»   » ಜೀ ಕನ್ನಡದಲ್ಲಿ ಕ್ರಿಕೆಟ್ ಕುರಿತ ಹಾಸ್ಯ ರಸದೌತಣ

ಜೀ ಕನ್ನಡದಲ್ಲಿ ಕ್ರಿಕೆಟ್ ಕುರಿತ ಹಾಸ್ಯ ರಸದೌತಣ

Subscribe to Filmibeat Kannada

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಈಗ ಹೊಸ ರೂಪದಲ್ಲಿ ವೀಕ್ಷಕರನ್ನು ತಲುಪಲು ತಾಲಿಮು ನಡೆಸುತ್ತಿದೆ. 'ಕಾಮಿಡಿ ಕಿಲಾಡಿಗಳು ಕಾಮಿಡಿ ಕಪ್' ಎಂಬ ಸ್ಪರ್ಧಾ ಸಂಚಿಕೆಯು ಅಕ್ಟೋಬರ್9ರಿಂದ ರಾತ್ರಿ 10 ಗಂಟೆಗೆ ಪ್ರತಿ ಗುರುವಾರ ಮತ್ತು ಶುಕ್ರವಾರ ಪ್ರಸಾರವಾಗುತ್ತಿದೆ.

ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಮೈಸೂರು, ಮಂಗಳೂರು, ಬೆಳಗಾವಿ, ಹಾಸನ, ಹುಬ್ಬಳ್ಳಿ, ಗುಲ್ಬರ್ಗಾ, ಬೆಂಗಳೂರು ಮತ್ತು ದಾವಣಗೆರೆಯಿಂದ ಆಯ್ಕೆಗೊಂಡ ಇಬ್ಬರು ಹಾಸ್ಯ ಕಲಾವಿದರ ಎಂಟು ತಂಡಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಈ ತಂಡಗಳ ನಡುವೆ ನಡುವೆ ನಡೆಯುವ ಸ್ಫರ್ಧೆಯಲ್ಲಿ ಒಂದು ತಂಡವನ್ನು ಕಾಮಿಡಿ ಕಪ್ ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ.

'ಕಾಮೆಡಿ ಕಪ್' ಸ್ಪರ್ಧೆಯ ವಿಶೇಷತೆಯೆಂಬಂತೆ ಕ್ರಿಕೆಟ್‌ನಲ್ಲಿ ಬಳಸುವ ಎಲ್ಲ ಪದಗಳನ್ನು ಈ ಹಾಸ್ಯ ಸ್ಫರ್ಧೆಗೆ ಬಳಸಿಕೊಳ್ಳಲಾಗಿದೆ. ಪ್ರತಿ ಸನ್ನಿವೇಶ ಕೂಡ ಕ್ರಿಕೆಟ್ ಪಂದ್ಯಕ್ಕೆ ಹೋಲಿಕೆಯಿರುತ್ತದೆ. ಸ್ಫರ್ಧೆಯಲ್ಲಿ ಪ್ರದರ್ಶನ ನೀಡುವ ತಂಡಗಳಿಗೆ ಕ್ರಿಕೆಟ್‌ನಲ್ಲಿ ನೀಡುವಂತೆ ರನ್ ರೂಪದಲ್ಲಿ ಅಂಕಗಳನ್ನು ನೀಡಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಮಾಸ್ಟರ್ ಹಿರಣ್ಣಯ್ಯ ಭಾಗವಹಿಸುತ್ತಿದ್ದಾರೆ. ಅಕುಲ್ ಬಾಲಾಜಿ ಮತ್ತು ಅನುಶ್ರೀ ನಿರೂಪಕರಾಗಿದ್ದಾರೆ. ವಿಶೇಷ ಅತಿಥಿಗಳಾಗಿ ದೊಡ್ಡ ಗಣೇಶ್, ಸೋಮಶೇಖರ್ ಶಿರಗುಪ್ಪೆ, ವಿಜಯ್ ಭಾರದ್ವಜ ಹಾಗೂ ಹಾಸ್ಯ ಕಲಾವಿದ ಕರಿಬಸಯ್ಯ, ನಟ ಶಿವಧ್ವಜ್, ಸುಧಾ ನರಸಿಂಹರಾಜು, ದೀಪಕ್ ಮುಂತಾದವರು ಭಾಗವಹಿಸಲಿದ್ದಾರೆ.

ಕ್ರಿಕೆಟ್ ಪದಗಳನ್ನು ಹಾಸ್ಯ ಕಾರ್ಯಕ್ರಮವೊಂದು ಬಳಸಿಕೊಂಡು ಸ್ಪರ್ಧೆ ನಡೆಸುತ್ತಿರುವುದು ಕಿರುತೆರೆಯ ಇತಿಹಾಸದಲ್ಲೇ ಪ್ರಥಮವಾಗಿದೆ. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಹೊಸ ಅಭಿರುಚಿಯ ಕಾರ್ಯಕ್ರಮಕ್ಕೆ ನಾಂದಿ ಹಾಡಿದೆ ಎಂದು ಜೀ ಕನ್ನಡ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಕಿರುತೆರೆ)

ಶತಕ ಪೂರೈಸಿದ ಜೀ ಕನ್ನಡದ ಕಾಮಿಡಿ ಕಿಲಾಡಿಗಳು
ಜೀ ಕನ್ನಡದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಫೈನಲ್
ಜೋಗಿ, ವಿನುಬಳಂಜ , ಆನಂದೂರರ ಜೋಗುಳ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada