twitter
    For Quick Alerts
    ALLOW NOTIFICATIONS  
    For Daily Alerts

    10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭರ್ಜರಿ ತಯಾರಿ

    By Bharath Kumar
    |

    10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 22ರಿಂದ ಆರಂಭವಾಗಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ವಿವಿಧ ದೇಶಗಳ ಸುಮಾರು 150ಕ್ಕೂ ಅಧಿಕ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದ್ದು, ಮಾರ್ಚ್ 1ರ ವರೆಗೂ ಚಿತ್ರೋತ್ಸವ ನಡೆಲಿದೆ.

    ಕಳೆದ ವರ್ಷದಂತೆ ಈ ವರ್ಷವೂ ವಿಧಾನಸೌಧದ ಮುಂಭಾಗದಲ್ಲಿ ಚಲನಚಿತ್ರೊತ್ಸವದ ಉದ್ಘಾಟನೆ ಸಮಾರಂಭ ನಡೆಯಲಿದೆ. ವಿಶೇಷ ಅಂದ್ರೆ, ಸಮಾರೋಪ ಸಮಾರಂಭವೂ ಕೂಡ ಬೆಂಗಳೂರಿನಲ್ಲೇ ನಡೆಸಲು ಉದ್ದೇಶಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

    10th Bengaluru International Film festival starts from february

    ಜಗತ್ತಿನ ನಾನಾ ಭಾಷೆಗಳ 800ಕ್ಕೂ ಅಧಿಕ ಚಲನಚಿತ್ರಗಳನ್ನು ಪ್ರದರ್ಶನಕ್ಕೆ ಮುಂದೆ ಬಂದಿದೆ. ಯುರೋಪಿನಿಂದ 400, ಲ್ಯಾಟಿನ್ ಅಮೆರಿಕದಿಂದ 150, ಅಮೆರಿಕ ಹಾಗೂ ಕೆನಡಾದಿಂದ 45 , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಿಂದ 5 , ಆಫ್ರಿಕಾದಿಂದ30 , ಏಷ್ಯಾಖಂಡದ ರಾಷ್ಟ್ರಗಳಿಂದ 170 ಹಾಗೂ ಆಸ್ಕರ್ ಪ್ರಶಸ್ತಿಗೆ ಸ್ಪರ್ಧೆಯೊಡ್ಡುವ 53 ಚಿತ್ರಗಳು ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಆಸಕ್ತಿ ತೋರಿದೆ.

    10ನೇ ಬೆಂಗಳೂರು ಚಲನಚಿತ್ರೋತ್ಸದ ಲಾಂಛನ ಬಿಡುಗಡೆ ಮಾಡಿದ ಸಿಎಂ10ನೇ ಬೆಂಗಳೂರು ಚಲನಚಿತ್ರೋತ್ಸದ ಲಾಂಛನ ಬಿಡುಗಡೆ ಮಾಡಿದ ಸಿಎಂ

    ರಾಜ್ಯ ಸರ್ಕಾರದಿಂದ 10 ಕೋಟಿ ರೂ. ನೆರವು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಳೆದ ವರ್ಷ ಎಂಟು ಕೋಟಿ ರೂ. ನೀಡಿದ್ದ ರಾಜ್ಯ ಸರ್ಕಾರ ಈ ವರ್ಷ 10 ಕೋಟಿ ರೂ. ನೆರವು ನೀಡಲು ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಜಿಎಸ್ ಟಿ ಯ ಶೇ.18 ರಷ್ಟು ತೆರಿಗೆಯಲ್ಲಿ ರಾಜ್ಯದ ಪಾಲಿನ ಶೇ.೯ರಷ್ಟನ್ನು ಉದ್ಯಮಕ್ಕೆ ಹಿಂದಿರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನ 11 ಚಿತ್ರಮಂದಿರಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇದಲ್ಲದೆ ಮಂತ್ರಿ ಮಾಲ್ ನಲ್ಲೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    English summary
    10 th edition of Bengaluru International Film festival will be held from February 22 to March 1. Around 150 movies of National and International will be screened during the festival. Already more than 800 movies have taken entry for the festival. 10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 22 ರಿಂದ ಮಾರ್ಚ್ 1 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
    Wednesday, January 3, 2018, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X