ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು
ಡಾ.ರಾಜ್ ಕುಮಾರ್....ಕನ್ನಡ ಕಲಾಲೋಕ ಎಂದಿಗೂ ಮರೆಯದ ಹೆಸರು.
ಕನ್ನಡ ಚಿತ್ರ ಜಗತ್ತಿನ ದಂತಕಥೆ, ಕರುನಾಡಿನಾದ್ಯಂತ ಮನೆಮನಗಳಲ್ಲಿ ಸದಾ ಸರ್ವಕಾಲ ವಿರಾಜಮಾನಗೊಂಡಿರುವ ಕಲಾದೈವ, ಶಿಸ್ತಿಗೆ ಸರಳತೆಗೆ ಮತ್ತೊಂದು ಹೆಸರೇ ಡಾ.ರಾಜ್ ಕುಮಾರ್. ಈ ಅದಮ್ಯ ಚೇತನ ಇಂದಿಗೂ ಎಂದೆಂದಿಗೂ ಅಜರಾಮರ.
ಪ್ರತಿಯೊಂದು ಚಿತ್ರದಲ್ಲೂ ಮಾದರಿಯಾಗಿ ನಿಲ್ಲುವ ಡಾ.ರಾಜ್, 'ಕಸ್ತೂರಿ ನಿವಾಸ' ಸಿನಿಮಾದ ತ್ಯಾಗಿ ಆಗಿ ವೀರ'ಬಬ್ರುವಾಹನ'ನಾಗಿ ಕಲಾಭಿಮಾನಿಗಳ ಮನಗೆದ್ದವ್ರು. [ಡಾ.ರಾಜ್ ಅಸುನೀಗಿದ ದಿನ ಏನಾಗಿತ್ತು : ಅಭಿಮಾನಿ ಕಂಡಂತೆ]

1929, ಏಪ್ರಿಲ್ 24 ರಂದು ಜನಿಸಿದ ಮುತ್ತುರಾಜ್, ಐದು ದಶಕಗಳ ಕಲಾಸೇವೆಗೆ ಅಸಂಖ್ಯ ಪ್ರಶಸ್ತಿ ಮತ್ತು ಅಭಿಮಾನಿ ದೇವರುಗಳ ಅನಂತ ಪ್ರೀತಿಯನ್ನು ಪಡೆದವರು. [ಡಾ.ರಾಜ್ ಕುಮಾರ್ ಅವರು ತೀರಿಕೊಂಡ ಆ ಕ್ಷಣ...]
2006, ಏಪ್ರಿಲ್ 12 ರಂದು ರಾಜ್ ಕುಮಾರ್ ನಮ್ಮನಗಲಿದ್ರು. ಆ ದಿನ ಇಡೀ ಕರ್ನಾಟಕ ಜರ್ಜರಿತವಾಗಿತ್ತು. ಕನ್ನಡ ಚಿತ್ರೋದ್ಯಮ ಇನ್ನೂ ಆ ಗಾಯದಿಂದ ಹೊರಬಂದಿಲ್ಲ.
ಡಾ.ರಾಜ್ ಕುಮಾರ್ ರವರ ಸವಿನೆನಪಿನಲ್ಲಿ ಇದೋ ನಿಮಗಾಗಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಅವರ ಅಪರೂಪದ ಭಾವಚಿತ್ರಗಳ ಗ್ಯಾಲರಿ.... ಕೆಳಗಿರುವ ಒಂದೊಂದೇ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....
ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು
ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು


Click it and Unblock the Notifications











