»   » ಇಂದಿನಿಂದ ಶುರು ಆಗಲಿದೆ '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'!

ಇಂದಿನಿಂದ ಶುರು ಆಗಲಿದೆ '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'!

Posted By:
Subscribe to Filmibeat Kannada

'10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ' ಇಂದಿನಿಂದ ಶುರು ಆಗಲಿದೆ. ಇಂದು ವಿಧಾನ ಸೌಧದ ಪೂರ್ವ ದ್ವಾರದ ಬಳಿ ಅದ್ದೂರಿಯಾದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಶುರು ಆಗಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ನಟ ಶಿವರಾಜ್ ಕುಮಾರ್, ದರ್ಶನ್, ಸುದೀಪ್ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದಾರೆ. ಮುಖ್ಯ ಅತಿಥಿಯಾಗಳಾಗಿ ಬಾಲಿವುಡ್ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ, ಇರಾನಿಯನ್ ಚಿತ್ರ ನಟಿ ಫತೇಮೇ ಮೋಟಮೆಡ್ ಆರ್ಯ, ಫ್ರೆಂಚ್ ಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ ಮಾರ್ಕ್ ಭಾಷೆಟ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಇಂದು ಉದ್ಘಾಟನ ಚಿತ್ರವಾಗಿ ಇಟಲಿ ಭಾಷೆಯ 'ಇಟ್ಸ್ ದಿ ಲಾ' ಸಿನಿಮಾ ಪ್ರದರ್ಶನ ಆಗಲಿದೆ. ನಾಳೆಯಿಂದ (ಫೆಬ್ರವರಿ 22) ಮಾರ್ಚ್ 1ರ ವರೆಗೆ ಚಿತ್ರ ಪ್ರದರ್ಶನ ನಡೆಯಲಿದೆ. ರಾಜಾಜಿನಗರದ ಒರಿಯನ್ ಮಾಲ್ ನಲ್ಲಿ ಸಿನಿಮಾ ಶೋ ಆಯೋಜಿಸಲಾಗಿದೆ.

10th edition of bengaluru international film festival begins on Today.

ಅಂತರಾಷ್ಟ್ರೀಯ ಸಿನಿಮಾ ವಿಭಾಗ, ಏಷ್ಯನ್ ಸಿನಿಮಾ ವಿಭಾಗ, ಕನ್ನಡ ಸಿನಿಮಾ ವಿಭಾಗ ಸಿನಿಮಾ, ಕನ್ನಡ ಮನರಂಜನೆ ವಿಭಾಗ ಈ ರೀತಿಯ ಸಿನಿಮಾಗಳ ಕ್ಯಾಟಗಾರಿಯಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. 'ಲಾಸ್ಟ್ ಚೈಲ್ಡ್' ಎಂಬ ಕೋರಿಯನ್ ಚಿತ್ರದೊಂದಿಗೆ ಈ ಬಾರಿಯ ಚಿತ್ರ ಪ್ರದರ್ಶನ ಅಂತ್ಯವಾಗಲಿದೆ.

English summary
10th edition of bengaluru international film festival begins on Today. Rakeysh Omprakash Mehra, actor Fatemeh Motamed Arya, and producer and cinematographer Marc Baschet will be chief guests.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada