»   » ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ : ಗುರು ಕಿರಣ್‌

ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ : ಗುರು ಕಿರಣ್‌

Posted By: Super
Subscribe to Filmibeat Kannada

ಸ್ಯಾಂಡಲ್‌ವುಡ್‌ನ ಇವತ್ತಿನ ನಂಬರ್‌ ಒನ್‌ ಸಂಗೀತ ನಿರ್ದೇಶಕ ಯಾರು?
ಹಂಸಲೇಖಾರ ಮುಂದೆ ಈ ಪ್ರಶ್ನೆ ಇಟ್ಟರೂ ಹಿಂದೂಮುಂದೂ ನೋಡದೆ ಗುರುಕಿರಣ್‌ ಅಂತಲೇ ಹೇಳಬೇಕು. 'ಅಪ್ಪು", 'ನಿನಗಾಗಿ" ಚಿತ್ರ ಸಂಗೀತ ಯುವ ನಾಲಗೆಗಳಲ್ಲಿ ನಲಿದಾಡಿದ್ದೇ ನಿರ್ಮಾಪಕರೆಲ್ಲಾ ಗುರುಕಿರಣ್‌ ಮನೆ ಮುಂದೆ ಬಂದು ನಿಂತುಬಿಟ್ಟರು.

ಟೈಂ ಟೇಬಲ್‌ ಹಾಕಿಕೊಂಡು ಕೆ.ಕಲ್ಯಾಣ್‌ ಹಾಡು ಬರೆದು, ಬಿಸುಟಂತೆ ಗುರುಕಿರಣ್‌ ಟ್ಯೂನ್‌ ಹಾಕುವವರಲ್ಲ. ರೀಮೇಕ್‌ ಸಂಗೀತಕ್ಕೆ ಗುರು ಮನಸ್ಸು ಒಪ್ಪುವುದೂ ಇಲ್ಲ. ಚೂಸಿ ಲೆಕ್ಕಾಚಾರದಲ್ಲಿ ಆಫರ್‌ಗಳನ್ನು ಒಪ್ಪಿಕೊಂಡಾಗ್ಯೂ ಕೈಯಲ್ಲಿ ಈಗ 20 ಚಿತ್ರಗಳಿವೆ. ಒಂದೊಂದರಲ್ಲೂ ಹೊಸತನ ತೋರಬೇಕೆಂಬ ಸವಾಲು. ಸಾಧುಕೋಕಿಲ ಆಗಿದ್ದರೆ, ಯಾವುದೋ ಹಳೆಯ ಇಂಗ್ಲಿಷ್‌ ಚಿತ್ರಗಳ ಸಂಗೀತವನ್ನು ತಂದು, ಸ್ವಲ್ಪ ಹಾಗೆ ಹೀಗೆ ಮಾಡಿ ತೂಗಿಸಿಬಿಡುತ್ತಿದ್ದರೇನೋ. ಆದರೆ, ಗುರು ತಾವೇ ಹೇಳಿಕೊಳ್ಳುವಂತೆ ಕದಿಯುವ ಜಾಯಮಾನದವರಲ್ಲ.

ಮೊದಲು ವರ್ಷಕ್ಕೆ ಒಂದೇ ಚಿತ್ರಕ್ಕೆ ಸಂಗೀತ ಕೊಡೋದು ಅಂತ ಗುರು ಟೈಟಾಗಿದ್ದರು. 'ಎ" ಚಿತ್ರದ ಸಂಗೀತ ಗೋಬಿ ಮಂಚೂರಿಯಂತೆ ಬಿಕರಿಯಾದಾಗಲೇ ತಮ್ಮ ಶಿಷ್ಯ ಮೇಲೆದ್ದ ಅನ್ನುವುದು ಹಂಸಲೇಖಾಗೆ ಮನವರಿಕೆಯಾಯಿತು. ಒಂದೆಡೆ ಹಂಸ್‌ ಸಂಗೀತ ಸೋಲುತ್ತಾ ಬಂತು. ಇನ್ನೊಂದೆಡೆ 'ತಾಲಿಬಾನ್‌ ಅಲ್ಲ ಅಲ್ಲ..." ಹಾಡು ನಂಬರ್‌ ಒನ್‌ ಆಗೇ ಉಳಿದುಕೊಂಡು ಬಿಡ್ತು.

ಗುರು ಈಗ ಆಫರ್ರೆಂದರೆ ಗುರ್ರೆನ್ನುತ್ತಿದ್ದಾರೆ. 20 ಸಿನಿಮಾಗೆ ರಾಗಗಳ ಹೊಸೆಯುವುದರಲ್ಲೇ ಸಾಕುಸಾಕಾಗಿ ಹೋಗುತ್ತಿದೆಯಂತೆ. ಸಾಲದ್ದಕ್ಕೆ ಇನ್ನು ಹತ್ತೇ ದಿನದಲ್ಲಿ ಟ್ಯೂನ್‌ ರೆಡಿ ಮಾಡಿ ಅಂತಲೇ ಆಫರ್‌ ತರುವವರು ಜಾಸ್ತಿ. ಸುಮ್ಮನೆ ಕತ್ತೆ ಥರ ಕೆಲಸ ಮಾಡಿದರೆ ಕ್ರಿಯೆಟಿವಿಟಿ ಸತ್ತು ಹೋಗುತ್ತದೆ ಅನ್ನೋದು ಗುರು ನಂಬಿಕೆ.

ಈ ಎಲ್ಲಾ ಉಸಾಬರಿಗಳಿಗೆ ಪೂರ್ಣವಿರಾಮ ಹಾಕಲು ಗುರು ದೃಢಸಂಕಲ್ಪ ಮಾಡಿದ್ದಾರೆ. ಸದ್ಯಕ್ಕೆ ಗುರು ಯಾರಿಗೂ ಸಂಗೀತ ಸಂಯೋಜನೆ ಮಾಡಿ ಕೊಡುವುದಿಲ್ಲ. ಅವರ ಮನೆ ಮುಂದೆ ಸದ್ಯದಲ್ಲೇ ಈಟ್ಞಫಠಿ ಛಜಿಠಠ್ಠ್ಟಿಚಿ ಞಛಿ ಬೋರ್ಡು ಹಾಕಲಿದ್ದಾರೆ !

English summary
Dont disturb me : Gurukiran

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada