ಸಕುಟುಂಬ ಸಪರಿವಾರ ಸಮೇತ ತಿರುಪತಿಗೆ ದರ್ಶನ್

By Rajendra

Actor Darshan visits Tirupati (img courtesy Chitraloka)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಕುಟುಂಬ ಸಪರಿವಾರ ಸಮೇತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅವರು ಬುಧವಾರ (ನ.9) ರಾತ್ರಿ ಬೆಂಗಳೂರಿಗೆ ಹಿಂತಿರುಗಿದರು. ತಿರುಪತಿ ತಿಮ್ಮಪ್ಪನಿಗೆ ತಮ್ಮ ಹಾಗೂ ತಮ್ಮ ಮಗ ವಿನೀಶ್‌ನ ಮುಡಿ ಸಮರ್ಪಿಸಿ ಹೊಸ ಉತ್ಸಾಹದೊಂದಿಗೆ ಮರಳಿದ್ದಾರೆ.

ಮಂಗಳವಾರ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮಗ ವಿನೇಶ್ ಜೊತೆ ತಿರುಮಲ ತಿರುಪತಿಗೆ ಭೇಟಿ ನೀಡಿದ್ದರು. ಆದಷ್ಟು ಬೇಗ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಪ್ಪ ಎಂದು ತಿಮ್ಮಪ್ಪನಿಗೆ ದರ್ಶನ್ ಹರಕೆ ಹೊತ್ತಿದ್ದರು ಎನ್ನಿಸುತ್ತದೆ. ತಿಮ್ಮಪನ ಕೃಪೆಯೋ ಏನೋ ಅವರ ಸಂಸಾರ ತಾಪತ್ರಯಗಳು ಬಹುತೇಕ ಬಗೆಹರಿದಿವೆ. ಈಗ ದರ್ಶನ್ ಹ್ಯಾಪಿಯಾಗಿದ್ದು ತಮ್ಮ ಮುಂದಿನ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

ಮತ್ತೊಂದು ವಿಶೇಷ ಎಂದರೆ ಶುಕ್ರವಾರ (ನ.11) ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬ. ರಾಜರಾಜೇಶ್ವರಿ ನಗರದ ಅವರ ಮನೆಯಲ್ಲಿ ಇಂದು ಹಬ್ಬದ ಸಂಭ್ರಮ. ಜೊತೆಗೆ ದರ್ಶನ್ ಕೂಡ 'ಚಿಂಗಾರಿ' ರೆಕಾರ್ಡಿಂ‌ಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಡೆಸೆಂಬರ್ 12ರಿಂದ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರೀಕರಣವೂ ಆರಂಭವಾಗಲಿದೆ. (ಕೃಪೆ: ಚಿತ್ರಲೋಕ ಡಾಟ್ ಕಾಂ)

More from Filmibeat

English summary
Kannada actor Darshan and his family members visit Tirumala Tirupati on Tuesday (Nov 8). They returned to Banglore on Wednesday night. Darshan and his son Vineeth had tonsured their head during this occasion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X