»   » ‘ಪಾಂಡವರು’ ‘ಹುಬ್ಬಳ್ಳಿ’ ಈ ವಾರ ತೆರೆಗೆ...

‘ಪಾಂಡವರು’ ‘ಹುಬ್ಬಳ್ಳಿ’ ಈ ವಾರ ತೆರೆಗೆ...

Subscribe to Filmibeat Kannada


ಈ ಶುಕ್ರವಾರ(ನವೆಂಬರ್‌ 10) ಪಾಂಡವರು ಹಾಗೂ ಹುಬ್ಬಳ್ಳಿ ಚಿತ್ರಗಳು ತೆರೆ ಕಂಡಿವೆ. ಅಂದ ಹಾಗೆ ಹುಬ್ಬಳ್ಳಿ ‘ಬಾರ್ನ್‌ ಐಡೆಂಟಿಟಿ’ ಚಿತ್ರದಿಂದ ಸ್ಫೂರ್ತಿ ಪಡೆದದ್ದು. ಪಾಂಡವರು ಹಿಂದಿ ಚಿತ್ರ ‘ಹಲ್‌ಚಲ್‌’ನ ಛಾಯೆ ಹೊಂದಿದೆ.

ಪಾಂಡವರು ಚಿತ್ರ ಡಾ.ರಾಜ್‌ಕುಮಾರ್‌ ಅಳಿಯ ರಾಮ್‌ಕುಮಾರ್‌ ಅವರ ಸಂಸ್ಥೆಯಿಂದ ನಿರ್ಮಾಣಗೊಂಡಿದೆ. ರಾಜ್‌ಕುಮಾರ್‌ ಪುತ್ರಿ, ರಾಮ್‌ಕುಮಾರ್‌ ಪತ್ನಿ ಪೂರ್ಣಿಮಾ ಈ ಚಿತ್ರದ ಮೂಲಕ ನಿರ್ಮಾಪಕಿ ಎನಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಕೆ.ವಿ.ರಾಜು ಚಿತ್ರ ನಿರ್ದೇಶಿಸಿದ್ದಾರೆ.

ಚಿತ್ರ ಐದು ಮಂದಿ ಸೋದರರ ಕಥೆ ಹೊಂದಿದ್ದು, ಸದ್ಯಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿರುವ ಅಂಬರೀಷ್‌ ಹಿರಿಯಣ್ಣನಾಗಿ ನಟಿಸಿದ್ದಾರೆ. ದೇವರಾಜ್‌, ಜಗ್ಗೇಶ್‌, ಅಭಿಜಿತ್‌ ಹಾಗೂ ರಾಮ್‌ಕುಮಾರ್‌ ಅಂಬರೀಷ್‌ ತಮ್ಮಂದಿರರಾಗಿ ನಟಿಸಿದ್ದಾರೆ. ಚಿತ್ರದ ನಾಯಕಿ ಗುರ್ಲಿನ್‌ ಚೋಪ್ರಾ. ದಾಸರಿ ಸೀನು ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜನೆ ಮಾಡಿದ್ದಾರೆ.

ಖ್ಯಾತ ನಿರ್ದೇಶಕ ಎನ್‌.ಓಂಪ್ರಕಾಶ್‌ರಾವ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ಹುಬ್ಬಳ್ಳಿ ಚಿತ್ರದ ನಿರ್ಮಾಣ ವೆಚ್ಚ ಅಂದಾಜು ನಾಲ್ಕು ಕೋಟಿ ರೂಪಾಯಿ...!? ವಿಶೇಷವೆಂದರೆ, ನಟ ಸುದೀಪ್‌ ಬೆಂಗಳೂರು, ಕೋಲಾರ ಹಾಗೂ ತುಮಕೂರು ಪ್ರದೇಶದ ವಿತರಣಾ ಹಕ್ಕು ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ ಹಾಗೂ ಮೈಸೂರು ಶೈಲಿಯ ಕನ್ನಡ ಚಿತ್ರದ ಪ್ರಮುಖ ಆಕರ್ಷಣೆ. ಎ.ಆರ್‌.ಹೇಮಂತ್‌ ಸಂಗೀತ ನೀಡಿದ್ದು, ಕೆ.ಎಂ.ವಿಷ್ಣುವರ್ಧನ್‌ ಛಾಯಾಗ್ರಹಣ ನಿಭಾಯಿಸಿದ್ದಾರೆ.

ಮೇಘಾ ಭಾಗವತರ್‌, ಭರತ್‌ ಭಾಗವತರ್‌ ಅವರ ಪುತ್ರಿ ಈ ಚಿತ್ರದಲ್ಲಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇದರೊಂದಿಗೆ ಹೊನ್ನಪ್ಪ ಭಾಗವತರ್‌ ಅವರ ಮೂರನೇ ತಲೆಮಾರು ಕೂಡ ಚಿತ್ರರಂಗಕ್ಕೆ ಪ್ರವೇಶಿಸಿದಂತಾಗಿದೆ. ಶೋಭರಾಜ್‌, ಸತ್ಯಜಿತ್‌, ಚೇತನ್‌, ಸಿದ್ಧಾರ್ಥ್‌, ಧರ್ಮ, ಶಂಕರೇಗೌಡ, ಸುಧಾರಾಣಿ, ಚಿತ್ರಾ ಶೆಣೈ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada