»   » ‘ಆಕಾಶ’ದೆತ್ತರಕ್ಕೆ ಪುನೀತ್‌!

‘ಆಕಾಶ’ದೆತ್ತರಕ್ಕೆ ಪುನೀತ್‌!

Posted By:
Subscribe to Filmibeat Kannada

ಪುನೀತ್‌ರಾಜ್‌ಕುಮಾರ್‌ ಅಭಿನಯದ ‘ಆಕಾಶ್‌’ ಚಲನಚಿತ್ರ ಶತದಿನೋತ್ಸವವನ್ನು ಪೂರೈಸಿದೆ... ಈ ನಿಮಿತ್ತ ಜೆಪಿ ನಗರದ 6ನೇ ಹಂತದಲ್ಲಿರುವ ಸಿದ್ಧೇಶ್ವರ ಚಿತ್ರಮಂದಿರದಲ್ಲಿ ಸಂಭ್ರಮ ಆಚರಣೆಯ ಕಾರ್ಯಕ್ರಮ ಏರ್ಪಾಟಾಗಿತ್ತು.

ಡಾ.ರಾಜ್‌ಕುಮಾರ್‌ ದಂಪತಿಗಳ ಸೊಸೆಯಂದಿರಾದ ಗೀತಾ, ಮಂಗಳಾ, ಅಶ್ವಿನಿ ಮತ್ತು ಮಗಳು ಲಕ್ಷ್ಮೀ ಗೋವಿಂದರಾಜ್‌ ಅವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಾಜ್‌, ರಾಜಕುಮಾರ ನಿಮ್ಮವನು ಎಂದು ನೀವು ಭಾವಿಸಿದ ಮೇಲೆ ಇದರ ಮುಂದೆ ಮತ್ಯಾವ ದೊಡ್ಡಗಳಿಕೆಯೂ ಇಲ್ಲ ಎಂದು ಎದೆತುಂಬಿ ಮಾತನಾಡಿದರು.

ವಾರ್ತಾ ಸಚಿವ ಬಿ.ಶಿವರಾಮ್‌ ಮಾತನಾಡಿ, ಡಾ.ರಾಜ್‌ಕುಮಾರ್‌ ಅಭಿಮಾನಿ, ಅಭಿಮಾನಿಯಾಬ್ಬ ವಾರ್ತಾ ಸಚಿವ ಸ್ಥಾನ ಅಲಂಕರಿಸುವುದು ಮತ್ತು ಸಾರ್ಥಕ ಸುವರ್ಣ ಕಾರ್ಯಕ್ರಮ ಸಂಘಟಿಸುವುದು, ನನಗೆ ಸಾರ್ಥಕತೆ ತಂದಿದೆ ಎಂದರು.

ಎಸ್‌.ಎ.ಚಿನ್ನೇಗೌಡ ಅವರು ಮಾತನಾಡಿ, ಡಾ.ರಾಜ್‌ಕುಮಾರ್‌ ಕಲ್ಪವೃಕ್ಷವಿದ್ದಂತೆ. ದೇಶದಲ್ಲಿ, ಪೃಥ್ವಿ ರಾಜ್‌ಕುಮಾರ್‌ ಕುಟುಂಬದ ನಂತರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಉದಾಹರಣೆ ರಾಜ್‌ ಕುಟುಂಬವಷ್ಟೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಣ್ಣಂದಿರ ಭೇಷ್‌ಗಿರಿ : ನಟ ಶಿವರಾಜ್‌ಕುಮಾರ್‌ -ನಾನು ಅಪ್ಪು ಅಭಿಮಾನಿ, ಅವನು ತುಂಬಾ ಪ್ರತಿಭಾವಂತ. ಸಾಹಸ ದೃಶ್ಯಗಳಲ್ಲಿ ಅವನಿಗೆ ಅವನೇ ಸಾಟಿ ಎಂದರೆ, ನಟ ರಾಘವೇಂದ್ರರಾಜ್‌ಕುಮಾರ್‌- ಅಪ್ಪು ಯಾವಾಗಲೂ ಸುಮ್ಮನೆ ಶಾಂತವಾಗಿರುತ್ತಾನೆ. ಇವತ್ತಿಗೂ ಸಹ ಆತ ಏನೂ ತಿಳಿಯದವನಂತೆ ಕಾಣುತ್ತಾನೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಚಿತ್ರತಂಡವೇನೂ ನಡೆಸಿದ್ದಲ್ಲ. ಚಿತ್ರಮಂದಿರದ ಮಾಲೀಕರಾದ ಕೆ.ಎಸ್‌.ತೋಂಟದಾರ್ಯ ಮತ್ತು ಶ್ರೀಮತಿ ರುದ್ರಾಣಮ್ಮ ತೋಂಟದಾರ್ಯ ಅವರುಗಳು ಕಾರ್ಯಕ್ರಮ ಸಂಘಟಿಸಿದ್ದರು. ಸಿದ್ಧೇಶ್ವರ ಚಿತ್ರಮಂದಿರದಲ್ಲೇ ನಡೆಸಿದ್ದಕ್ಕೆ ಕಾರಣವೂ ಇದೆ. ಪುನೀತ್‌ ಅಭಿನಯದ ಅಪ್ಪು, ಅಭಿ ಮತ್ತು ಆಕಾಶ್‌ ಮೂರೂ ಚಿತ್ರಗಳು ಈ ಚಿತ್ರಮಂದಿರದಲ್ಲಿ ಶತದಿನೋತ್ಸವ ಕಂಡಿವೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada