»   » ರಾಮ್‌ಪ್ರಸಾದ್‌ ಸಿನಿಮಾಗೆ ನಾಯಕಿ ಬೇಕು..

ರಾಮ್‌ಪ್ರಸಾದ್‌ ಸಿನಿಮಾಗೆ ನಾಯಕಿ ಬೇಕು..

Posted By:
Subscribe to Filmibeat Kannada

ಗಾಯನವನ್ನೇ ಪೂರ್ಣಾವಧಿ ವೃತ್ತಿಯನ್ನಾಗಿ ಸ್ವೀಕರಿಸಿ ಕರ್ಮಭೂಮಿ ಅಮೆರಿಕದಿಂದ ತವರು ಕನ್ನಡನಾಡಿಗೆ ಮರಳಿರುವ ರಾಮ್‌ಪ್ರಸಾದ್‌ ಈಗ ಏನು ಮಾಡುತ್ತಿದ್ದಾರೆ ?

ಹಾಡುವುದಂತೂ ಇದ್ದೇ ಇದೆ ; ಹಾಡಿಗೆ ಸಂಬಂಧಿಸಿದ ನೂರೆಂಟು ಕನಸುಗಳೂ ತಲೆಯಲ್ಲಿವೆ. ಆ ಮಾತು ಪಕ್ಕಕ್ಕಿಡಿ, ಉಳಿದಂತೆ ರಾಮ್‌ಕುಮಾರ್‌ ಕನಸುಗಳೇನು ? ಆ್ಞಂ, ಅವರ ತಲೆಯಲ್ಲೊಂದು ಸಿನಿಮಾದ ಯೋಜನೆ ಸುಳಿದಾಡುತ್ತಿದೆ. ‘ಪ್ರೀತಿ ಪ್ರೇಮ ಪ್ರಣಯ’ದ ನಂತರ ಇನ್ನೊಂದು ಕನ್ನಡ ಚಿತ್ರ ನಿರ್ಮಿಸುವ ಯೋಜನೆ ರಾಮ್‌ಪ್ರಸಾದ್‌ ಅವರದು.

ರಾಮ್‌ರ ಹೊಸ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಭಾರತ ಮಾತ್ರವಲ್ಲದೆ ಅಮೆರಿಕದಲ್ಲೂ ಚಿತ್ರದ ಚಿತ್ರೀಕರಣ ನಡೆಯಲಿದೆ. ಹಾಡುಗಳ ಧ್ವನಿಮುದ್ರಣ ಆಗಸ್ಟ್‌ನಲ್ಲೇ ನಡೆಯಲಿದೆ. ಚಿತ್ರೀಕರಣ ಅಕ್ಟೋಬರ್‌ ಮೊದಲ ವಾರದಿಂದ ಅಮೆರಿಕಾದಲ್ಲಿ ಶುರು ಎನ್ನುವುದು ರಾಮ್‌ಪ್ರಸಾದ್‌ ಲೆಕ್ಕಾಚಾರ.

ಕಥೆಯೇನೋ ಪಕ್ಕಾ ಆಗಿದೆ. ಪಕ್ಕಾ ಆಗದಿರುವುದು ಚಿತ್ರದ ಹೀರೋಯಿನ್‌ಗಳು. ಸದ್ಯಕ್ಕೆ ರಾಮ್‌ಪ್ರಸಾದ್‌ ತಮ್ಮ ಹೊಸ ಚಿತ್ರಕ್ಕೆ ನಾಯಕಿಯರ ಶೋಧದಲ್ಲಿದ್ದಾರೆ.

ರಾಮ್‌ಪ್ರಸಾದ್‌ ಬಯಸುವ ನಾಯಕಿಯರು-

  • ಇಬ್ಬರು ಪ್ರತಿಭಾನ್ವಿತ ಹುಡುಗಿಯರಿಗೆ ಅವಕಾಶವಿದೆ.
  • ಅಮೆರಿಕನ್‌ ಭಾರತೀಯರಾಗಿರಬೇಕು.
  • 18-19ರ ಹರಯದ ಹುಡುಗಿಯರಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ಹುಡುಗಿಯರು ತಮ್ಮ ಕೆಲವು ಭಾವಚಿತ್ರಗಳನ್ನು ರಾಮ್‌ಪ್ರಸಾದ್‌ರಿಗೆ ಕಳುಹಿಸಬಹುದು. ಭಾವಚಿತ್ರಗಳ ರೌಂಡಿನಲ್ಲಿ ಆಯ್ಕೆಯಾದರೆ, ಆನಂತರ ವಿಡಿಯೋ ಕೆಸೆಟ್‌ ಕಳುಹಿಸಬೇಕು. ಆ ಕೆಸೆಟ್‌ನಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನದ ತುಣುಕುಗಳನ್ನು ಚಿತ್ರೀಕರಿಸಿರಬೇಕು (ಅಳು-ನಗು-ಗಂಭೀರ ಇತ್ಯಾದಿ). ಚಿತ್ರೀಕರಣಕ್ಕಾಗಿ ಯಾವುದಾದರೂ ಚಿತ್ರದ ತುಣುಕುಗಳನ್ನು ಅಭಿನಯಿಸಿದರಾಯಿತು. ಇಂಗ್ಲಿಷ್‌ ಚಿತ್ರಗಳಾದರೂ ಅಡ್ಡಿಯಿಲ್ಲ .

18 ವರ್ಷದ ಒಳಗಿನ ಹುಡುಗಿಯಾದರೆ, ಅವರ ಪೋಷಕರನ್ನು ಸಂಪರ್ಕಿಸಿ ಅನುಮತಿ ಪಡೆಯಲಾಗುವುದು.

ರಾಮ್‌ಪ್ರಸಾದ್‌ ವಿಳಾಸ : ನಂ.20, ಮಾರುತಿ, 4 ನೇ ಕ್ರಾಸ್‌, ಶಂಕರಪುರಂ, ಬೆಂಗಳೂರು- 560 004.

ಇ-ಮೇಲ್‌ : singer_ram@yahoo.com

ವೆಬ್‌ಸೈಟ್‌: www.geocities.com/singer_ram

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada