್ನು, ಅಪ್ಪನೊಂದಿಗಿನ ಒಡನಾಟವನ್ನು ಶಿವರಾಜ್ ಕುಮಾರ್, ಮುಕ್ತವಾಗಿ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.

ನಗರದ ಯವನಿಕಾ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಗಂಟೆಗೆ ಪುಸ್ತಕ ಲೋಕಾರ್ಪಣೆ ಕಾರ್ಯವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೆರವೇರಿಸುವರು. ಡಾ.ಸಿದ್ದಲಿಂಗಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಪಾರ್ವತಮ್ಮ ರಾಜ್‌ಕುಮಾರ್, ಗೌರಿ ಲಂಕೇಶ್ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಸೌರವ್ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada