»   » ಲೋಕೇಶ್‌ ಸ್ಮರಣೆಗೆ ನಾಟಕ ಸಪ್ತಾಹ

ಲೋಕೇಶ್‌ ಸ್ಮರಣೆಗೆ ನಾಟಕ ಸಪ್ತಾಹ

Subscribe to Filmibeat Kannada

ಬೆಂಗಳೂರು : ಈ ಅಕ್ಟೋಬರ್‌ 14ಕ್ಕೆ ‘ಬ್ಯಾಂಕರ್‌ ಮಾರ್ಗಯ್ಯ’ ಮತ್ತು ‘ಭುಜಂಗಯ್ಯನ ದಶಾವತಾರ’ ಖ್ಯಾತಿಯ ಚಿತ್ರನಟ ಲೋಕೇಶ್‌ ಅಗಲಿ, ಒಂದು ವರ್ಷ ತುಂಬುತ್ತಿದೆ. ಅವರ ಸವಿನೆನಪಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಗರದಲ್ಲಿ ಏರ್ಪಡಿಸಲಾಗಿದೆ.

ಲೋಕೇಶ್‌ ನಾಟಕ ಸಪ್ತಾಹ ಅ.10ರಿಂದ ಆರಂಭವಾಗಲಿದೆ. ರಂಗಭೂಮಿ ಮತ್ತು ಚಿತ್ರರಂಗಕ್ಕೆ ಗಮನಾರ್ಹ ಸೇವೆ ಸಲ್ಲಿಸಿದ ನಟ ಲೋಕೇಶ್‌ ಸಂಸ್ಮರಣೆಗಾಗಿ, ಅ.10ರಿಂದ 15ರವರೆಗೆ ಪ್ರತಿದಿನ ಜಯನಗರದ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಅ.17ರಂದು ಸಪ್ತಾಹದ ಮುಕ್ತಾಯ ಸಮಾರಂಭವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ಲೋಕೇಶ್‌ಗೆ ಸಂಬಂಧಿಸಿದ ಪುಸ್ತಕವೊಂದು ಈ ಸಂದರ್ಭದಲ್ಲಿ ಹೊರಬರಲಿದೆ. ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

(ಇನ್ಫೋ ವಾರ್ತೆ)

Post your views

ಪೂರಕ ನೆನಪಿಗೆ :
ಲೋಕೇಶ್‌ : ಕಳೆದುಹೋದ ದಶಾವತಾರಿ!


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada