twitter
    For Quick Alerts
    ALLOW NOTIFICATIONS  
    For Daily Alerts

    10ನೇ ಬೆಂಗಳೂರು ಚಲನಚಿತ್ರೋತ್ಸದ ಲಾಂಛನ ಬಿಡುಗಡೆ ಮಾಡಿದ ಸಿಎಂ

    By Bharath Kumar
    |

    10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದ ದಿನಾಂಕ ನಿಗದಿಯಾಗಿದ್ದು, ಚಲನ ಚಿತ್ರೋತ್ಸವದ ಲಾಂಛನವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಡಿಸೆಂಬರ್ 11) ಬಿಡುಗಡೆ ಮಾಡಿದರು.

    ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಲನ ಈ ಬಾರಿಯ ಚಿತ್ರೋತ್ಸವದ ಲಾಂಛನವನ್ನ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.

    ಬೆಂಗಳೂರಿನಲ್ಲಿ ನಡೆಯಲಿದೆ ನೀರಿನ ಮಹತ್ವ ಸಾರುವ ಚಲನಚಿತ್ರೋತ್ಸವಬೆಂಗಳೂರಿನಲ್ಲಿ ನಡೆಯಲಿದೆ ನೀರಿನ ಮಹತ್ವ ಸಾರುವ ಚಲನಚಿತ್ರೋತ್ಸವ

    10th bangalore international film festival logo released

    ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ 2018ರ ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ನಡೆಯಲಿದ್ದು, ಕಳೆದ ವರ್ಷದಂತೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕ ಕಾಲದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

    ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯದ ಆಶಯದ ಮೇಲೆ ಈ ಬಾರಿಯ ಚಲನ ಚಿತ್ರೋತ್ಸವ ನಡೆಯಲಿದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ವಿಧಾನಸೌಧ ಮುಂಭಾಗ ನಡೆಯಲಿದ್ದು, ಇದೇ ವೇಳೆ ಚಲನಚಿತ್ರ ರಂಗದಲ್ಲಿ ಜೀವಮಾನ ಸಾಧನೆಗಾಗಿ ರೂ.10ಲಕ್ಷ ನಗದು ಒಳಗೊಂಡ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

    10th bangalore international film festival logo released

    ಈ ವೇಳೆ ಸಚಿವ ಟಿಬಿ ಜಯಚಂದ್ರ, ರೋಷನ್ ಬೇಗ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು, ನಟಿ ಜಯಮಾಲ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    English summary
    10th bangalore international film festival logo released by Cm Siddaramaiah today (december 11).
    Monday, December 11, 2017, 20:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X