»   » ‘ನೀರು’ ಸುಂದರಿಯ ಮದಿರಾ ಮಹಾತ್ಮೆ

‘ನೀರು’ ಸುಂದರಿಯ ಮದಿರಾ ಮಹಾತ್ಮೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಎಚ್‌ಟೂಓ ಚಿತ್ರದುದ್ದಕ್ಕೂ ಪುಟ್ಟ ಬಟ್ಟೆ ತೊಟ್ಟಿದ್ದ ಪ್ರಿಯಾಂಕ ತ್ರಿವೇದಿ ಎಂಬ ಆಮದು ಸುಂದರಿಯ ಮಾದಕ ಕಣ್ಣನ ರಹಸ್ಯವೇನು?

ಉತ್ತರ- ಆಲ್ಕೋಹಾಲು !

ಸದ್ಯಕ್ಕೆ ‘ರೌಡಿ ಅಳಿಯ’ ಕನ್ನಡ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ಕನ್ನಡದ ಹೊಸ ಆಫರ್‌ಗಳನ್ನು ಸಲೀಸಾಗಿ ಒಪ್ಪಿಕೊಳ್ಳಲು ಮುಂದಾಗುತ್ತಿರುವುದು ಯಾಕೆ ಅಂತ ಜಾಸೂಸಿ ಮಾಡಿದಾಗ, ತಮಿಳುನಾಡಿನಿಂದ ಪ್ರಿಯಾಂಕ ಮದ್ಯಾವತಾರದ ಸುದ್ದಿ ಬಂತು.

ಬೆಳಗ್ಗೆ ಟಿಫನ್ನಿನ ಜೊತೆ ಥರ್ಟಿ. ಊಟದ ಜೊತೆ ಸಿಕ್ಸ್‌ಟಿ. ಮಧ್ಯೆ ಮಧ್ಯೆ ಫಲಾಹಾರದ ಜೊತೆ ಒಂದೊಂದು ಪೆಗ್ಗು ಸುರಾಪಾನದ ಅಭ್ಯಾಸ ಇಟ್ಟುಕೊಂಡಿರುವ ಪ್ರಿಯಾಂಕ, ಭಾವನಾತ್ಮಕ ದೃಶ್ಯಗಳಿಗೆ ಸಿದ್ಧಳಾಗುವುದೇ ಚಿತ್ತಾಗುವುದರೊಂದಿಗೆ ಎನ್ನುತ್ತಾರೆ ತಮಿಳು ಸಿನಿಮಾ ಉದ್ಯಮಿಗಳು. ಸೆಕ್ಸಿ ನಟಿ ಎಂದು ಬಿರುದಾಂಕಿತಳಾಗಿದ್ದ ಈಕೆ ‘ಎಚ್‌ಟೂಓ’ ಚಿತ್ರದಲ್ಲಿ ನಟಿಸಿದ ಕಾಲಕ್ಕೆ ತಮಿಳಲ್ಲಿ ಕೈತುಂಬಾ ಚಿತ್ರಗಳಿದ್ದವು. ಆದರೆ ಈಕೆಯ ‘ಪಿವೋಟ್‌’ ಬುದ್ಧಿಗೆ ಅನೇಕ ನಿರ್ಮಾಪಕರು ಕಾಲಿಗೆ ಬುದ್ಧಿ ಹೇಳುವ ಪ್ರಸಂಗಗಳೂ ಬಂದವಂತೆ. ಕಂಠಪೂರ್ತಿ ಕುಡಿದು ಕ್ಯಾಮರಾ ಮುಂದೆ ಸೀನ್‌ ಕ್ರಿಯೇಟ್‌ ಮಾಡಿ ಎಷ್ಟೋ ದೊಡ್ಡ ದೊಡ್ಡ ನಿರ್ದೇಶಕರನ್ನೇ ಪೆಚ್ಚಾಗಿಸಿದ್ದಾಳೆ ಈಕೆ.

ಸದ್ಯಕ್ಕೆ ಬೇರೆ ಚಿತ್ರಗಳ ಆಫರುಗಳು ಬಾರದ ಕಾರಣ ಕನ್ನಡ ಸಿನಿಮಾ ಚೆನ್ನ ಅಂತ ಈಯಮ್ಮ ಪಾಡುತ್ತಿದ್ದಾಳೆ. ‘ಮಲ್ಲ’ ಚಿತ್ರದಲ್ಲೂ ಸಾಕಷ್ಟು ಹಲ್ಲಾಗುಲ್ಲ ಮಾಡಿದ್ದಾಳೆ. ಈಕೆಗೆ ಕುಡಿಸುವ ಹಣದಲ್ಲಿ ಇನ್ನೊಂದು ಸಿನಿಮಾ ತೆಗೆಯಬಹುದು, ಎಚ್ಚರವಾಗಿರಿ ಎಂದು ತಮಿಳು ನಿರ್ಮಾಪಕರು ಸ್ಯಾಂಡಲ್‌ವುಡ್‌ನವರಿಗೆ ಕಿವಿಮಾತು ಹಾಕಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada