ಆಟೋ ರಾಜ ಪಾತ್ರಕ್ಕೆ ನ್ಯಾಯ ಸಲ್ಲಿಸುವೆ: ಅಜಯ್

<ul id="pagination-digg"><li class="previous"><a href="/news/11-audience-selection-ajay-rao-autoraja-aid0172.html">« Previous</a>

Ajay Rao
"ನಾನು ಮೊದಲೇ ಶಂಕರ್ ನಾಗ್ ಅಪ್ಪಟ ಅಭಿಮಾನಿ. ಅವರ ಎಲ್ಲಾ ಚಿತ್ರಗಳನ್ನು ನೋಡಿ, ಅನುಕರಿಸಲೂ ಯತ್ನಿಸಿದವನು. ತೆರೆಯ ಮುಂದೆ ಹಾಗೂ ಹಿಂದೆ ಶಂಕರಣ್ಣ ಮಾಡಿದ್ದ ಕೆಲಸಗಳನ್ನು ಮೆಚ್ಚಿಕೊಂಡವನು. ಹೀಗಿರುವಾಗ ಆ ಪಾತ್ರ ಮಾಡಲು ಸಾಕಷ್ಟು ಪೂರ್ವ ತಯಾರಿ ಬೇಕು.

ಅದಕ್ಕಾಗಿ ಈಗಲೇ ನಾನು ಅಧ್ಯಯನ ಶುರು ಮಾಡಿಕೊಂಡಿದ್ದೇನೆ. ಶಂಕರ್ ನಾಗ್ ಹೇಗಿದ್ದರು ಅನ್ನೋದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ಅವರ ಜತೆ ನಟಿಸಿದವರನ್ನು ಭೇಟಿಯಾಗುವ ಗುರಿಯೂ ಇದೆ. ಶಂಕರ್ ಸವಾಲಿನ ಪಾತ್ರ ಮಾಡಿ ಆ ಪಾತ್ರದಿಂದ ಜನರು ಸ್ಫೂರ್ತಿ ಪಡೆಯಬೇಕೆಂಬ ಬಯಕೆ ನನಗಿದೆ" ಎಂದಿದ್ದಾರೆ ಅಜಯ್.

"ನಾನು ಬಣ್ಣದ ಲೋಕದಲ್ಲಿ ಹತ್ತು ವರ್ಷಗಳನ್ನು ಪೂರೈಸಿದ್ದೇನೆ. ಎಕ್ಸ್‌ಕ್ಯೂಸ್ ಮಿ ಚಿತ್ರದಿಂದ ಆರಂಭವಾದ ಸಿನಿ ಬದುಕು ಅಟೋ ರಾಜನವರೆಗೆ ಬಂದಿದೆ. ಇದು ನನಗೇ ಅಚ್ಚರಿ. ಇಷ್ಟು ವರ್ಷಗಳ ಕಾಲ ಮಾಡಿದ್ದಕ್ಕಿಂತ ಮುಂದೆ ಸಾಧಿಸುವುದು ಬಹಳಷ್ಟಿದೆ" ಎಂದಿದ್ದಾರೆ.

ಸ್ಯಾನ್ ವಿಷನ್ಸ್ ಕಂಪನಿ ನಿರ್ಮಿಸುತ್ತಿರುವ 'ಆಟೋ ರಾಜ' ಚಿತ್ರ ಮುಂದಿನ ವರ್ಷ (2012)ರ ಫೆಬ್ರವರಿ ಹೊತ್ತಿಗೆ ಸೆಟ್ಟೇರಲಿದೆ. ನಾಯಕಿ ಸೇರಿದಂತೆ ಇತರ ಪಾತ್ರಗಳ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕು. ಅಜಯ್ ಹಾಗೂ ಶಂಕರ್ ನಾಗ್ ಅಭಿಮಾನಿಗಳಿಗೆ ಈಗಲೇ ಪುಳಕ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/11-audience-selection-ajay-rao-autoraja-aid0172.html">« Previous</a>

More from Filmibeat

English summary
Audience Selected Ajay Rao as Hero of the upcoming movie Auto raja. Ajay also accepted this and told he will perform good in this movie as audience expectations.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X