»   » ಚೆಲುವಿನ ಸಿರಿ ಐಶ್ವರ್ಯಾ ರೈ ಮೇಣದ ಪ್ರತಿಮೆ ಇದೀಗ ರೆಡಿ

ಚೆಲುವಿನ ಸಿರಿ ಐಶ್ವರ್ಯಾ ರೈ ಮೇಣದ ಪ್ರತಿಮೆ ಇದೀಗ ರೆಡಿ

Subscribe to Filmibeat Kannada


ನ್ಯೂಯಾರ್ಕ್, ಆಗಸ್ಟ್ 10 : ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಅವರ ಮೇಣದ ಪ್ರತಿಮೆ, ನ್ಯೂಯಾರ್ಕ್ ನ ಪ್ರಸಿದ್ಧ ಟೈಮ್ಸ್ ಚೌಕಿಯ ಟ್ಯುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಅನಾವರಣಗೊಳ್ಳಲು ಸಜ್ಜಾಗಿದೆ.

ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ಆಳೆತ್ತರದ ಈ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ವಿಶೇಷ. ಅಂದು ಸ್ಥಳೀಯ ಅಭಿಮಾನಿಗಳ ತಂಡದಿಂದ ಹಾಡು ನೃತ್ಯ ಕಾರ್ಯಕ್ರಮ ಜರುಗಲಿದೆ. ಆದರೆ ಈ ಸಮಾರಂಭದಲ್ಲಿ ಐಶ್ ಪಾಲ್ಗೊಳ್ಳುವ ಸಂಭವ ಬಹುತೇಕ ಕಮ್ಮಿ ಎಂದು ಸಂಘಟಕರು ಹೇಳಿದ್ದಾರೆ.

2000ಇಸವಿಯಲ್ಲಿ ಆರಂಭವಾದ ನ್ಯೂಯಾರ್ಕ್ ನ ಈ ವಸ್ತು ಸಂಗ್ರಹಾಲಯ, ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭಾರತೀಯರೊಬ್ಬರ ಮೇಣದ ಪ್ರತಿಮೆ ಇಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು.

ಈಗಾಗಲೇ ಲಂಡನ್ ನಟ್ಯುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಬಾಲಿವುಡ್ ನ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮೇಣದ ಪ್ರತಿಕೃತಿಗಳು ಜನರ ಆಕರ್ಷಣೆಯನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada