»   » ಚಾಮುಂಡೇಶ್ವರಿಯಲ್ಲಿ ‘ಶಶಿ’ ಮೂಡಿ ಬಂದ!

ಚಾಮುಂಡೇಶ್ವರಿಯಲ್ಲಿ ‘ಶಶಿ’ ಮೂಡಿ ಬಂದ!

Posted By:
Subscribe to Filmibeat Kannada


‘ಗೌಡ್ರು ಮತ್ತು ಸಿದ್ದು ಜಗಳದಲ್ಲಿ ಶಶಿಕುಮಾರ್‌, ಹರಕೆಯ ಕುರಿ. ಅಯ್ಯೋ ಪಾಪ..’

ಮಾಜಿ ಸಂಸದ ಶಶಿಕುಮಾರ್‌, ಚಿತ್ರರಂಗದಲ್ಲೂ ಮಾಜಿಯಾಗುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ, ರಾಜಕೀಯ ರಂಗದಲ್ಲಿ ಮತ್ತೆ ನೆಲೆಕಾಣಲು ಅವರು ನಿರ್ಧರಿಸಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂದು ವಾರಪತ್ರಿಕೆಯಾಂದು ವರದಿ ಮಾಡಿದೆ.

ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರನ್ನು ಶತಗತಾಯ ಸೋಲಿಸಲು, ಮಾಜಿ ಪ್ರಧಾನಿ ದೇವೇಗೌಡ ಅಂಡ್‌ ಸನ್ಸ್‌ ಏನೇನೋ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಬಂಗಾರಪ್ಪನವರ ಸಮಾಜವಾದಿ ಪಕ್ಷದಿಂದ ಶಶಿಕುಮಾರ್‌ರನ್ನು ಸ್ಪರ್ಧಿಸುವಂತೆ ಮಾಡುವುದು ಅವರ ಮುಂದಿನ ಕಾರ್ಯಕ್ರಮ.

ನಾಯಕ ಜನಾಂಗದ ಶಶಿಕುಮಾರ್‌ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಮತಗಳ ವಿಭಜನೆ ಸುಲಭವಾಗುತ್ತದೆ. ಹಿಂದುಳಿದ ವರ್ಗದವರ ಮತಗಳನ್ನು ಒಡೆದು, ಸಿದ್ದರಾಮಯ್ಯ ಅವರಿಗೆ ಅಡ್ಡಗಾಲು ಹಾಕಬಹುದು ಎಂಬುದು ದೇವೇಗೌಡರ ಚಿಂತನೆ ಎನ್ನಲಾಗಿದೆ.

ಒಂದು ಬಾರಿ ಚಿತ್ರ-ದು-ರ್ಗ-ದಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಶಿಕುಮಾರ್‌ ಸ್ಪರ್ಧಿಸಿದ್ದರು. ಜಾಲಪ್ಪ ವಿರುದ್ಧ ಸೋಲು ಅನುಭವಿಸಿದ್ದ ಅವರು, ನಂತರದ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಅಪ್ರಸ್ತುತರಾಗಿದ್ದರು. ಸದ್ಯಕ್ಕೆ ಜೆಡಿಎಸ್‌ನಲ್ಲಿರುವ ಶಶಿಕುಮಾರ್‌, ದೇವೇಗೌಡರ ಅಣತಿಗೆ ಸೈ ಎಂದಿದ್ದಾರಂತೆ.

‘ಗೌಡ್ರು ಮತ್ತು ಸಿದ್ದು ಜಗಳದಲ್ಲಿ ಶಶಿಕುಮಾರ್‌, ಹರಕೆಯ ಕುರಿ. ಅಯ್ಯೋ ಪಾಪ..’ ಎಂದು ಚಾಮುಂಡೇಶ್ವರಿ ಮತದಾರರು ಪಿಸುಗುಟ್ಟುತ್ತಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಈ ಹಿಂದೆ ದೇವೇಗೌಡರ ಗುಂಪು ನಟ ಸುದೀಪ್‌ರ ಬೆನ್ನುಹತ್ತಿತ್ತು. ‘ರಾಜಕೀಯ ನನಗೆ ಸರಿಬರುವುದಿಲ್ಲ’ ಎಂದು ಅವರು ಕೈತೊಳೆದುಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada