For Quick Alerts
  ALLOW NOTIFICATIONS  
  For Daily Alerts

  ಬರ್ತ್ ಡೇ ಖುಷಿಯಲ್ಲಿರೋ ಮಾಲಾಶ್ರೀ ಗಮನಕ್ಕೆ..

  By Staff
  |

  ಹುಟ್ಟೋ ಹೆಣ್ಣುಮಕ್ಕಳ ಹೆಸರಿಗೆ ಶ್ರೀಗಳು ಸೇರಿಕೊಳ್ಳುವಷ್ಟು ನಟಿ ಮಾಲಾಶ್ರೀ ಜನಪ್ರಿಯರಾಗಿದ್ದರು. ಇಂದು(ಆಗಸ್ಟ್ 10) ಅವರ ಹುಟ್ಟಿದ ದಿನ.

  • ನಟೇಶ್
  ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ ದುರ್ಗಿ ಈ ಮಾಲಾಶ್ರೀ. ರಾಣಿ ಮಹಾರಾಣಿಯಂತೆ ಮಿಂಚಿ, ಪ್ರೇಕ್ಷಕರ ಕನಸಿನ ರಾಣಿಯಾಗಿ ನಿದ್ದೆಗೆಡಿಸಿದ್ದು ಇದೇ ಮಾಲಾಶ್ರೀ. ಅದೆಲ್ಲಾ ಈಗ ಮಾಲಾಶ್ರೀ ಪಾಲಿಗೆ ಗತ ವೈಭವ! ಆದರೆ ಈಗಲೂ ಅವರ ಬಣ್ಣದ ಮೋಹ ಇಂಗಿಲ್ಲ. ಕಿರಣ್ ಬೇಡಿಯಾಗಿ ನಿಮ್ಮ ಮುಂದೆ ನಿಲ್ಲಲ್ಲಿದ್ದೇನೆ ಎಂದು ಪತ್ರಕರ್ತರ ಬಳಿ ಅವರು ಆಗಾಗ ಹೇಳುತ್ತಿರುತ್ತಾರೆ.

  ನಂಜುಂಡಿ ಕಲ್ಯಾಣ ಚಿತ್ರದಿಂದ ಆರಂಭಗೊಂಡ ಮಾಲಾಶ್ರೀ ಅವರ ಚಿತ್ರಯಾತ್ರೆ, ಅನೇಕ ದಿಗ್ವಿಜಯಗಳ ಸಾಧಿಸಿದೆ. ಒಬ್ಬ ನಟನಿಗಿಂತಲೂ ಹೆಚ್ಚಿನ ಜನಪ್ರಿಯತೆ ಮತ್ತು ಶಕ್ತಿ ಅವರಿಗಿತ್ತು. ಹೀಗಾಗಿಯೇ ಒಂದು ಸಲ; ನನ್ನ ಜೊತೆ ನಾಯಿಮರಿ ಪಾತ್ರ ಮಾಡಿದರೂ ಚಿತ್ರ ನೂರು ದಿನ ಓಡುತ್ತೆಎಂದು ಗರ್ವದಿಂದ ಮಾತನಾಡಿದ್ದರು.ಆ ಮಾತನ್ನು ಅವರು ದಕ್ಕಿಸಿಕೊಂಡಿದ್ದರು. ಆ ಮಾತು ಬಿಡಿ. ನಟನೆಯ ವಿಷಯಕ್ಕೆ ಬಂದರೆ, ಒಬ್ಬ ನಟಿಯಾಗಿ ಮಾಲಾಶ್ರೀ ಮಾಡಿದ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ.

  ಗ್ಲಾಮರ್ ಪಾತ್ರಗಳಿಂದ ಹಿಡಿದು ಬಜಾರಿ ಪಾತ್ರದವರೆಗೆ, ಗಂಡುಬೀರಿಯಂತೆ ಬಡಿದಾಡುವ ಪಾತ್ರದವರೆಗೆ ಮಾಲಾಶ್ರೀ ಮಿಂಚಿದ್ದೇ ಮಿಂಚಿದ್ದು. ಆ ಮುಖಾಂತರ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ, ಅವರು ಇತಿಹಾಸ ನಿರ್ಮಾಣ ಮಾಡಿದವರು. ರಾಮಾಚಾರಿ, ಪೊಲೀಸನ ಹೆಂಡತಿ, ಸಿಬಿಐ ದುರ್ಗಾ, ಮಾಲಾಶ್ರೀ ಮಾಮಾಶ್ರೀ, ಎಸ್.ಪಿ.ಭಾರ್ಗವಿ, ಕಿತ್ತೂರಿನ ಹುಲಿ, ಬೆಳ್ಳಿ ಕಾಲುಂಗುರ ಚಿತ್ರಗಳು ಮಾಲಾಶ್ರೀ ಅಭಿನಯದ ಪ್ರಮುಖ ಚಿತ್ರಗಳು.

  ಮಗಳು ಮತ್ತು ಗಂಡನ ಜೊತೆ ಸಂತೃಪ್ತ ಗೃಹಿಣಿಯಾಗಿ ಮಾಲಾಶ್ರೀ ಇಂದು ಆರಾಮವಾಗಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಪತಿ ದೇವರು ರಾಮುಗೆ ಸಹಕಾರ ನೀಡುತ್ತಿದ್ದಾರೆ. ಸೋಲಿನ ಮೇಲೆ ಸೋಲು ಕಂಡರೂ, ರಾಮು ಧೈರ್ಯ ಕುಂದಿಲ್ಲ. ಕಾರಣ ಅವರಿಂದೆ ಮಾಲಾಶ್ರೀ ಇದ್ದಾರೆ.

  ತವರು ರಾಜ್ಯ ಆಂಧ್ರಪ್ರದೇಶವನ್ನು ಮರೆಯುವಷ್ಟು ಪ್ರೀತಿಯ ಹೊಳೆ ಹರಿಸಿದ ಕನ್ನಡ ಪ್ರೇಕ್ಷಕರಿಗೆ, ಮಾಲಾಶ್ರೀ ಏನಾದರೂ ಕೊಡಬೇಕು. ಅದು ಅವರ ಕರ್ತವ್ಯ. ಜೊತೆಗೆ ಋಣದ ಪ್ರಶ್ನೆ. ಮಚ್ಚು, ಕೊಚ್ಚು ಚಿತ್ರಗಳ ಜೊತೆಗೆ ಒಂದಷ್ಟು ಸದಭಿರುಚಿಯ ಚಿತ್ರಗಳನ್ನು ನೀಡುವತ್ತ ಮಾಲಾಶ್ರೀ ಯೋಚಿಸಲಿ.

  ಹುಟ್ಟು ಹಬ್ಬದ ಶುಭಾಶಯ ದುರ್ಗಮ್ಮ.. ನೀನು ನೂರು ಕಾಲ ತಣ್ಣಗೆ ಬಾಳಮ್ಮ..

  ಮಾಲಾಶ್ರೀ ಚಿತ್ರಪಟಗಳು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X