»   » ಭಾನುವಾರ ‘ಬೇರು’ ಪ್ರದರ್ಶನ

ಭಾನುವಾರ ‘ಬೇರು’ ಪ್ರದರ್ಶನ

Posted By:
Subscribe to Filmibeat Kannada
  • ಮಲೆನಾಡಿಗ
ಸದಭಿರುಚಿಯ ‘ಬೇರು’ ಚಿತ್ರವನ್ನು ವೀಕ್ಷಿಸುವ ಮತ್ತೊಂದು ಅವಕಾಶವನ್ನು ಈ-ಕವಿ(ಎಲ್ಲ ಕನ್ನಡ ಅಭಿಮಾನಿಗಳ ಅಂತರಾಷ್ಟ್ರೀಯ ವೇದಿಕೆ) ಭಾನುವಾರ(ಡಿ.11) ಕಲ್ಪಿಸಿದೆ.

ನಗರದ ಮಲ್ಲೇಶ್ವರಂನ ಶ್ರೀಗಂಧ ಪ್ರಿವ್ಯೂ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಭಾನುವಾರ ಮಧ್ಯಾಹ್ನ 3ಗಂಟೆಗೆ ಪ್ರದರ್ಶನವಿದೆ. ಅಲ್ಲದೇ ಸಂವಾದ ಕಾರ್ಯಕ್ರಮವೂ ಉಂಟು. ಪ್ರೇಕ್ಷಕರೊಂದಿಗೆ ಸಂವಾದಲ್ಲಿ ಬೇರು ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ, ನಟ ಸುಚೇಂದ್ರ ಪ್ರಸಾದ್‌, ದತ್ತಾತ್ರೇಯ, ವೆಂಕಟರಾವ್‌ ಮತ್ತು ಟಿ.ಎನ್‌.ಸೀತಾರಾಂ ಪಾಲ್ಗೊಳ್ಳಲಿದ್ದಾರೆ.

ಕನ್ನಡದ ಸದಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಆಶಯ ಹೊತ್ತಿರುವ ಈ-ಕವಿ ವೇದಿಕೆ, ಕಳೆದ ನ.13ರಂದು ಬೇರು ಪ್ರದರ್ಶನವನ್ನು ಏರ್ಪಡಿಸಿತ್ತು. ಪ್ರೇಕ್ಷಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಉತ್ತೇಜಿತವಾಗಿರುವ ಈ ಕವಿ ಸಂಸ್ಥೆ , ಪ್ರತಿ ತಿಂಗಳಿಗೊಮ್ಮೆ ಕನ್ನಡದ ಸದಭಿರುಚಿಯ ಚಿತ್ರವೊಂದನ್ನು ಪ್ರದರ್ಶಿಸುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.

ಪ್ರೇಕ್ಷಕರ ಪ್ರತಿಕ್ರಿಯೆ/ಅಭಿಪ್ರಾಯವನ್ನು ಈ-ಕವಿ ವೇದಿಕೆ ಸಂಗ್ರಹಿಸಿ, ಹೆಚ್ಚು ಜನರಿಂದ ಆಯ್ಕೆಯಾದ ಸದಭಿರುಚಿ ಚಿತ್ರವನ್ನು ಮುಂದಿನ ದಿನಗಳಲ್ಲಿ ಪ್ರದರ್ಶಿಸಲಿದೆ.

ಪ್ರದರ್ಶನ ಸ್ಥಳ :

ಶ್ರೀಗಂಧ ಪ್ರಿವ್ಯೂ ಚಿತ್ರ ಮಂದಿರ,
ಲಾವಣ್ಯ ಟವರ್ಸ್‌, 4ನೇ ಮುಖ್ಯರಸ್ತೆ,
18 ನೇ ಅಡ್ಡರಸ್ತೆ, ಬಿ.ಡಬ್ಲ್ಲ್ಯೂ.ಎಸ್‌.ಎಸ್‌.ಬಿ ಸರ್ವಿಸ್‌ ರಸ್ತೆ,
ಮಲ್ಲೇಶ್ವರ, ಬೆಂಗಳೂರು-55.
ದೂರವಾಣಿ : 23560459.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada