»   » ಈ ಟೆಕ್ಕಿಗಳು 10 PM ಗೆ ಏನ್ ಮಾಡಿದ್ರೂ ನೋಡಿ

ಈ ಟೆಕ್ಕಿಗಳು 10 PM ಗೆ ಏನ್ ಮಾಡಿದ್ರೂ ನೋಡಿ

Posted By:
Subscribe to Filmibeat Kannada

ಗಾಂಧಿನಗರದಲ್ಲಿ 'ರಂಗಿತರಂಗ' ದಂತಹ ಒಂದು ಹೊಸಬರ ಮೂವಿ ಹಿಟ್ ಕಂಡಿದ್ದೇ ತಡ, ಒಂದೊಂದಾಗಿ ಹೊಸಬರ ಚಿತ್ರಗಳು ತೆರೆ ಮೇಲೆ ಬರಲು ಕಾಯ್ತಾ ಇದೆ.

ಅಂದಹಾಗೆ ಇದೀಗ ಇನ್ನೊಂದು ಹೊಸಬರ ಕಿರು ಚಿತ್ರವೊಂದು '10 ಪಿ.ಎಂ' ಎನ್ನುವ ಡಿಫರೆಂಟ್ ಟೈಟಲ್ ನೊಂದಿಗೆ ಸದ್ದಿಲ್ಲದೇ ಚಿತ್ರದ ಕಾರ್ಯ ಮುಗಿಸಿದೆ. ಇದೀಗ ಚಿತ್ರ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಸಕತ್ ರೆಸ್ಪಾನ್ಸ್ ಗಳಿಸುತ್ತಿದೆ.

ಹೊಸಬರ ಪ್ರಯತ್ನದಲ್ಲಿ ಲೋಕಲ್ ರೀಲ್ಸ್ ಮತ್ತು ಅಚ್ಕನ್ನಡ ಟಾಕೀಸ್ ಅರ್ಪಿಸುವ ಸಂದೀಪ್ ಕೆ.ಎಸ್ ಆಕ್ಷನ್-ಕಟ್ ಹೇಳಿರುವ '10 ಪಿ.ಎಂ' ಕಿರು ಚಿತ್ರದ ವಿಡಿಯೋ ಇಲ್ಲಿದೆ ನೋಡಿ...

ಬೆಂಗಳೂರಿನ ಟೆಕ್ಕಿಗಳು ಸೇರಿ ಮಾಡಿರುವ '10 ಪಿ.ಎಂ' ಎನ್ನುವ ಹಾರರ್ ಕಿರು ಚಿತ್ರವೊಂದು ಸದ್ದಿಲ್ಲದೇ ಗಾಂಧಿನಗರಕ್ಕೆ ಕಾಲಿಟ್ಟಿದೆ. ಚಿತ್ರದಲ್ಲಿ ಎಲ್ಲಾ ಹೊಸಬರ ತಂಡವೇ ಇರುವುದರಿಂದ ಪ್ರಥಮ ಪ್ರಯತ್ನದಲ್ಲಿ ಕೊಂಚ ಎಡವಿದರೂ ವೀಕ್ಷಕರನ್ನು ಕುತೂಹಲದೆಡೆ ಕೊಂಡೊಯ್ಯುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಮೂವರು ಯುವಕರು ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಹುಡುಗಿಯೊಬ್ಬಳಿಗೆ ಆಕ್ಸಿಡೆಂಟ್ ಮಾಡಿ ಪರಾರಿಯಾಗುತ್ತಾರೆ. ಈ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹುಡುಗಿ ತದನಂತರ ಆ ಮೂವರು ಯುವಕರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದು ಒಟ್ಟಾರೆ ಚಿತ್ರದ ಹೂರಣ.

10PM is a Kannada Comedy-Horror short film

ಚಿತ್ರ ಪ್ರಾರಂಭವಾದ ಮೊದಲ 4 ನಿಮಿಷಗಳಲ್ಲಿ ಕುಡುಕರ ಸಂಭಾಷಣೆ ಇದ್ದು, ಸಾಮಾನ್ಯ ಪ್ರೇಕ್ಷಕರಿಗೆ ತುಂಬಾ ಬೋರ್ ಆದಂತೆ ಅನಿಸಿದರೆ ನಂತರ ಕಥೆ ಕುತೂಹಲ ಮೂಡಿಸಿ ಸರಾಗವಾಗಿ ಸಾಗುತ್ತದೆ.

ಚಿತ್ರದಲ್ಲಿ ಎ.ಆರ್ ಅರ್ಜುನ್ ಅವರು ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದು, ಆ ಸಸ್ಪೆನ್ಸ್ ದೃಶ್ಯವನ್ನು ಇನ್ನೂ 20 ನಿಮಿಷಗಳ ತನಕ ಮುಂದುವರಿಸಬಹುದಿತ್ತು ಅನ್ನೋದು ವೀಕ್ಷಕರ ಅಭಿಪ್ರಾಯ. ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಎಡಿಟಿಂಗ್ ಸಖತ್ ಹೈಲೈಟ್ ಆಗುತ್ತೆ.

ಇನ್ನೂ ಗೌತಮ್ ಶಶಿಧರ್, ಎ.ಆರ್.ಅರ್ಜುನ್, ಸೂರಜ್, ಮುಂತಾದವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗೌತಮ್ ಶಶಿಧರ್, ಎ.ಆರ್.ಅರ್ಜುನ್ ಡೈಲಾಗ್ಸ್, ನಿಖಿಲ್ ಪ್ರೇಮ್ ಸಿನಿಮಾಟೋಗ್ರಫಿ, ಕಿಶೋರ್ ಪ್ರಕಾಶ್ ಹಾಗೂ ಸುವರ್ಣ ಎನ್ ಅವರ ಡಬ್ಬಿಂಗ್, ರಾಯಲ್ಟಿ ಫ್ರೀ ಅವರ ಮ್ಯೂಸಿಕ್ 10 ಪಿ.ಎಮ್ ಗಿದೆ.

English summary
10PM is a Kannada Comedy-Horror short film. Three friends are having a booze party. Things starts to get weird when the clock ticks 10PM. To know more please watch the short film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada